»   » 'ಟೈಗರ್ ಶ್ರಾಫ್'ಗೆ ಜಬರ್ ದಸ್ತ್ ಬಿರುದು ನೀಡಿದ ಹೃತಿಕ್-ಅಕ್ಷಯ್

'ಟೈಗರ್ ಶ್ರಾಫ್'ಗೆ ಜಬರ್ ದಸ್ತ್ ಬಿರುದು ನೀಡಿದ ಹೃತಿಕ್-ಅಕ್ಷಯ್

Posted By:
Subscribe to Filmibeat Kannada

ಬಾಲಿವುಡ್ ಯಿಂದ ಹಿಡಿದು ದಕ್ಷಿಣ ಭಾರತದವರೆಗೂ ಸಖತ್ ಹವಾ ಸೃಷ್ಟಿಸುತ್ತಿರುವ ಸಿನಿಮಾ 'ಭಾಗಿ-2'. ಟೈಗರ್ ಶ್ರಾಫ್ ಅಭಿನಯದ ಈ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ದೇಶಾದ್ಯಂತ ಅದ್ಧೂರಿ ಯಶಸ್ಸು ಕಾಣುತ್ತಿದೆ.

ಇದೀಗ, ಟೈಗರ್ ಶ್ರಾಫ್ ಅಭಿನಯವನ್ನ ಮೆಚ್ಚಿದ ಬಾಲಿವುಡ್ ಫುಲ್ ಮಾರ್ಕ್ಸ್ ನೀಡಿದೆ. 'ಭಾಗಿ-2' ಸಿನಿಮಾದಲ್ಲಿನ ಆಕ್ಷನ್ ದೃಶ್ಯಗಳನ್ನ ನೋಡಿ ಸ್ಟಾರ್ ನಟರು ದಂಗಾಗಿದ್ದಾರೆ. ನಮ್ಮಲ್ಲೂ ಇಂತಹ ನಟನೊಬ್ಬ ಇದ್ದಾನೆಂದು ಥ್ರಿಲ್ ಆಗಿದ್ದಾರೆ.

ಹೌದು, 'ಭಾಗಿ-2' ಚಿತ್ರದಲ್ಲಿ ಟೈಗರ್ ಶ್ರಾಫ್ ಸಾಹಸ ಕಂಡು ಫಿದಾ ಆಗಿರುವ ಅಕ್ಷಯ್ ಕುಮಾರ್ '' ಬಹಳ ಹೆಮ್ಮೆಯಿಂದ ಹೇಳಲು ಬಯಸುತ್ತೇನೆ. ನೀನು ನಮ್ಮ ಇಂಡಸ್ಟ್ರಿಯ ಟೋನಿ ಜಾ'' ಎಂದು ಥೈಲ್ಯಾಂಡ್ ನಟನಿಗೆ ಹೋಲಿಸಿದ್ದಾರೆ. ಟೋನಿ ಜಾ ಮಾರ್ಷಲ್ ಆರ್ಟ್ಸ್ ನಲ್ಲಿ ಅತ್ಯಾದ್ಭುತ ಸಾದನೆ ಮಾಡಿರುವ ನಟ.

ಸಲ್ಮಾನ್, ದೀಪಿಕಾ ಚಿತ್ರಗಳನ್ನ ಹಿಂದಿಕ್ಕಿದ ಟೈಗರ್ ಶ್ರಾಫ್

Hrithik Roshan gives Best action hero title to Tiger Shroff

ಇನ್ನು ಟೈಗರ್ ಶ್ರಾಫ್ ಬಗ್ಗೆ ಟ್ವೀಟ್ ಮಾಡಿರುವ ಹೃತಿಕ್ ರೋಷನ್ ''ನಾನು ಬೆಸ್ಟ್ ಆಕ್ಷನ್ ಹೀರೋ ಜೊತೆಯಲ್ಲಿ ಕೆಲಸ ಮಾಡಲು ಕಾಯುತ್ತಿದ್ದೇನೆ'' ಎಂದು ಹೇಳುವ ಮೂಲಕ ಬಾಲಿವುಡ್ ಗೆ ಹೊಸ ಆಕ್ಷನ್ ಹೀರೋ ಸಿಕ್ಕಿದ್ದಾನೆ ಎಂದು ಶ್ಲಾಘಿಸಿದ್ದಾರೆ.

ಬಿ ಟೌನ್ ನ ಬಿಗ್ ಸ್ಟಾರ್ ಗಳನ್ನ ಹಿಂದಿಕ್ಕಿದ ಹುಲಿರಾಯ

ಇನ್ನು ಅನಿಲ್ ಕಪೂರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಡೀ ಭಾರತದ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದಿಯಾ'' ಎಂದು ಬೆನ್ನು ತಟ್ಟಿದ್ದಾರೆ. ಒಟ್ನಲ್ಲಿ 'ಭಾಗಿ-2' ಚಿತ್ರಕ್ಕೆ ಪ್ರೇಕ್ಷಕರಂತೆ ಸಿನಿತಾರೆಯರು ಕೂಡ ಮನಸೋತಿರುವುದು ಒಳ್ಳೆಯ ಬೆಳವಣಿಗೆ.

Hrithik Roshan gives Best action hero title to Tiger Shroff

ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಅಭಿನಯದ ಈ ಚಿತ್ರಕ್ಕೆ ಅಹ್ಮದ್ ಖಾನ್ ಆಕ್ಷನ್ ಕಟ್ ಹೇಳಿದ್ದಾರೆ. ಮಾರ್ಚ್ 30 ರಂದು ಸಿನಿಮಾ ತೆರೆಕಂಡಿದ್ದು, ಸುಮಾರು 100 ಕೋಟಿ ಕೆಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ.

English summary
Akshay Kumar and Hrithik Roshan are all praises for Tiger Shroff and his new film, Baaghi 2. Hrithik Roshan gives ‘Best action hero’ title to Tiger Shroff.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X