»   » ಕ್ರಿಷ್ ಮತ್ತು ಜಸ್ಟ್ ಡಾನ್ಸ್: ಹೃತಿಕ್ ಡೋಲಾಯಮಾನ

ಕ್ರಿಷ್ ಮತ್ತು ಜಸ್ಟ್ ಡಾನ್ಸ್: ಹೃತಿಕ್ ಡೋಲಾಯಮಾನ

Posted By:
Subscribe to Filmibeat Kannada
ಜಸ್ಟ್ ಡಾನ್ಸ್ ಟಿವಿ ಶೋ ಮೂಲಕ ಕಿರುತೆರೆಗೆ ಪ್ರವೇಶ ಪಡೆದಿದ್ದ ಬಾಲಿವುಡ್ ಸುಂದರಾಂಗ ಹೃತಿಕ್ ರೋಶನ್ ಅವರಿಗೆ ಈಗ ಮತ್ತೆ ಕಿರುತೆರೆಯಿಂದ ಆಫರ್ ಬಂದಿದೆ. ಆದರೆ ಹೃತಿಕ್ ಅದನ್ನು ಒಪ್ಪಿಕೊಳ್ಳಲೋ ಬಿಡಲೋ ಎಂಬ ಸಂದಿಗ್ಧತೆಯಲ್ಲಿ ಸಿಲುಕಿದ್ದಾರೆ.

ಈ ಮೊದಲು ಹೃತಿಕ್ ನಡೆಸಿಕೊಟ್ಟಿದ್ದ ಜಸ್ಟ್ ಡಾನ್ಸ್ ಕಾರ್ಯಕ್ರಮಕ್ಕೆ ಅತ್ಯುತ್ತಮ ಟಿಆರ್ ಪಿ ಬಂದಿತ್ತು. ಹಾಗಾಗಿಯೇ ಅದೇ ಚಾನೆಲ್ ಈಗ ಮತ್ತೆ ಪ್ರಾರಂಭವಾಗಲಿರುವ ಹೃತಿಕ್ ಗೆ ಬುಲಾವ್ ನೀಡಿದೆ. ಆದರೆ 'ಕ್ರಿಷ್- 3' ಚಿತ್ರದಲ್ಲಿ ಬಿಜಿಯಾಗಿರುವ ಹೃತಿಕ್, ಬಂದ ಅವಕಾಶಕ್ಕೆ ಓಕೆ ಎನ್ನಲು ಮೀನ-ಮೇಷ ಎಣಿಸುತ್ತಿದ್ದಾರೆ.

ಕಳೆದ ಬಾರಿ ಈ ಶೋಗೆ ರು. 1.75 ಕೋಟಿ ಸಂಭಾವನೆ ಪಡೆದಿದ್ದ ಹೃತಿಕ್ ಅವರಿಗೆ ಈ ಬಾರಿ 2 ಕೋಟಿ ಆಫರ್ ನೀಡಲಾಗಿದೆ. ಆದರೆ ಸಂಪೂರ್ಣವಾಗಿ ಕ್ರಿಷ್-3 ಮೇಲೆ ಗಮನ ಕೇಂದ್ರೀಕರಿಸಿರುವ ಹೃತಿಕ್, ಅದನ್ನು ಬಿಟ್ಟು ಬೇರೇನನ್ನೂ ಮಾಡುವ ಯೋಚನೆಯಲ್ಲಿ ಇಲ್ಲ.

ವಿಷಯ ಇದಿಷ್ಟೇ ಅಲ್ಲ, ಕ್ರಿಶ್- 3 ಗೆ ಸಹನಿರ್ದೇಶಕರೂ ಆಗಿ ಕೆಲಸ ಮಾಡುತ್ತಿರುವ ಹೃತಿಕ್, ನಟನೆ ಜೊತೆಗೆ ನಿರ್ಮಾಣದಲ್ಲೂ ಸಕ್ರಿಯರಾಗಿ ಇರಬೇಕಾಗಿದೆ. ಎರಡನ್ನೂ ಹೃತಿಕ್ ಮಾಡುತ್ತಾರೆಂದರೆ ಅದನ್ನು ಅವರು ಹೇಗೆ ಬ್ಯಾಲೆನ್ಸ್ ಮಾಡುತ್ತಾರೆ ಎಂಬುದು ಅವರನ್ನು ಅವಲಂಬಿಸಿದೆ.

ಒಟ್ಟಿನಲ್ಲಿ, ಹೃತಿಕ್ ಮುಂದೆ ಈಗ ಎರಡು ಆಯ್ಕೆಗಳಿವೆ. ಒಂದು ಜಸ್ಟ್ ಡಾನ್ಸ್- 2, ಇನ್ನೊಂದು ಕ್ರಿಷ್- 3. ಯಾವುದನ್ನು ಹೃತಿಕ್ ಆಯ್ಕೆ ಮಾಡಿಕೊಳ್ಳುತ್ತಾರೋ? ಯಾವುದನ್ನು ಮಾಡಿದರೆ ಅವರಭಿಮಾನಿಗಳು ಖುಷಿಯಾಗುತ್ತಾರೋ? (ಏಜೆನ್ಸೀಸ್)

English summary
Hrithik Roshan is in a big dilemma whether to judge Just Dance or not as he wants to focus completely on his superhero flick Krrish 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada