»   » ಜೈಲಿನಲ್ಲಿ ಖೈದಿ ನಂ.106 ಸಲ್ಮಾನ್ ನಿದ್ದೆ ಮಾಡ್ತಿಲ್ಲ, ಹೊಟ್ಟೆಗೇನೂ ತಿಂತಿಲ್ಲ!

ಜೈಲಿನಲ್ಲಿ ಖೈದಿ ನಂ.106 ಸಲ್ಮಾನ್ ನಿದ್ದೆ ಮಾಡ್ತಿಲ್ಲ, ಹೊಟ್ಟೆಗೇನೂ ತಿಂತಿಲ್ಲ!

Posted By:
Subscribe to Filmibeat Kannada
ಜೋಧ್ ಪುರ್ ಸೆಂಟ್ರಲ್ ಜೈಲ್ ನಲ್ಲಿ ಸಲ್ಮಾನ್ ಖಾನ್ ಖೈದಿ ನಂ 106 | Filmibeat kannada

ಇಪ್ಪತ್ತು ವರ್ಷಗಳ ಹಿಂದೆ ಕೃಷ್ಣಮೃಗಗಳನ್ನ ಬೇಟೆಯಾಡಿದ್ದ ಸಲ್ಮಾನ್ ಖಾನ್ ಅಪರಾಧಿ ಎಂದು ಜೋಧ್ ಪುರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ವನ್ಯಜೀವಿಗಳನ್ನು ಗುಂಡಿಕ್ಕಿ ಕೊಂದ ಸಲ್ಮಾನ್ ಖಾನ್ ಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ತೀರ್ಪು ಪ್ರಕಟ ಆಗುತ್ತಿದ್ದಂತೆಯೇ, ಸಲ್ಮಾನ್ ರನ್ನ ಪೊಲೀಸರು ಜೋಧ್ ಪುರ ಸೆಂಟರ್ ಜೈಲಿಗೆ ಕರೆದೊಯ್ದರು. ಜೋಧ್ ಪುರ ಕಾರಾಗೃಹದಲ್ಲಿ ಸಲ್ಮಾನ್ ಖಾನ್ 'ಸೂಪರ್ ಸ್ಟಾರ್' ಅಲ್ಲ. ಬದಲಾಗಿ, 'ಖೈದಿ ನಂ 106'.!

ಕಾರಾಗೃಹದ ಕತ್ತಲೆ ಕೋಣೆ ಪ್ರವೇಶಿಸಿದ ಮೇಲೆ ಸಲ್ಮಾನ್ ಖಾನ್ ಗೆ ರಾತ್ರಿ ಪೂರ್ತಿ ನಿದ್ದೆ ಬಂದಿಲ್ಲ. ರಾತ್ರಿ ಊಟ, ಇಂದು ಬೆಳಗ್ಗಿನ ತಿಂಡಿ ಕೂಡ ಮಾಡಿಲ್ಲ. ಸೆರೆವಾಸದಿಂದ ನರಕ ದರ್ಶನವಾಗಿರುವ ಸಲ್ಮಾನ್ ಸದ್ಯ ಜಾಮೀನಿಗಾಗಿ ಕಾಯುತ್ತಿದ್ದಾರೆ. ಮುಂದೆ ಓದಿರಿ....

ಸಲ್ಮಾನ್ ಖೈದಿ ನಂ 106

ಸಲ್ಮಾನ್ ಖಾನ್ ಬಾಲಿವುಡ್ ನಟ ಎಂಬ ಕಾರಣಕ್ಕೆ ಜೋಧ್ ಪುರ ಸೆಂಟರ್ ಜೈಲಿನಲ್ಲಿ ವಿಶೇಷ ಸೌಲಭ್ಯ ಕೊಟ್ಟಿಲ್ಲ. ಇತರೆ ಖೈದಿಗಳಂತೆ ಸಲ್ಮಾನ್ ಖಾನ್ ಗೆ ವೈದ್ಯಕೀಯ ತಪಾಸಣೆ ನಡೆಸಿ ಖೈದಿ ಸಂಖ್ಯೆ ನೀಡಲಾಗಿದೆ. ಜೋಧ್ ಪುರ ಕಾರಾಗೃಹದಲ್ಲಿ ವಾರ್ಡ್ ನಂಬರ್ 2 ನಲ್ಲಿ ಸಲ್ಮಾನ್ ಖಾನ್ 'ಖೈದಿ ನಂ 106'!

ಸಲ್ಮಾನ್ ನ ಜೈಲು ಪಾಲು ಮಾಡಿದ ಬಿಷ್ಣೋಯಿ ಸಮುದಾಯ: ಯಾರಿವರು?

ಹೊಟ್ಟೆಗೇನೂ ತಿಂದಿಲ್ಲ

ಕಾರಾಗೃಹ ಪ್ರವೇಶಿಸಿದ ಮೇಲೆ ಸಲ್ಮಾನ್ ಖಾನ್ ಏನ್ನನ್ನೂ ತಿಂದಿಲ್ಲ. ಸಲ್ಮಾನ್ ಖಾನ್ ಗೆ ನಿನ್ನೆ ರಾತ್ರಿ ಚಪಾತಿ ಮತ್ತು ದಾಲ್, ಬೆಳಗ್ಗೆ ಕಿಚಡಿ ನೀಡಲಾಗಿತ್ತು. ಆದ್ರೆ, ಇದ್ಯಾವುದನ್ನೂ ಸಲ್ಮಾನ್ ಸೇವಿಸಿಲ್ಲ. ಟೀ ಕೂಡ ಕುಡಿದಿಲ್ಲ ಎಂದು ವರದಿ ಆಗಿದೆ.

ಏನಿದು ಕೃಷ್ಣಮೃಗ ಬೇಟೆ ಪ್ರಕರಣ? ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು

ಜೈಲಿನ ಯೂನಿಫಾರ್ಮ್ ಇನ್ನೂ ಕೊಟ್ಟಿಲ್ಲ

ಸದ್ಯಕ್ಕೆ ತಮ್ಮದೇ ವಸ್ತ್ರ ಧರಿಸಿರುವ ಸಲ್ಮಾನ್ ಖಾನ್ ಗೆ ಇನ್ನೂ ಜೈಲಿನ ಯೂನಿಫಾರ್ಮ್ ನೀಡಿಲ್ಲ. ಜಾಮೀನಿಗಾಗಿ ಎದುರು ನೋಡುತ್ತಿರುವ ಸಲ್ಮಾನ್ ಖಾನ್ ಕಾರಾಗೃಹದಲ್ಲಿ ಸ್ಪೆಷಲ್ ಟ್ರೀಟ್ ಮೆಂಟ್ ಗಾಗಿ ಬೇಡಿಕೆ ಕೂಡ ಇಟ್ಟಿಲ್ಲ ಎಂದು ಜೋಧ್ ಪುರ ಡಿ.ಐ.ಜಿ ವಿಕ್ರಮ್ ಸಿಂಗ್ ಸ್ಪಷ್ಟ ಪಡಿಸಿದ್ದಾರೆ.

ಕೃಷ್ಣಮೃಗ ಬೇಟೆ ಪ್ರಕರಣ: 'ಬ್ಯಾಡ್ ಬಾಯ್' ಸಲ್ಮಾನ್ ಖಾನ್ ಅಪರಾಧಿ

ಏನಿದು ಕೃಷ್ಣಮೃಗ ಬೇಟೆ ಪ್ರಕರಣ.?

1998 ರಲ್ಲಿ ಹಿಂದಿ ಸಿನಿಮಾ 'ಹಮ್ ಸಾಥ್ ಸಾಥ್ ಹೇ' ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ರಾಜಸ್ಥಾನದ ಕಂಕಾನಿ ಗ್ರಾಮದಲ್ಲಿ ಎರಡು ಕೃಷ್ಣ ಮೃಗಗಳನ್ನು ಸಲ್ಮಾನ್ ಖಾನ್ ಬೇಟೆಯಾಡಿದ್ದರು ಎಂದು ಆರೋಪಿಸಿ ಬಿಷ್ಣೋಯಿ ಸಮುದಾಯ ದೂರು ದಾಖಲಿಸಿತ್ತು. ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ದೋಷಿ ಎಂದು ಸಾಬೀತಾದ ಹಿನ್ನಲೆಯಲ್ಲಿ ಜೋಧ್ ಪುರ ನ್ಯಾಯಾಲಯ ಐದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿದೆ.

English summary
Jodhpur court has convicted Bollywood Actor Salman Khan in 1998 Blackbuck poaching case. Salman Khan spent a night in Jodhpur Jail without sleeping. Reports say Salman refused to eat prison food.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X