For Quick Alerts
  ALLOW NOTIFICATIONS  
  For Daily Alerts

  ಗಂಗೂಲಿ ಬಯೋಪಿಕ್ ಅಧಿಕೃತ: ರೇಸ್‌ನಲ್ಲಿ ಇಬ್ಬರು ಸ್ಟಾರ್ ನಟರು?

  |

  ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ಮೊಹಮ್ಮದ್ ಅಜರುದ್ದೀನ್, ಕಪಿಲ್ ದೇವ್ ನಂತರ ಈಗ ಭಾರತೀಯ ಕ್ರಿಕೆಟ್ ಲೋಕ ಕಂಡ ಅತ್ಯುತ್ತಮ ನಾಯಕ, ಬಂಗಾಳದ ಹುಲಿ, ಕ್ರಿಕೆಟಿಗರ ಪ್ರೀತಿಯ ದಾದಾ ಸೌರವ್ ಗಂಗೂಲಿ ಬಯೋಪಿಕ್ ಘೋಷಣೆಯಾಗಿದೆ. ಹಲವು ದಿನಗಳಿಂದ ಗಂಗೂಲಿ ಬಯೋಪಿಕ್ ಆಗುತ್ತದೆ ಎಂಬ ಸುದ್ದಿಗಳು ಇಂಡಸ್ಟ್ರಿಯಲ್ಲಿ ಚರ್ಚೆಯಾಗುತ್ತಿದ್ದವು. ಈಗ ಅಧಿಕೃತವಾಗಿ ಘೋಷಣೆಯಾಗಿದೆ.

  ನಿರ್ಮಾಪಕ ಲವ್ ರಂಜನ್ ಮತ್ತು ಅಂಕುರ್ ಗಾರ್ಗ್ ಜಂಟಿಯಾಗಿ ಈ ಚಿತ್ರ ನಿರ್ಮಿಸಲಿದ್ದು, ಸೆಪ್ಟೆಂಬರ್ 9 ರಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಗಂಗೂಲಿ ಬಯೋಪಿಕ್ ಘೋಷಣೆಯಾದ ಬಳಿಕ ಈ ಬಗ್ಗೆ ಸೌರವ್ ಸಹ ಟ್ವಿಟ್ಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

  ತೆರೆಮೇಲೆ ಸೌರವ್ ಗಂಗೂಲಿ ಜೀವನಚರಿತ್ರೆ: ದಾದಾ ಪಾತ್ರದಲ್ಲಿ ಸ್ಟಾರ್ ನಟತೆರೆಮೇಲೆ ಸೌರವ್ ಗಂಗೂಲಿ ಜೀವನಚರಿತ್ರೆ: ದಾದಾ ಪಾತ್ರದಲ್ಲಿ ಸ್ಟಾರ್ ನಟ

  ಭಾರತೀಯ ಕ್ರಿಕೆಟ್ ತಂಡಕ್ಕೆ ಹೊಸ ಆಯಾಮ ನೀಡಿದ, ವಿಶ್ವ ಕ್ರಿಕೆಟ್‌ನಲ್ಲಿ ಭಾರತ ತಂಡದ ಹಿರಿಮೆ ಹೆಚ್ಚಿಸಿದ ಹಾಗೂ ಟೀಂ ಇಂಡಿಯಾಗೆ ಹಲವು ಪ್ರತಿಭಾನ್ವಿತ ಆಟಗಾರರನ್ನು ಕೊಡುಗೆ ನೀಡಿದ ಖ್ಯಾತಿ ಸೌರವ್ ಗಂಗೂಲಿ ಅವರದ್ದು. ಸೆಹ್ವಾಗ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಮೊಹಮ್ಮದ್ ಕೈಫ್ ಅಷ್ಟೇ ಏಕೆ ಎಂಎಸ್ ಧೋನಿ ಸಹ ಗಂಗೂಲಿ ಗರಡಿಯಲ್ಲಿ ಬೆಳೆದವರೇ. ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿರುವ ಗಂಗೂಲಿ ಪಾತ್ರಕ್ಕಾಗಿ ಇಬ್ಬರು ಸ್ಟಾರ್ ನಟರ ಹೆಸರು ಚರ್ಚೆಯಲ್ಲಿದೆ. ಯಾರದು? ಮುಂದೆ ಓದಿ...

  ಕ್ರಿಕೆಟ್ ನನ್ನ ಜೀವನ

  ಕ್ರಿಕೆಟ್ ನನ್ನ ಜೀವನ

  ಬಯೋಪಿಕ್ ಘೋಷಣೆಯಾದ ಬಳಿಕ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿರುವ ಗಂಗೂಲಿ, ''ಕ್ರಿಕೆಟ್ ನನ್ನ ಜೀವನ, ನನ್ನ ಜೀವನದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ, ಸಮಾಜದಲ್ಲಿ ಘನತೆಯಿಂದ ತಲೆ ಎತ್ತಿ ಮುಂದೆ ಸಾಗುವ ಅವಕಾಶ ಮಾಡಿಕೊಟ್ಟಿದೆ. ಲವ್ ಫಿಲಂಸ್ ತನ್ನ ಬಯೋಪಿಕ್ ಘೋಷಣೆ ಮಾಡಿರುವುದು ಥ್ರಿಲ್ಲಿಂಗ್ ಆಗಿದೆ. ನನ್ನ ಕ್ರಿಕೆಟ್ ಜೀವನವನ್ನು ತೆರೆಮೇಲೆ ನೋಡುವುದು ರೋಮಾಂಚನದ ಸಂಗತಿ'' ಎಂದಿದ್ದಾರೆ.

  ಮಿಥಾಲಿ ರಾಜ್ ಬಯೋಪಿಕ್; ನಿರ್ದೇಶಕರು ಬದಲಾಗಿದ್ದೇಕೆ?ಮಿಥಾಲಿ ರಾಜ್ ಬಯೋಪಿಕ್; ನಿರ್ದೇಶಕರು ಬದಲಾಗಿದ್ದೇಕೆ?

  ಇಬ್ಬರು ಸ್ಟಾರ್ ನಟರ ಹೆಸರು?

  ಇಬ್ಬರು ಸ್ಟಾರ್ ನಟರ ಹೆಸರು?

  ಸೌರವ್ ಗಂಗೂಲಿ ಪಾತ್ರಕ್ಕೆ ಯಾವ ನಟ ಸೂಕ್ತ ಎನ್ನುವ ಕುತೂಹಲ ಹೆಚ್ಚಾಗಿದೆ. ಸದ್ಯಕ್ಕೆ ಬಯೋಪಿಕ್ ಮಾತ್ರ ಅನೌನ್ಸ್ ಮಾಡಿರುವ ಚಿತ್ರತಂಡ ಕಲಾವಿದರು ಯಾರೆಂದು ಆಯ್ಕೆ ಮಾಡಿಕೊಂಡಿಲ್ಲ. ಈ ನಡುವೆ ಬಿಟೌನ್ ಇಂಡಸ್ಟ್ರಿಯಲ್ಲಿ ಇಬ್ಬರು ಖ್ಯಾತ ನಾಮರ ಹೆಸರು ಚಾಲ್ತಿಯಲ್ಲಿದೆ. ಹೃತಿಕ್ ರೋಷನ್ ಮತ್ತು ರಣ್ಬೀರ್ ಕಪೂರ್ ಹೆಸರು ಗಂಗೂಲಿ ಬಯೋಪಿಕ್‌ಗಾಗಿ ಹೆಚ್ಚು ಕೇಳಿ ಬರ್ತಿದೆ. ಇದು ನಿಜವೇ ಆದರೆ ಈ ಇಬ್ಬರಲ್ಲಿ ಒಬ್ಬರು ತೆರೆಮೇಲೆ ದಾದಾ ರೂಪ ತಾಳಲಿದ್ದಾರೆ.

  ಸುಶಾಂತ್ ಸಿಂಗ್ ಸ್ಮರಿಸಿದ ಫ್ಯಾನ್ಸ್

  ಸುಶಾಂತ್ ಸಿಂಗ್ ಸ್ಮರಿಸಿದ ಫ್ಯಾನ್ಸ್

  ಒಂದು ವೇಳೆ ಸುಶಾಂತ್ ಸಿಂಗ್ ರಜಪೂತ್ ಬದುಕಿದ್ದರೆ ಖಂಡಿತವಾಗಿಯೂ ಗಂಗೂಲಿ ಬಯೋಪಿಕ್‌ಗೆ ಸೂಕ್ತವಾಗಿರುತ್ತಿದ್ದರು ಎಂಬ ಅಭಿಪ್ರಾಯವೂ ಇದೆ. ಸುಶಾಂತ್ ಇರುವಾಗಲೇ ಗಂಗೂಲಿ ಬಯೋಪಿಕ್ ಬಗ್ಗೆ ಚರ್ಚೆಯಾಗಿತ್ತು. ಆಗ ಇದೇ ಸುಶಾಂತ್ ಹೆಸರು ಕೇಳಿ ಬಂದಿತ್ತು ಎನ್ನುವ ಸುದ್ದಿಯೂ ಇದೆ. ಆದ್ರೀಗ, ಸುಶಾಂತ್ ಬದುಕಿಲ್ಲ. ಹಾಗಾಗಿ, ಇದು ಫ್ಯಾನ್ಸ್‌ಗೆ ನಿರಾಸೆ ಮೂಡಿಸಿದೆ.

  ಯಾರ ಪಾತ್ರದಲ್ಲಿ ಯಾವ ನಟ ನಟಿಸಿದ್ದರು?

  ಯಾರ ಪಾತ್ರದಲ್ಲಿ ಯಾವ ನಟ ನಟಿಸಿದ್ದರು?

  ಮಹೇಂದ್ರ ಸಿಂಗ್ ಧೋನಿ ಪಾತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ನಟಿಸಿದ್ದರು. ಕಮರ್ಷಿಯಲ್ ಆಗಿ ಈ ಚಿತ್ರ ಬಹಳ ದೊಡ್ಡ ಯಶಸ್ಸು ಕಂಡಿತ್ತು. 'ಅಜರ್' ಚಿತ್ರದಲ್ಲಿ ಇಮ್ರಾನ್ ಹಶ್ಮಿ ಮೊಹಮ್ಮದ್ ಅಜರುದ್ದೀನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಚಿನ್ ತೆಂಡೂಲ್ಕರ್ ಸಾಕ್ಷ್ಯಚಿತ್ರ ಮಾದರಿಯಲ್ಲಿತ್ತು. ಸ್ವತಃ ಸಚಿನ್ ಅವರೇ ಕಾಣಿಸಿಕೊಂಡಿದ್ದರು. '83' ಚಿತ್ರದಲ್ಲಿ ರಣ್ವೀರ್ ಸಿಂಗ್, ಕಪಿಲ್ ದೇವ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  ಮಿಥಾಲಿ ರಾಜ್ ಬಯೋಪಿಕ್

  ಮಿಥಾಲಿ ರಾಜ್ ಬಯೋಪಿಕ್

  ಇನ್ನು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್ ಬಯೋಪಿಕ್ ಸಹ ತಯಾರಾಗಿದೆ. 'ಶಭಾಶ್ ಮಿಥು' ಎನ್ನುವ ಹೆಸರಿನಲ್ಲಿ ಬಯೋಪಿಕ್ ರೆಡಿಯಾಗಿದ್ದು, ತಾಪ್ಸಿ ಪೆನ್ನು ಮಿಥಾಲಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಭಾರತೀಯ ಮಹಿಳಾ ಬೌಲರ್ ಜುಲಾನ್ ಗೋಸ್ವಾಮಿ ಬಯೋಪಿಕ್‌ನಲ್ಲಿ ಅನುಷ್ಕಾ ಶರ್ಮಾ ನಟಿಸುವ ಸಾಧ್ಯತೆ ಇದೆ ಎಂದಿದ್ದಾರೆ. ಈ ಸುದ್ದಿ ಅಧಿಕೃತವಾಗಿಲ್ಲ.

  English summary
  Producers Luv Ranjan and Ankur Garg have announced a biopic on legendary cricketer Sourav Ganguly.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X