ನಟ ಹೃತಿಕ್ ರೋಷನ್‌ಗೆ ಬರಲಿದೆ ಕ್ರೈಂ ಬ್ರ್ಯಾಂಚ್‌ನಿಂದ ನೊಟೀಸ್

ನಟ ಹೃತಿಕ್ ರೋಷನ್‌ಗೆ ಹಳೆ ಪ್ರಕರಣವೊಂದು ಬೆನ್ನೇರಿದೆ. ಕಂಗನಾ ರಣೌತ್ ಹಾಗೂ ಹೃತಿಕ್ ನಡುವೆ ಆಗಿದ್ದ ವಿವಾದ ಈಗ ಮತ್ತೆ ತಲೆಎತ್ತಿದ್ದು, ಹೃತಿಕ್ ಗೆ ಅಪರಾಧ ವಿಭಾಗದ ನೊಟೀಸ್ ಬರಲಿದೆ.

ಹೃತಿಕ್ ರೋಷನ್ ಹಾಗೂ ಕಂಗನಾ ರಣೌತ್ ನಡುವೆ 2016 ರ ಸಂದರ್ಭದಲ್ಲಿ ವಿವಾದವೊಂದು ಭುಗಿಲೆದ್ದಿತ್ತು. ಕಂಗನಾ ವಿರುದ್ಧ ದೂರು ನೀಡಿದ್ದ ಹೃತಿಕ್ ರೋಷನ್, ಕಂಗನಾ ತಮಗೆ ಸತತ ಇ-ಮೇಲ್ ಕಳಿಸುತ್ತಿದ್ದಾರೆ. ಬೆತ್ತಲೆ ಚಿತ್ರಗಳನ್ನು ಸಹ ಕಳಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇದಕ್ಕೆ ಪ್ರತಿಯಾಗಿ ದೂರು ನೀಡಿದ್ದ ಕಂಗನಾ, ನನ್ನ ಹಾಗೂ ಹೃತಿಕ್ ರೋಷನ್ ನಡುವೆ ಇರುವ ಅಕ್ರಮ ಸಂಬಂಧವನ್ನು ಮುಚ್ಚಿಹಾಕಲು ಹೃತಿಕ್ ದೂರು ನೀಡಿದ್ದಾನೆ ಎಂದು ಹೇಳಿದ್ದರು. ಅಲ್ಲದೆ ಹೃತಿಕ್ ರೋಷನ್ ತಮಗೆ 900 ಕ್ಕೂ ಹೆಚ್ಚು ಇ-ಮೇಲ್ ಕಳಿಸಿರುವುದಾಗಿ ಆರೋಪಿಸಿದ್ದರು.

900 ಕ್ಕು ಹೆಚ್ಚು ಇ-ಮೇಲ್ ಮಾಡಿರುವ ಅನಾಮಿಕ

900 ಕ್ಕು ಹೆಚ್ಚು ಇ-ಮೇಲ್ ಮಾಡಿರುವ ಅನಾಮಿಕ

ಇದೇ ವಿಷಯವಾಗಿ ಮತ್ತೆ ದೂರು ದಾಖಲಿಸಿದ ಹೃತಿಕ್ ರೋಷನ್, ಯಾರೋ ಒಬ್ಬ ಅನಾಮಿಕ ತಮ್ಮ ಇ-ಏಲ್ ಐಡಿಯನ್ನು ಹೋಲುವ ಮೇಲ್ ಐಡಿಯಿಂದ ಕಂಗನಾಗೆ 900 ಕ್ಕೂ ಹೆಚ್ಚು ಮೇಲ್‌ಗಳನ್ನು ಕಳಿಸಿದ್ದಾನೆ ಎಂದು 2016 ರಲ್ಲಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು.

ಅಪರಾಧ ವಿಭಾಗಕ್ಕೆ ವರ್ಗ ಮಾಡಲಾಗಿದೆ

ಅಪರಾಧ ವಿಭಾಗಕ್ಕೆ ವರ್ಗ ಮಾಡಲಾಗಿದೆ

2020 ರಲ್ಲಿ ಹೃತಿಕ್ ರೋಷನ್ ನ ಕಾನೂನು ವಿಭಾಗವು 2016 ರಲ್ಲಿ ನೀಡಿದ್ದ ಆ ಪ್ರಕರಣ ಏನಾಯಿತು ಎಂದು ಪೊಲೀಸರ ಬಳಿ ಲಿಖಿತವಾಗಿ ವಿಚಾರಿಸಿದ ನಂತರ ಪ್ರಕರಣವನ್ನು ಅಪರಾಧ ವಿಭಾಗಕ್ಕೆ ವರ್ಗ ಮಾಡಲಾಗಿದೆ. ಈ ಮೊದಲು ಪೊಲೀಸರು ನೀಡಿದ್ದ ವಿವರಣೆಯಲ್ಲಿ ಇ-ಮೇಲ್ ಐಡಿ ಬಳಕೆದಾರ ಪತ್ತೆಯಾಗಲಿಲ್ಲ ಎಂದು ಉಲ್ಲೇಖಿಸಿದ್ದರು.

ಕಂಗನಾ ರಣೌತ್‌ಗೂ ನೊಟೀಸ್ ಸಾಧ್ಯತೆ

ಕಂಗನಾ ರಣೌತ್‌ಗೂ ನೊಟೀಸ್ ಸಾಧ್ಯತೆ

ಇದೀಗ ಅಪರಾಧ ವಿಭಾಗದ ಅಧಿಕಾರಿಗಳು ಹೇಳಿರುವಂತೆ, ಹೃತಿಕ್ ರೋಷನ್ ಗೆ ಕೆಲವೇ ದಿನಗಳಲ್ಲಿ ನೊಟೀಸ್ ನೀಡಿ ಅವರನ್ನು ಕರೆಸಿಕೊಂಡು ಅವರ ಹೇಳಿಕೆ ದಾಖಲು ಮಾಡಿಕೊಳ್ಳಲಾಗುವುದು ಎಂದಿದ್ದಾರೆ. ಈಗಾಗಲೇ 37 ಹೇಳಿಕೆಗಳನ್ನು ಪ್ರಕರಣದ ಸಂಬಂಧ ದಾಖಲಿಸಿಕೊಳ್ಳಲಾಗಿದೆ. ಅದಾದ ಬಳಿಕ ಕಂಗನಾ ರಣೌತ್‌ಗೂ ಸಹ ನೊಟೀಸ್ ನೀಡುವ ಸಾಧ್ಯತೆ ಇದೆ.

Recommended Video

ರಶ್ಮಿಕಾ ಮುಂಬೈನಲ್ಲಿ ಖರೀದಿಸಿದ ಮನೆಯ ಬೆಲೆ ಎಷ್ಟು ಕೋಟಿ ಗೊತ್ತಾ? | Filmibeat Kannada
2000 ರಲ್ಲಿ ಸೂಸೆನ್ ಜೊತೆ ವಿವಾಹ

2000 ರಲ್ಲಿ ಸೂಸೆನ್ ಜೊತೆ ವಿವಾಹ

2000 ರಲ್ಲಿ ನಟ ಹೃತಿಕ್ ರೋಷನ್ ಸೂಸೆನ್ ಖಾನ್ ಜೊತೆಗೆ ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಈ ಜೋಡಿಯು ಪರಸ್ಪರ ಒಪ್ಪಿಗೆ ಮೇರೆಗೆ ಬೇರಾಗಿದ್ದಾರೆ. ಆದರೆ 2014-15 ರ ಸಮಯದಲ್ಲಿ ಹೃತಿಕ್-ಕಂಗನಾ ನಡುವೆ ಸಂಬಂಧ ಏರ್ಪಟ್ಟಿತ್ತು ಎನ್ನಲಾಗಿತ್ತು. ಕಂಗನಾ ದಾಖಲಿಸಿದ್ದ ಸಂಬಂಧದ ಪ್ರಕರಣ ಸಾಕ್ಷ್ಯಗಳ ಕೊರತೆಯಿಂದ ಮುಚ್ಚಿ ಹೋಯಿತು.

More from Filmibeat

English summary
Bollywood actor Hrithik Roshan likely to be summoned by crime branch in imposter e mail case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X