For Quick Alerts
  ALLOW NOTIFICATIONS  
  For Daily Alerts

  'ವಾರ್' ಬಳಿಕ ಹೊಸ ಸಿನಿಮಾ ಘೋಷಣೆ ಮಾಡಿದ ಹೃತಿಕ್ ರೋಷನ್

  |

  ಬಾಲಿವುಡ್ ನ ಹ್ಯಾಂಡ್ ಸಮ್ ಹಂಕ್ ಹೃತಿಕ್ ರೋಷನ್ ಇತ್ತೀಚಿಗಷ್ಟೆ ವಾರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ವಾರ್ ಸಿನಿಮಾ ಬಳಿಕ ಹೃತಿಕ್ ಹೊಸ ಸಿನಿಮಾ ಅನೌನ್ಸ್ ಮಾಡಿರಲಿಲ್ಲ. ಇದೀಗ ಅನೇಕ ತಿಂಗಳ ಬಳಿಕ ಹೊಸ ಸಿನಿಮಾ ಅನೌನ್ಸ್ ಆಗಿದೆ.

  ವಿಶೇಷ ಎಂದರೆ ಹೃತಿಕ್ ಮತ್ತೆ ವಾರ್ ನಿರ್ದೇಶಕರ ಜೊತೆ ಕೈ ಜೋಡಿಸಿದ್ದಾರೆ. ಹೌದು, ನಿರ್ದೇಶಕ ಸಿದ್ಧಾರ್ಥ್ ಆನಂದ್ ಜೊತೆ ಹೃತಿಕ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಸಿದ್ಧಾರ್ಥ್ ಮತ್ತು ಹೃತಿಕ್ ಇಬ್ಬರು ಮೂರನೆ ಬಾರಿಗೆ ಒಂದಾಗುತ್ತಿದ್ದಾರೆ.

  'ಧೂಮ್-2' ಚಿತ್ರಕ್ಕೆ 14 ವರ್ಷದ ಸಂಭ್ರಮ; ಹೃತಿಕ್ ಪಾತ್ರಕ್ಕೆ ಈ 3 ಖ್ಯಾತ ನಟರು ಸ್ಫೂರ್ತಿಯಂತೆ

  ಹೃತಿಕ್ ಹೊಸ ಸಿನಿಮಾಗೆ ಟೈಟಲ್ ಸಹ ಫಿಕ್ಸ್ ಆಗಿದೆ. ಚಿತ್ರಕ್ಕೆ 'ಫೈಟರ್' ಎಂದು ಹೆಸರಿಡಲಾಗಿದೆ. ಈ ಮೊದಲು ಸಿದ್ಧಾರ್ಥ್ ಮತ್ತು ಹೃತಿಕ್ ಬ್ಯಾಂಗ್ ಬ್ಯಾಂಗ್ ಸಿನಿಮಾ ಮಾಡಿದ್ದರು. 2014ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಬಳಿಕ ವಾರ್ ಸಿನಿಮಾ ಮೂಲಕ ಮತ್ತೆ ಇಬ್ಬರು ಒಂದಾಗಿದ್ದು ಬಾಲಿವುಡ್ ಧಮಾಕ ಮಾಡಿದ್ದರು. ಇದೀಗ ಮತ್ತೆ ಒಂದಾಗಿದ್ದು ಚಿತ್ರಾಭಿಮಾನಿಗಳ ನಿರೀಕ್ಷೆ ಹೆಚ್ಚಿದೆ.

  ಸಿದ್ಧಾರ್ಥ್ ಆನಂದ್ ಸದ್ಯ ಶಾರುಖ್ ಖಾನ್ ಜೊತೆ ಪಠಾಣ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಶಾರುಖ್ ಮತ್ತು ಸಿದ್ಧಾರ್ಥ್ ಇಬ್ಬರ ಸಿನಿಮಾ ಪ್ರಾರಂಭವಾಗಿದ್ದು, ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮಾಡಿ ಮುಗಿಸಿದೆ ಸಿನಿಮಾತಂಡ. ಈ ಸಿನಿಮಾ ಮುಗಿಯುತ್ತಿದ್ದಂತೆ ಸಿದ್ಧಾರ್ಥ್ ಆನಂದ್, ಹೃತಿಕ್ ರೋಷನ್ ಜೊತೆ ಹೊಸ ಸಿನಿಮಾ ಪ್ರಾರಂಭ ಮಾಡಲಿದ್ದಾರೆ.

  ಲಾಕ್ ಡೌನ್ ಸಮಯದಲ್ಲಿ ಚಿತ್ರದ ಕಥೆ ಸಿದ್ಧಮಾಡಿ, ಹೃತಿಕ್ ಬಳಿ ಹೇಳಿದ್ದಾರೆ. ಕಥೆ ಕೇಳಿ ಥ್ರಿಲ್ ಆದ ಹೃತಿಕ್ ಸಿನಿಮಾ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾ ಜೊತೆಗೆ ಹೃಿತಿಕ್ ಕ್ರಿಶ್-4 ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಯಾವ ಸಿನಿಮಾ ಮೊದಲು ಪ್ರಾರಂಭಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  English summary
  After War movie Hrithik Roshan and Siddharth Anand to team up again for Fighter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X