For Quick Alerts
  ALLOW NOTIFICATIONS  
  For Daily Alerts

  ಮಾಜಿ ಪತ್ನಿಯ ಹುಟ್ಟುಹಬ್ಬದ ಲುಕ್ ಗೆ ನಟ ಹೃತಿಕ್ ರೋಷನ್ ಫಿದಾ

  |

  ಬಾಲಿವುಡ್ ಖ್ಯಾತ ನಟ, ಹ್ಯಾಂಡ್ ಸಮ್ ಹಂಕ್ ಹೃತಿಕ್ ರೋಷನ್ ಮಾಜಿ ಪತ್ನಿ ಸುಸೇನ್ ಖಾನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 49ನೇ ವಸಂತಕ್ಕೆ ಕಾಲಿಟ್ಟಿರುವ ಸುಸೇನ್ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸುಸೇನ್ ಖಾನ್ ಗೆ ಸಿನಿಮಾಗಣ್ಯರು ಮತ್ತು ಸಿನಿಮಾಪ್ರೇಕ್ಷಕರು ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬದ ಶುಭಾಶಯಗಳ ತಿಳಿಸುತ್ತಿದ್ದಾರೆ.

  ಹುಟ್ಟುಹಬ್ಬದ ದಿನ ಸುಸೇನ್ ಹಳದಿ ಬಣ್ಣದ ಡ್ರೆಸ್ ನಲ್ಲಿ ಕಂಗೊಳಿಸುತ್ತಿದ್ದಾರೆ. ಹುಟ್ಟುಹಬ್ಬದ ವಿಶೇಷ ಫೋಟೋವನ್ನು ಸುಸೇನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಮಾಜಿ ಪತ್ನಿಯ ಸ್ಟನಿಂಗ್ ಲುಕ್ ಗೆ ಹೃತಿಕ್ ರೋಷನ್ ಫಿದಾ ಆಗಿದ್ದಾರೆ. ಸುಸೇನ್ ಹುಟ್ಟುಹಬ್ಬ ಸಂತಸದಲ್ಲಿ ತನ್ನ ಜೀವನಕ್ಕೆ ಕೃತಜ್ಞತಾ ಸಂದೇಶವನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ..

  ಸುಶಾಂತ್ ಸಿಂಗ್ ಸಾವಿನ ಪ್ರಕರಣ: ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಹೃತಿಕ್ ರೋಷನ್ ತಾಯಿ

  ಮಾಜಿ ಪತ್ನಿಗೆ ವಿಶ್ ಮಾಡಿದ ಹೃತಿಕ್

  ಮಾಜಿ ಪತ್ನಿಗೆ ವಿಶ್ ಮಾಡಿದ ಹೃತಿಕ್

  ಸುಸೇನ್ ಖಾನ್ ಪೋಸ್ಟ್ ಗೆ ಹೃತಿಕ್ 'ಲವ್ ಇಟ್' ಎಂದು ಕಾಮೆಂಟ್ ಮಾಡಿ ಹಾರ್ಟ್ ಇಮೋಜಿ ಕಳುಹಿಸಿದ್ದಾರೆ. ಮತ್ತೊಂದು ಕಾಮೆಂಟ್ ನಲ್ಲಿ ಮಾಜಿ ಪತ್ನಿಗೆ ಹುಟ್ಟುಹಬ್ಬದ ಶುಭಾಯತಿಳಿಸಿದ್ದಾರೆ. ಮಾಜಿ ಪತಿಯ ಪ್ರೀತಿಯ ವಿಶ್ ಗೆ ಸುಸೇನ್ ಖಾನ್ ಹಾರ್ಟ್ ಇಮೋಜಿ ಕಳುಹಿಸಿದ್ದಾರೆ.

  ತನ್ನ ಜೀವನದ ಬಗ್ಗೆ ದೀರ್ಘವಾದ ಪತ್ರ ಬರೆದ ಸುಸೇನ್

  ತನ್ನ ಜೀವನದ ಬಗ್ಗೆ ದೀರ್ಘವಾದ ಪತ್ರ ಬರೆದ ಸುಸೇನ್

  ಸುಸೇನ್ ಹುಟ್ಟುಹಬ್ಬದ ದಿನ ತನ್ನ ಜೀವನದ ಬಗ್ಗೆ ದೀರ್ಘವಾದ ಪೋಸ್ಟ್ ಹಾಕಿದ್ದಾರೆ. "ಪ್ರೀತಿಯ ಜೀವನವು ನನಗೆ ಉತ್ತಮ ಅವಕಾಶಗಳನ್ನು, ಅತ್ಯುತ್ತಮ ಅನುಗ್ರಹವನ್ನು, ಅತ್ಯುತ್ತಮ ಮಾರ್ಗದರ್ಶನವನ್ನು ಮತ್ತು ಪ್ರೀತಿಯಿಂದ ನನ್ನನ್ನು ಸುತ್ತುವರೆದಿರುವ ಅತ್ಯುತ್ತಮ ಮನುಷ್ಯರನ್ನು ನೀಡಿದಕ್ಕಾಗಿ ಧನ್ಯವಾದಗಳು. ಈ ಜಗತ್ತು ನನಗೆ ಆಶೀರ್ವಾದಿಸಿದ ಎಲ್ಲದಕ್ಕೂ ನಾನು ಅತ್ಯಂತ ಕೃತಜ್ಞರಾಗಿರುವ ಹೃದಯ ಹೊಂದಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

  ಮಕ್ಕಳಿಗಾಗಿ ಒಂದಾದ ಜೋಡಿ

  ಮಕ್ಕಳಿಗಾಗಿ ಒಂದಾದ ಜೋಡಿ

  ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ಇಬ್ಬರೂ ಕಾನೂನುಬದ್ದವಾಗಿ ವಿಚ್ಛೇದನ ಪಡೆದಿದ್ದಾರೆ. ಆದರೂ ಇಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ. ಇಬ್ಬರು ಮುದ್ದಾದ ಮಕ್ಕಳಿಗಾಗಿ ಹೃತಿಕ್ ಮತ್ತು ಸುಸೇನ್ ಆಗಾಗ ಒಟ್ಟಿಗೆ ಸಮಯ ಕಳೆಯುತ್ತಾರೆ. ಅಲ್ಲದೆ ಲಾಕ್ ಡೌನ್ ಸಮಯದಲ್ಲಿ ಸುಸೇನ್ ಖಾನ್, ಮಕ್ಕಳ ಜೊತೆ ಹೃತಿಕ್ ರೋಷನ್ ಮನೆಯಲ್ಲೇ ಇದ್ದರು.

  ಕತ್ತಿ ಹಿಡಿದು ಕುದುರೆ ಏರಿದ ಶ್ರೀಲೀಲಾ ಲುಕ್ ನೋಡಿ ಎಲ್ಲರೂ ಶಾಕ್ | SreeLeela Photoshoot | Filmibeat Kannada
  ಹೃಿತಿಕ್ ಬಳಿ ಇರುವ ಸಿನಿಮಾಗಳು

  ಹೃಿತಿಕ್ ಬಳಿ ಇರುವ ಸಿನಿಮಾಗಳು

  ಹೃತಿಕ್ ರೋಷನ್ ಸದ್ಯ ಯಾವುದೇ ಸಿನಿಮಾವನ್ನು ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ. ಕೊನೆಯದಾಗಿ ಹೃತಿಕ್ ವಾರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಚಿತ್ರದಲ್ಲಿ ಟೈಗರ್ ಶ್ರಾಫ್ ಜೊತೆ ಕಾಣಿಸಿಕೊಂಡಿದ್ದರು. ವಾರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡಿದೆ. ಬಳಿಕ ಲಾಕ್ ಡೌನ್ ನಿಂದ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ.

  English summary
  Bollywood Actor Hrithik Roshan Impressed on Ex Wife Sussanne Khan's Birthday Look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X