»   » ನಟ ಹೃತಿಕ್ ರೋಷನ್ ಗೆ ಮೆದುಳಿನ ಸರ್ಜರಿ ಯಶಸ್ವಿ

ನಟ ಹೃತಿಕ್ ರೋಷನ್ ಗೆ ಮೆದುಳಿನ ಸರ್ಜರಿ ಯಶಸ್ವಿ

Posted By:
Subscribe to Filmibeat Kannada

ಬಾಲಿವುಡ್ ನಟ ಹೃತಿಕ್ ರೋಷನ್ ಅವರಿಗೆ ಭಾನುವಾರ (ಜು.7) ಸಂಜೆ ಮೆದುಳಿನ ಸರ್ಜರಿ ಯಶಸ್ವಿಯಾಗಿ ನಡೆದಿದೆ. ಮುಂಬೈನ ಹಿಂದೂಜಾ ಆಸ್ಪತ್ರೆಗೆ ಬೆಳಗ್ಗೆ 10 ಗಂಟೆ ಸುಮಾರಿಗೆ ಹೃತಿಕ್ ರೋಷನ್ ಅಡ್ಮಿಟ್ ಆಗಿದ್ದರು. ಸರ್ಜರಿ ನಂತರ ಹೃತಿಕ್ ಆರೋಗ್ಯವಾಗಿದ್ದಾರೆ ಎಂದು ಮಾಧ್ಯಮದವರಿಗೆ ಹೃತಿಕ್ ತಂದೆ ರಾಕೇಶ್ ಹೇಳಿದ್ದಾರೆ.

ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಹೃತಿಕ್ ರೋಷನ್ ಅವರ ಕಾರ್ಯದರ್ಶಿ, 'ಹೃತಿಕ್ ಅವರು ಲವಲವಿಕೆಯಿಂದ ಇದ್ದಾರೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ.ಈ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದ್ದು, ಹೆಚ್ಚಿನ ಮಾಹಿತಿ ಕಾಲಕಾಲಕ್ಕೆ ನಿಮಗೆ ತಲುಪಿಸಲಾಗುವುದು' ಎಂದಿದ್ದರು.

ಮೆದುಳಿನ scull subdural haematomaಗೆ ತುತ್ತಾಗಿರುವ ಹೃತಿಕ್ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ. ಅದನ್ನು ತೆಗೆಯುವ ಪ್ರಕ್ರಿಯೆಗೆ ಸಜ್ಜಾಗಬೇಕಿದೆ ಎಂದು ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಹೇಳಿದ್ದರು.39 ವರ್ಷ ವಯಸ್ಸಿನ ನಟ ಹೃತಿಕ್ ರೋಷನ್ ಅವರ ಮೆದುಳಿನ ಸರ್ಜರಿ ಸುಮಾರು 45 ನಿಮಿಷಗಳ ಕಾಲ ನಡೆಸಲಾಯಿತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ನರರೋಗ ತಜ್ಞ ಡಾ.ಬಿ.ಕೆ ಮಿಶ್ರಾ ಹೇಳಿದ್ದಾರೆ.

ಸರ್ಜರಿ ನಂತರ ಹೃತಿಕ್ ಅವರು ಹಿಂದೂಜಾ ಆಸ್ಪತ್ರೆಯಲ್ಲಿ 2-3 ದಿನ ವಿಶ್ರಾಂತಿ ಪಡೆಯಬೇಕಾಗಿದೆ. ಕ್ರಿಶ್ 3 ಚಿತ್ರದ ಪೋಸ್ಟ್ ಪ್ರೊಡೆಕ್ಷನ್ ನಲ್ಲಿ ತೊಡಗಿದ್ದ ಹೃತಿಕ್ ಇನ್ನೂ ಕೆಲ ಕಾಲ ಶೂಟಿಂಗ್ ಬ್ಯುಸಿಯಿಂದ ದೂರ ಇರಲಿ ಎಂದು ಕುಟುಂಬ ವರ್ಗ ಬಯಸಿದೆ.

Hrithik Roshan hospitalised, to undergo brain surgery

ತಮ್ಮ ಶಸ್ತಚಿಕಿತ್ಸೆ ಬಗ್ಗೆ ಸ್ವತಃ ಹೃತಿಕ್ ಅವರು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ವಾಲ್ ನಲ್ಲಿ ಹೇಳಿಕೊಂಡಿದ್ದರು. " ಮೆದಳಿನ ಶಕ್ತಿ ಮೂಲಕ ನಾವು ನಮ್ಮ ಜೀವನವನ್ನು ಇನ್ನಷ್ಟು ಸಂತೋಷಗೊಳಿಸಿಕೊಳ್ಳುತ್ತೇವೆ. ಮೆದಳಿನ ಅಗಾಧ ಶಕ್ತಿ ಹಾಗೂ ಸಾಮರ್ಥ್ಯದ ಬಗ್ಗೆ ತಿಳಿದು ವಿಸ್ಮಯಗೊಂಡಿದ್ದೇನೆ. ಮೆದಳಿನ ಆರೈಕೆ ಮಾಡಿಕೊಳ್ಳುವುದು ಹೇಗೋ ಗೊತ್ತಿಲ್ಲ. ಆದರೂ ಇದು ಅತ್ಯಗತ್ಯ"

'ನಮ್ಮ ದೃಶ್ಯ, ಶ್ರವ್ಯ, ಸ್ಪರ್ಶ, ಗ್ರಹಣ, ರುಚಿ ತಿಳಿಯುವಿಕೆ ಸೇರಿದಂತೆ ಪಂಚೇಂದ್ರಿಯಗಳ ನಿರ್ವಹಣೆ, ಮಾನವನ ಚಿಂತನೆ, ಕ್ರಿಯೆ, ಪ್ರತಿಕ್ರಿಯೆ ಎಲ್ಲಕ್ಕೂ ಮೆದಳು ಮೂಲ. ಅಕ್ಷರಶಃ ಈಗ ನನಗೆ ಮೆದಳಿನ ಶಕ್ತಿ ಅನುಭವವಾಗುತ್ತಿದೆ. ಗೆಳೆಯರೇ, ನಾನು ಮೆದುಳಿನ ಸರ್ಜರಿಗೆ ಒಳಪಡುತ್ತಿದ್ದೇನೆ. ಆದಷ್ಟು ಬೇಗ ಗುಣಮುಖನಾಗಿ ನಿಮ್ಮ ಮುಂದೆ ಬರುತ್ತೇನೆ. ನಿಮ್ಮ ಮೆದಳಿನ ಶಕ್ತಿಯನ್ನು ಬಳಸಿ ನನ್ನ ಜೀವನ ಖುಷಿ ಪಡಿಸಿದ್ದಕ್ಕೆ ಧನ್ಯವಾದಗಳು, ನಿಮ್ಮೆಲ್ಲರಿಗೂ ನನ್ನ ಪ್ರೀತಿ ಹಾರೈಕೆಗಳು" -ಹೃತಿಕ್ ರೋಷನ್

ಸಿದ್ದಾರ್ಥ್ ಆನಂದ್ ಅವರ ಬ್ಯಾಂಗ್ ಬ್ಯಾಂಗ್ ಚಿತ್ರಕ್ಕಾಗಿ ಫುಕೆಟ್ ನಲ್ಲಿ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಹೃತಿಕ್ ರೋಷನ್ ಅವರ ತಲೆ ಪೆಟ್ಟು ಬಿದ್ದಿತ್ತು. ನಿರಂತರ ತಲೆ ನೋವು ಅನುಭವಿಸಿದ್ದ ಹೃತಿಕ್, ಪರೀಕ್ಷೆಗೆ ಒಳಪಟ್ಟಾಗ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಗಿತ್ತು. ಈಗ ಶಸ್ತ್ರಚಿಕಿತ್ಸೆ ಮೂಲಕ ಮೆದಳಿನ ರಕ್ತ ಸಂಚಾರ ಸುಗುಮಗೊಳಿಸಲಾಗಿದೆ.

English summary
Hrithik Roshan went through a successful brain surgery at the Hinduja Hospital in Khar today. The actor was reported to be suffering from subdural haematoma, caused by a head injury in which the veins start bleeding.
Please Wait while comments are loading...