Don't Miss!
- News
ರಾಜ್ಯಕ್ಕೆ ಅಮಿತ್ ಶಾ ಆಗಮನ; ಕಿತ್ತೂರು ಕರ್ನಾಟಕದಲ್ಲಿ ಸಂಚಲನ: ಬಸವರಾಜ ಬೊಮ್ಮಾಯಿ
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Technology
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೃತಿಕ್ ರೋಷನ್ ಗರ್ಲ್‌ಫ್ರೆಂಡ್ ಹಾಕಿದ ಈ ಫೋಟೊ ಸಿಕ್ಕಾಪಟ್ಟೆ ವೈರಲ್
ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಹೊಸ ಗೆಳತಿ ಸಬಾ ಅಜಾದ್ ಜೊತೆ ಡೇಟಿಂಗ್‌ನಲ್ಲಿರುವ ಸುದ್ದಿ ಬೇಜಾನ್ ಸದ್ದು ಮಾಡುತ್ತಿದೆ. ಕಳೆದ ಕೆಲವು ವಾರಗಳ ಹಿಂದೆ ಹೃತಿಕ್ ರೋಷನ್ ಹಾಗೂ ಸಬಾ ಅಜಾದ್ ಈ ಸಂಬಂಧ ಬಗ್ಗೆ ಎಲ್ಲೆಡೆ ಬೇಜಾನ್ ಸದ್ದಿಯಾಗಿತ್ತು. ತನ್ನ ಗೆಳೆತಿಯನ್ನು ಹೊರಗೆ ಊಟಕ್ಕೆ ಕರೆದುಕೊಂಡು ಹೋಗಿದ ಕ್ಷಣದಿಂದ ಹೃತಿಕ್ ರೋಷನ್‌ಗಿಂತ ಸಬಾ ಅಜಾದ್ ಬಗ್ಗೆನೇ ಬಾಲಿವುಡ್ ಕಣ್ಣಿಟ್ಟಿದೆ. ಹೃತಿಕ್ ರೋಷನ್ ಮನೆಯಲ್ಲಿ ಸಬಾ ಅಜಾದ್ ಕಾಣಿಸಿಕೊಂಡ ಮೇಲಂತೂ ಸಬಾ ಅಜಾದ್ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.
ಹೃತಿಕ್ ರೋಷನ್ ಗರ್ಲ್‌ಫ್ರೆಂಡ್ ಸೋಶಿಯಲ್ ಮೀಡಿಯಾದಲ್ಲಿ ಫೋಟೊವೊಂದನ್ನ ಶೇರ್ ಮಾಡಿಕೊಂಡಿದ್ದು, ಆ ಫೋಟೊನೇ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಬಾಲಿವುಡ್‌ನಲ್ಲಿ ಪ್ರೀತಿ, ಪ್ರೇಮ, ಬ್ರೇಕಪ್, ಡಿವೋರ್ಸ್ ಎಲ್ಲವೂ ಕಾಮನ್. ಪ್ರತಿದಿನ ಒಂದಲ್ಲಾ ಒಂದು ಸ್ಟೋರಿ ಬಾಲಿವುಡ್ ಅಂಗಳದಿಂದ ಹರಿದಾಡುತ್ತಲೇ ಇರುತ್ತೆ. ಮತ್ತೆ ಹೊಸ ಲವ್‌ಸ್ಟೋರಿ ಪ್ರತ್ಯಕ್ಷ ಆಗುತ್ತವೆ. ಹೃತಿಕ್ ರೋಷನ್ ಲವ್ ಸ್ಟೋರಿ ಕೂಡ ಹಾಗೇ. ಹೃತಿಕ್ ಹಾಗೂ ಸಬಾ ಅಜಾದ್ ಒಟ್ಟಿಗೆ ಕಾಣಿಸಿಕೊಂಡಲ್ಲಿಂದ ಸುದ್ದಿಯಲ್ಲಿದ್ದಾರೆ. ಈಗ ಈಕೆಯ ಒಂದು ಫೋಟೊ ಸದ್ದು ಮಾಡುತ್ತಿದೆ.
ಹೃತಿಕ್
ರೋಷನ್
ತನ್ನ
ಪ್ರೇಯಸಿಗೆ
ಕೊಟ್ಟಿದ್ದ
ದುಬಾರಿ
ಉಡುಗೊರೆಯ
ಬೆಲೆ
ಎಷ್ಟು?
ಆ
ಗಿಫ್ಟ್
ಏನು
ಗೊತ್ತೆ?

ಸಬಾ ಅಜಾದ್ ಫೋಟೊದಲ್ಲೇನಿದೆ?
ಹೃತಿಕ್ ರೋಷನ್ ಗೆಳತಿ ಸಬಾ ಅಜಾದ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೊವನ್ನು ಹಂಚಿಕೊಂಡಿದ್ದರು. ತಾನು ಹೋಮಿ ಬಾಬಾ ಪತ್ನಿಯಾಗಿ ನಟಿಸಿದ್ದ ರಾಕೆಟ್ ಬಾಯ್ಸ್ ವೆಬ್ ಸಿರೀಸ್‌ನ ಫೋಟೊವನ್ನು ಶೇರ್ ಮಾಡಿಕೊಂಡಿದ್ದರು. 40-50ರ ದಶಕದ ಮಹಿಳೆಯ ಅವತಾರವೆತ್ತಿದ್ದ ಸಬಾ ಲುಕ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ಸಬಾ ಅಜಾದ್ ವಿಂಟೇಜ್ ಲುಕ್‌ಗೆ ಹೃತಿಕ್ ರೋಷನ್ ಸೋದರ ಸಂಬಂಧಿ ಹಾಗೂ ಸೊಸೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೃತಿಕ್ ಸಂಬಂಧಿಗಳ ಕಮೆಂಟ್ ಏನು?
ಸಬಾ ಅಜಾದ್ ತನ್ನ ವಿಂಟೇಜ್ ಫೋಟೊ ಶೇರ್ ಮಾಡುತ್ತಿದ್ದಂತೆ ಹೃತಿಕ್ ಸೋದರ ಸಂಬಂಧಿ ಹಾಗೂ ಸೊಸೆ ಕೆಮೆಂಟ್ ಮಾಡಿದ್ದು ವೈರಲ್ ಆಗಿದೆ. ಪಶ್ಮಿನಾ ರೋಷನ್ ಹಾಗೂ ಸುರಾನಿಕಾ ಸೋನಿ ಇಬ್ಬರು ಸಬಾ ಅಜಾದ್ ಕಾಲೆಳೆದಿದ್ದಾರೆ. ಸುರಾನಿಕಾ ಸೋನಿ " ಸಾಕು ನಿಲ್ಲಿಸು" ಎಂದು ಕಮೆಂಟ್ ಮಾಡಿ ಹಾರ್ಟ್ ಐ ಎಮೋಜಿ ಹಾಕಿದ್ದಾರೆ. ಇತ್ತ ಪಶ್ಮಿನಾ ರೋಷನ್ ಸುಸ್ತಾದವರಂತೆ" ಉಫ್" ಎಂದು ಕಮೆಂಟ್ ಮಾಡಿದ್ದಾರೆ.

ಹೃತಿಕ್ ಮನೆಯಲ್ಲಿ ಸಬಾ ವೀಕೆಂಡ್
ಹೃತಿಕ್ ರೋಷನ್ ಹಾಗೂ ಸಬಾ ಅಜಾದ್ ಬಹಿರಂಗವಾಗಿ ಕೈ ಕೈ ಹಿಡಿದು ಹೊರಬರುತ್ತಿದ್ದಂತೆ ಸುದ್ದಿಯಾಗಿದ್ದರು. ಇಬ್ಬರ ಬಗ್ಗೆ ಸುದ್ದಿ ಹಬ್ಬಿದ ಕೆಲವೇ ದಿನಗಳಲ್ಲಿ ಹೃತಿಕ್ ರೋಷನ್ ಮನೆಯಲ್ಲಿ ಸಬಾ ಕಾಣಿಸಿಕೊಂಡಿದ್ದರು. ಹೃತಿಕ್ ರೋಷನ್ ಜೊತೆ ತಂದೆ ರಾಕೇಶ್ ರೋಷನ್, ಚಿಕ್ಕಪ್ಪ ರಾಕೇಶ್ ರೋಷನ್ ಜೊತೆ ಇಬ್ಬರ ಮಕ್ಕಳು ಹಾಗೂ ಸಂಬಂಧಿಗಳ ಮಧ್ಯೆ ಸಬಾ ಅಜಾದ್ ಕಾಣಿಸಿಕೊಂಡಿದ್ದರು. ಈ ಫೋಟೊ ರಿವೀಲ್ ಆದ ಬಳಿಕ ಸಬಾ ಅಜಾದ್ ಹಾಗೂ ಹೃತಿಕ್ ನಡುವಿನ ಡೇಟಿಂಗ್ ವಿಷಯಕ್ಕೆ ಮತ್ತಷ್ಟು ರೆಕ್ಕೆ ಪುಕ್ಕಗಳು ಅಂಟಿಕೊಂಡಿವೆ.

ಹೃತಿಕ್ ರೋಷನ್ ಬ್ಯುಸಿ
ಹೃತಿಕ್ ರೋಷನ್ ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದೀಪಿಕಾ ಪಡುಕೋಣೆ ಜೊತೆ ಇದೇ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ 'ಫೈಟರ್' ಎಂದು ಟೈಟಲ್ ಫಿಕ್ಸ್ ಆಗಿದೆ. ಇನ್ನೊಂದು ಕಡೆ ಸೈಫ್ ಅಲಿ ಖಾನ್ ಜೊತೆ ನಟಿಸುತ್ತಿದ್ದಾರೆ. ಇದು ತಮಿಳಿನ 'ವಿಕ್ರಂ-ವೇದ' ಸಿನಿಮಾದ ರಿಮೇಕ್. ಎರಡೆರಡು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಹೃತಿಕ್ ಈ ನಡುವೆ ಗರ್ಲ್‌ಫ್ರೆಂಡ್ ವಿಚಾರದಲ್ಲೂ ಚರ್ಚೆಯಲ್ಲಿದ್ದಾರೆ.