For Quick Alerts
  ALLOW NOTIFICATIONS  
  For Daily Alerts

  ಅಬ್ಬಬ್ಬಾ!! ಹೃತಿಕ್ ರೋಷನ್ ಸಂಭಾವನೆ ಇಷ್ಟೊಂದಾ?

  |

  ಬಾಲಿವುಡ್ ನ ಹ್ಯಾಂಡ್ ಸಮ್ ಹಂಕ್ ಹೃತಿಕ್ ರೋಷನ್ ಸದ್ಯ 'ಸೂಪರ್ 30' ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈಗಾಗಲೆ 'ಸೂಪರ್ 30' ಚಿತ್ರದ ಸೂಪರ್ ಆಗಿರುವ ಟ್ರೈಲರ್ ರಿಲೀಸ್ ಮಾಡಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಸಂತಸದಲ್ಲಿರುವ ಕ್ರಿಷ್ ಕಡೆಯಿಂದ ಮತ್ತೊಂದು ಅಚ್ಚರಿಕರ ಸುದ್ದಿ ಹರಿದಾಡುತ್ತಿದೆ.

  ಹೌದು, ಹೃತಿಕ್ ರೋಷನ್ ಸದ್ಯ ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟನಾಗಿ ಹೊರಹೊಮ್ಮಿದ್ದಾರಂತೆ. ಹೃತಿಕ್ ಸಂಭಾವನೆ ಕೇಳಿ ತಲೆಕೆಸಿಕೊಂಡಿದ್ದಾರಂತೆ ಅನೇಕರು. ಹೃತಿಕ್ ಅಭಿನಯದ ಚಿತ್ರಗಳು ತೆರೆಗೆ ಬರದೆ ವರ್ಷವೆ ಆಗಿದೆ. 'ಕಾಬಿಲ್' ಚಿತ್ರದ ನಂತರ ಹೃತಿಕ್ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿಲ್ಲ. ಆದ್ರೆ ಸಂಭಾವನೆ ಕೇಳಿದ್ರೆ ಶಾಕ್ ಆಗ್ತಿರಾ.

  'ಸೂಪರ್ 30' ಟ್ರೈಲರ್ ಮೂಲಕ ಬಂದ್ರು ಹೃತಿಕ್ ರೋಷನ್

  ಹೃತಿಕ್ ಮುಂದಿನ ಸಿನಿಮಾವೊಂದಕ್ಕೆ ತೆಗೆದುಕೊಂಡಿರುವ ಸಂಭಾವನೆ ಬರೋಬ್ಬರಿ 48 ಕೋಟಿ ಅಂತೆ. ಈ ಕೋಟಿ ಕೋಟಿ ವಿಚಾರವೀಗ ಬಾಲಿವುಡ್ ಅಂಗಳದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಹೃತಿಕ್ ಸಂಭಾವನೆ ಅಷ್ಟೊಂದಾ ಎಂದು ಚಿತ್ರಪ್ರಿಯರು ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.

  ಹೃತಿಕ್ ಮತ್ತು ಟೈಗರ್ ಶ್ರಾಫ್ ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ 'ಫೈಟರ್ಸ್' ಎಂದು ಟೈಟಲ್ ಇಟ್ಟಿದ್ದಾರೆ. ಬಾಲಿವುಡ್ ನ ಈ ಸೂಪರ್ ಜೋಡಿಯ ಸಿನಿಮಾ ಭಾರಿ ಕುತೂಹಲ ಮೂಡಿಸಿದೆ. ಇಬ್ಬರು ನೋಡಲು ಸ್ವಲ್ಪ ಒಂದೇ ಥರ ಇದ್ದು ಬೇರ್ ಬಾಡಿಯಲ್ಲಿ ನೋಡಿದ್ರೆ ಚಿತ್ರಪ್ರಿಯರಿಗೆ ಗೊಂದಲ ಆಗುವುದಂತು ಪಕ್ಕಾ.

  ಸಖತ್ ಆಕ್ಷನ್ ಇರುವ ಈ ಸಿನಿಮಾಗೆ ಸಿದ್ದಾರ್ಥ್ ಆನಂದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆದಿತ್ಯ ಚೋಪ್ರ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸೂಪರ್ 30 ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿರುವ ಹೃತಿಕ್ 'ಫೈಟರ್ಸ್' ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

  English summary
  Bollywood actor Hrithik Roshan has been paid to Rs 48 crore for his next film Fighters. Bollywood actor Tiger shroff playing important role in in this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X