»   » ಆ ಕಾಲದ ಎವರ್ ಗ್ರೀನ್ 'ಹಾಟ್' ಸುಂದರಿಯರು

ಆ ಕಾಲದ ಎವರ್ ಗ್ರೀನ್ 'ಹಾಟ್' ಸುಂದರಿಯರು

Posted By:
Subscribe to Filmibeat Kannada

ಕಪ್ಪು ಬಿಳಿಪು ಚಿತ್ರದ ಕಾಲದಿಂದಲೂ ಹಿಂದಿ ಚಿತ್ರರಂಗದಲ್ಲಿ ಬಣ್ಣ ಬಣ್ಣದ ಬೆಡಗಿಯರಿಗೆ ಹೆಸರುವಾಸಿ. ಬೆಳ್ಳಿತೆರೆಯ ಮೇಲೆ ಚೆಂದವಾಗಿ ಕಾಣುವುದು ನಾಯಕ ನಟಿಯರ ಪ್ರಮುಖ ಆದ್ಯತೆಯಾಗಿತ್ತು. ಮೊದಲೆಲ್ಲ ಮಾದಕತೆಯನ್ನು ನಟಿಮಣಿಯರ ಹಾವಭಾವ, ಕಣ್ಣಿನ ಕುಡಿನೋಟದಲ್ಲಿ ಕಾಣಬೇಕಿತ್ತು.

ಅದರೆ, ವರ್ಷಗಳು ಉರುಳಿದಂತೆ ಮಾದಕತೆ ಮೈಮಾಟದ ಅರ್ಥ ಬದಲಾಗುತ್ತಾ ಹೋಗಿ ತುಂಡುಡುಗೆ ಬಗೆ ಬಗೆ ವಿನ್ಯಾಸದ ಉಡುಪು ಧರಿಸುವುದು ಪ್ರೇಕ್ಷಕರನ್ನು ರಂಜಿಸಿತು.

ಜೀನತ್ ಅಮಾನ್, ಹೆಲೆನ್, ರೇಖಾ, ಮಧುಬಾಲಾ, ಶರ್ಮಿಳಾ ಹಾಟ್ ಆಗಿ ಕಾಣಿಸಿದ್ದು ಒಂದೆಡೆಯಾದರೆ ಇನ್ನೊಂದೆಡೆ ರಾಖಿ, ಡಿಂಪಲ್, ಮಂದಾಕಿನಿ ರೂಪ ಲಾವಣ್ಯದ ದರ್ಶನ ಮತ್ತೊಂದು ರೀತಿಯಲ್ಲಿ ಆಗಿ ಸಿನಿ ರಸಿಕರನ್ನು ತಣಿಸಿತ್ತು. ಜಲಪಾತದಡಿಯಲ್ಲಿ ಪಾರದರ್ಶಕ ಬಿಳಿ ಬಟ್ಟೆಯುಟ್ಟುಕೊಂಡು ಸ್ನಾನ ಮಾಡುವ ಮಂದಾಕಿನಿ ಚಿತ್ರ ಅಂದಿನ ಪಡ್ಡೆಗಳ ನಿದ್ದೆಗೆಡಿಸಿತ್ತು.

ಈ ಕಾಲದ ಬೆಡಗಿಯರಿಗೆ ಮೈಮೇಲೆ ಬಟ್ಟೆ ನಿಲ್ಲುವುದೇ ಕಷ್ಟವಾಗಿದ್ದು, ಗ್ಲಾಮರ್ ಎಂದರೆ ಬಟ್ಟೆ ಕಳಚುವುದು ಎಂಬರ್ಥ ಬಂದಿರುವ ದಿನಗಳಲ್ಲಿ ಆ ದಿನಗಳಲ್ಲಿ ಕಾಡುವ ಸೌಂದರ್ಯ ಹೊಂದಿದ್ದ ಬೆಡಗಿಯರ ಝಲಕ್ ಇಲ್ಲಿದೆ.. ರೆಟ್ರೋ ಬ್ಯೂಟಿಗಳ ನೋಡಿ ಆನಂದಿಸಿ

ಡಿಂಪಲ್ ಕಪಾಡಿಯಾ

ಬಾಬ್ಬಿ ಚಿತ್ರದ ತುಂಡು ಲಂಗದ ಹುಡುಗಿ ಡಿಂಪಲ್, ಚಿತ್ತ ಚೋರಿಯಾಗಿ ಬಾಲಿವುಡ್ ನಲ್ಲಿ ಬೆಳದಳು

ಹೆಲೆನ್

ಬಾಲಿವುಡ್ ನ ಇಂದಿನ ಐಟಂ ಗರ್ಲ್ ಗಳಿಗೆ ಸೆಡ್ಡು ಹೊಡೆಯುವಂಥ ಕುಣಿತ ಹಾಕುತ್ತಿದ್ದ ನಂ.1 ಕ್ಲಬ್ ಡಾನ್ಸರ್

ಮಧುಬಾಲಾ

ವರ್ಣನೆ ನಿಲುಕದ ಪ್ರತಿಭೆ ಹಾಗೂ ಸೌಂದರ್ಯವತಿಯಾಗಿದ್ದ ಮಧು, ಹಲವು ನಾಯಕರ ನಿದ್ದೆ ಕದ್ದ ಕಳ್ಳಿ

ಮಂದಾಕಿನಿ

ರಾಮ್ ತೇರಿ ಗಂಗಾ ಮೈಲಿ ಚಿತ್ರದಲ್ಲಿ ಮಂದಾಕಿನಿ ಕಾಣಿಸಿದ್ದು ಹೀಗೆ

ನರ್ಗಿಸ್

ರಾಜ್ ಕಪೂರ್ ಚಿತ್ರಗಳಲ್ಲಿ ಹೆಚ್ಚಿನ ಕಾಣಿಸಿದ ಕಪ್ಪುಬಿಳುಪಿನ ಕಾಲದ ಸುಂದರಿ

ರಾಖಿ

ಸ್ಥೂಲಕಾಯದ ರಾಖಿ ಕೊನೆಗೂ ಮಾದಕತೆಗೆ ಒಗ್ಗಿಕೊಂಡು ಹಾಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು ಹೀಗೆ

ರೇಖಾ

ಕೃಷ್ಣ ಸುಂದರಿ ರೇಖಾ ಬಾಲಿವುಡ್ ನ ಎವರ್ ಗ್ರೀನ್ ಮಾದಕ ನಟಿ

ಸಾರಿಕಾ

ಕಮಲ್ ಹಾಸನ್ ಗೆಳತಿಯಾಗಿದ್ದ ಬೆಡಗಿ

ಶರ್ಮಿಳಾ

ಠಾಗೋರ್ ಮನೆತನದ ಹುಡುಗಿ ಹೀಗೂ ಕಾಣಿಸಿಕೊಳ್ಳಬಹುದೆ ಎಂದು ಜನ ಅಚ್ಚರಿಯಿಂದ ನೋಡುವಂತೆ ಗ್ಲಾಮರ್ ಆಗಿ ಶರ್ಮಿಳಾ ಕಾಣಿಸಿಕೊಂಡಳು

ತನುಜಾ

ಬೆಂಗಾಳಿ ಬೆಡಗಿ ಮಾದಕತೆ, ಗ್ಲಾಮರ್ ಗೆ ಹೊಸ ರೂಪ ಕೊಟ್ಟವಳು

English summary
Whether it is today or years back, the Hindi film industry was never lacklustre and had heroines who not only acted well, but also knew how to look glamorous. Actresses like Zeenat Aman, Helen, Rekha and Sharmila to name a few set a trend by appearing in their hot avatars onscreen.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada