»   » ಅಷ್ಟಕ್ಕೂ, ಶ್ರೀದೇವಿ ಮೃತದೇಹ ತರಲು ಅನಿಲ್ ಅಂಬಾನಿ ಯಾಕೆ ಪ್ರೈವೇಟ್ ಜೆಟ್ ಕಳುಹಿಸಬೇಕು.?

ಅಷ್ಟಕ್ಕೂ, ಶ್ರೀದೇವಿ ಮೃತದೇಹ ತರಲು ಅನಿಲ್ ಅಂಬಾನಿ ಯಾಕೆ ಪ್ರೈವೇಟ್ ಜೆಟ್ ಕಳುಹಿಸಬೇಕು.?

Posted By:
Subscribe to Filmibeat Kannada

ಮೋಹಿತ್ ಮಾರ್ವಾ ಮದುವೆಯಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದ ಶ್ರೀದೇವಿ, ಅಲ್ಲೇ ಹೃದಯಾಘಾತದಿಂದ ನಿಧನರಾದರು. ಮದುವೆ ಮುಗಿದ ಬಳಿಕ ದುಬೈನ ಹೋಟೆಲ್ ಒಂದರಲ್ಲಿ ತಂಗಿದ್ದ ಶ್ರೀದೇವಿ, ನಿಶ್ಯಕ್ತರಾಗಿ ಬಾತ್ ರೂಮ್ ನಲ್ಲಿ ಕುಸಿದು ಬಿದ್ದಿದ್ದರು ಎಂದು ಹಲವು ಪತ್ರಿಕೆಗಳಲ್ಲಿ ವರದಿ ಆಗಿದೆ.

ಆಸ್ಪತ್ರೆಗೆ ಸೇರಿಸುವ ಮುನ್ನವೇ ಕೊನೆಯುಸಿರೆಳೆದಿದ್ದರು ನಟಿ ಶ್ರೀದೇವಿ. ಸದ್ಯ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದೆ. ಯು.ಎ.ಇ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಶ್ರೀದೇವಿ ಪಾರ್ಥೀವ ಶರೀರ ಕುಟುಂಬಸ್ಥರಿಗೆ ಹಸ್ತಾಂತರವಾಗಲಿದೆ.

ದುಬೈನಿಂದ ಭಾರತಕ್ಕೆ ಶ್ರೀದೇವಿ ಅವರ ಪಾರ್ಥೀವ ಶರೀರ ತರಲು ಉದ್ಯಮಿ ಅನಿಲ್ ಅಂಬಾನಿ ತಮ್ಮ ಪ್ರೈವೇಟ್ ಜೆಟ್ ನ ಕಳುಹಿಸಿಕೊಟ್ಟಿದ್ದಾರೆ.

ಅಷ್ಟಕ್ಕೂ, ಶ್ರೀದೇವಿ ಮೃತದೇಹವನ್ನ ಭಾರತಕ್ಕೆ ತರಲು ಅನಿಲ್ ಅಂಬಾನಿ ಯಾಕೆ ಪ್ರೈವೇಟ್ ಜೆಟ್ ಕಳುಹಿಸಬೇಕು.? ಅವರೇನು ನೆಂಟರೋ.? ಕುಟುಂಬಸ್ಥರೋ.? ಸ್ನೇಹಿತರೋ.? ಅಂತ ನೀವು ಪ್ರಶ್ನಿಸಬಹುದು. ಅದಕ್ಕೆ ಉತ್ತರ ಇಲ್ಲಿದೆ. ಓದಿರಿ...

ಅನಿಲ್ ಅಂಬಾನಿ ಹಾಗೂ ಶ್ರೀದೇವಿ ಸಂಬಂಧಿಕರು

ನಿಜ ಹೇಳಬೇಕು ಅಂದ್ರೆ, ಶ್ರೀದೇವಿ ಹಾಗೂ ಅನಿಲ್ ಅಂಬಾನಿ ದೂರದ ಸಂಬಂಧಿಕರು.

ಶ್ರೀದೇವಿ ಪಾರ್ಥೀವ ಶರೀರ ತರಲು ದುಬೈಗೆ ಪ್ರೈವೇಟ್ ಜೆಟ್ ಕಳುಹಿಸಿದ ಅನಿಲ್ ಅಂಬಾನಿ

ಮೋಹಿತ್ ಮಾರ್ವಾ ಯಾರು ಗೊತ್ತಾ.?

ನಟಿ ಶ್ರೀದೇವಿ ದುಬೈಗೆ ತೆರಳಿದ್ದು ಮೋಹಿತ್ ಮಾರ್ವಾ ಮದುವೆಯಲ್ಲಿ ಭಾಗವಹಿಸೋಕೆ. ಈ ಮೋಹಿತ್ ಮಾರ್ವಾ ಯಾರು ಅಂತೀರಾ.? ಬೇರೆ ಯಾರೂ ಅಲ್ಲ. ಶ್ರೀದೇವಿ ಪತಿ ಬೋನಿ ಕಪೂರ್ ಸಹೋದರಿ ರೀನಾ ಪುತ್ರ.

ಶ್ರೀದೇವಿಯ ಕಟ್ಟಕಡೆಯ ವಿಡಿಯೋ ಮತ್ತು ಫೋಟೋ: ಖುಷಿಖುಷಿಯಾಗಿದ್ದ ನಟಿ ಇನ್ನಿಲ್ಲ!

ಮೋಹಿತ್ ಮಾರ್ವಾ ಮದುವೆ ಆಗಿದ್ದು ಯಾರನ್ನ.?

ಕಳೆದ ವಾರ ಮೋಹಿತ್ ಮಾರ್ವಾ ಮದುವೆ ಆಗಿದ್ದು ಅಂತರಾ ಮೋತಿವಾಲಾ ಎಂಬ ಬೆಡಗಿಯನ್ನ. ಈ ಅಂತರಾ ಮೋತಿವಾಲಾ, ಮಾಜಿ ನಟಿ ಟೀನಾ ಮುನಿಮ್ ಸಂಬಂಧಿ.

ಟೀನಾ ಮುನಿಮ್ ಯಾರು.?

ಒಂದ್ಕಾಲದಲ್ಲಿ ನಟಿಯಾಗಿದ್ದ ಟೀನಾ ಮುನಿಮ್ ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಪತ್ನಿ. ಮೋಹಿತ್ ಮಾರ್ವಾ ಮದುವೆಯಿಂದಲೇ ಶ್ರೀದೇವಿ ಹಾಗೂ ಅನಿಲ್ ಅಂಬಾನಿ ದೂರ ಸಂಬಂಧಿಕರಾದರು. ದುರಂತ ಅಂದ್ರೆ, ಇದೇ ಮದುವೆ ಮುಗಿದ್ಮೇಲೆ, ಶ್ರೀದೇವಿ ಮೃತಪಟ್ಟಿದ್ದಾರೆ. ಶ್ರೀದೇವಿ ಕುಟುಂಬಕ್ಕೆ ಸಾಂತ್ವನ ತಿಳಿಸಿರುವ ಅನಿಲ್ ಅಂಬಾನಿ, ಮೃತದೇಹವನ್ನ ಭಾರತಕ್ಕೆ ತರಲು ತಮ್ಮ ಪ್ರೈವೇಟ್ ಜೆಟ್ ನ ದುಬೈಗೆ ಕಳುಹಿಸಿದ್ದಾರೆ.

English summary
How is Anil Ambani related to Bollywood Actress Sridevi.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada