»   » ಕನಸಿನ ಕನ್ಯೆ ಹೇಮಾ ಮಾಲಿನಿಗೆ ಗೌರವ ಡಾಕ್ಟರೇಟ್

ಕನಸಿನ ಕನ್ಯೆ ಹೇಮಾ ಮಾಲಿನಿಗೆ ಗೌರವ ಡಾಕ್ಟರೇಟ್

Posted By:
Subscribe to Filmibeat Kannada
ಕನಸಿನ ಕನ್ಯೆ ಹೇಮಾ ಮಾಲಿನಿಗೆ ಈಗ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದಾರೆ. ರಾಜಸ್ತಾನದ ಸಿಂಘಾನಿಯಾ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಹೀಗಾಗುತ್ತದೆ ಎಂದು ತಾನು ಕನಸು ಮನಸಿನಲ್ಲೂ ಊಹಿಸಿರಲಿಲ್ಲ ಎಂದಿದ್ದಾರೆ.

ತನಗೆ ಒಂದಲ್ಲ ಒಂದು ದಿನ ಡಾಕ್ಟರೇಟ್ ಪದವಿ ಸಿಗುತ್ತದೆ ಎಂದುಕೊಂಡಿರಲಿಲ್ಲ ಎಂದು ಕನಸಿನ ಕನ್ಯೆ ಹೇಮಾ ಮಾಲಿನಿ ಸಖೇದಾಶ್ಚರ್ಯ ವ್ಯಕ್ತಪಡಿಸಿದ್ದಾರೆ. ತೀರಾ ಇತ್ತೀಚೆಗಷ್ಟೇ ಹೇಮಾ ಮಾಲಿನಿ ಅವರು ನಾರ್ವೇಜಿಯನ್ ಸರ್ಕಾರದ ಅಂಚೆಚೀಟಿ ಗೌರವಕ್ಕೆ ಪಾತ್ರರಾಗಿದ್ದರು.

"ನೀವು ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದೀರಿ ಎಂದು ವಿಶ್ವವಿದ್ಯಾಲಯದಿಂದ ಕರೆ ಬಂದಾಗ ನನಗೆ ಆಶ್ಚರ್ಯವಾಯಿತು. ತಾವು ಚಿತ್ರರಂಗದಲ್ಲಿ ಸಲ್ಲಿಸಿದ ಸೇವೆ ಇತರೆ ಕ್ಷೇತ್ರದಲ್ಲಿನ ವ್ಯಕ್ತಿಗಳನ್ನು ಪ್ರಭಾವಿಸಿದೆ ಎಂದು ಅವರು ಹೇಳಿದಾಗ ನಿಜಕ್ಕೂ ಅಚ್ಚರಿಯಾಯಿತು. ಹಾಂ ನಾನೂ ಏನೋ ಅಲ್ಪ ಸ್ವಲ್ಪ ಮಾಡಿದ್ದೀನಿ ಅನ್ನಿಸಿತು" ಎಂದಿದ್ದಾರೆ.

ಗುರುವಾರ (ಸೆ.27) ಹೇಮಾ ಮಾಲಿನಿ ರಾಜಸ್ತಾನದಲ್ಲಿರುವ ಸಿಂಘಾನಿಯಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಪ್ರಶಸ್ತಿ ಅವರ ಕೈಸೇರಿದೆಯೋ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೂ ಹೇಮಾ ಅವರನ್ನು ಡಾ. ಹೇಮಾ ಮಾಲಿನಿ ಎಂದು ಕರೆಯುವುದರಲ್ಲಿ ಅಡ್ಡಿಯಿಲ್ಲ. (ಏಜೆನ್ಸೀಸ್)

English summary
Dream Girl Hema Malini conferred with a honorory doctorate on Thursday (September 27) at the Singhania University , Udaipur. Hema would be at the Singhania University in Rajasthan on Thursday to receive the honour.
Please Wait while comments are loading...