For Quick Alerts
  ALLOW NOTIFICATIONS  
  For Daily Alerts

  ಉಚಿತ ಎಸಿ ಸರ್ವಿಸ್ ಕೇಳಿದ ಅಭಿಮಾನಿಗೆ ಹೃತಿಕ್ ರೋಷನ್ ಕೂಲ್ ಪ್ರತಿಕ್ರಿಯೆ

  |

  ಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟ. ಆಗಾಗ ಸುಂದರ ಪೋಸ್ಟ್ ಗಳನ್ನು, ಶುಭಾಶಯಗಳನ್ನು ಹಂಚಿಕೊಳ್ಳುವ ಹೃತಿಕ್, ಇತ್ತೀಚಿಗೆ ಉಚಿತ ಎಸಿ ಸರ್ವಿಸ್ ಕೊಡಿಸುವ ವಿಚಾರವಾಗಿ ಸುದ್ದಿಯಾಗಿದ್ದಾರೆ.

  'ನಿಮ್ಮ ಸೇವಿಗೆ ಸದಾ ಸಿದ್ಧ' ಎನ್ನುವ ಹೃತಿಕ್ ರೋಷನ್ ಟ್ವೀಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಇದು ಅಭಿಮಾನಿಯೊಬ್ಬರು ಉಚಿತ ಎಸಿ ಸರ್ವಿಸ್ ಬಗ್ಗೆ ಕೇಳಿದಕ್ಕೆ ಹೃತಿಕ್ ರೋಷನ್ ನೀಡಿರುವ ಕೂಲ್ ಪ್ರತಿಕ್ರಿಯೆ. ರೂಪಾಲಿ ಎನ್ನುವ ಅಭಿಮಾನಿ, ವಿವಿಧ ಕಂಪೆನಿಗಳ ಹೆಸರುಗಳನ್ನು ಸೇರಿಸಿ ಒಂದು ಸಂದೇಶ ರವಾನಿಸಿದ್ದರು. ಇದಕ್ಕೆ ಅರ್ಬನ್ ಕಂಪನಿ ಪ್ರತಿಕ್ರಿಯೆ 'ನೀಡಿ ಇಷ್ಟು ಮಾಡಿದ್ದೀರಾ ಅಂದ್ಮೇಲೆ ಎಸಿ ಸರ್ವಿಸ್ ಕೂಡ ಮಾಡಿಸಿ' ಎಂದು ಪ್ರತಿಕ್ರಿಯೆ ನೀಡಿದ್ದರು.

  ಹೃತಿಕ್ ರೋಷನ್ v/s ಕಂಗನಾ: ಕ್ರೈಂ ಬ್ರಾಂಚ್ ಗೆ ಬಂದ ನಟ ಹೃತಿಕ್ ರೋಷನ್

  ಇದಕ್ಕೆ ಉತ್ತರಿಸಿದ್ದ ರೂಪಾಲಿ, 'ಹೃತಿಕ್ ರೋಷನ್ ನೀವು ಎಸಿ ಸರ್ವಿಸ್ ಮಾಡಿಸಿಕೊಂಡಿದ್ದೀರಿ ಎಂದುಕೊಳ್ಳುತ್ತೇನೆ. ಯಾಕಂದ್ರೆ ನೀವು ತುಂಬಾ ಹಾಟ್ ಆಗಿದ್ದೀರಿ' ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಮತ್ತೊಂದು ಟ್ವೀಟ್ ಮಾಡಿ, 'ನನಗೆ ಫ್ರೀ ಎಸಿ ಸರ್ವಿಸ್ ಪಡೆಯಲು ಸಹಾಯ ಮಾಡ್ತೀರಾ?' ಎಂದು ಕೇಳಿದ್ದಾರೆ.

  ರೂಪಾಲಿ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಹೃತಿಕ್, 'ನಿಮ್ಮ ಸರ್ವಿಸ್ ಗೆ ಸದಾ ಸಿದ್ಧ' ಎಂದಿದ್ದಾರೆ. ಹೃತಿಕ್ ಈ ಟ್ವೀಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಹೃತಿಕ್ ಪ್ರತಿಕ್ರಿಯೆ ನೋಡಿ ರೂಪಾಲಿ 'ಓ ದೇವರೆ...' ಎಂದಿದ್ದಾರೆ. ಅಷ್ಟೆಯಲ್ಲ ಅರ್ಬನ್ ಕಂಪೆನಿ ಕೂಡ ಟ್ವೀಟ್ ಮಾಡಿ, ಸರ್ವಿಸ್ ಸಬ್ಸ್ ಕ್ರಿಪ್ಷನ್ ನೊಂದಿಗೆ ಇತರ ಸೇವಾ ವೋಚರ್ ಗಳನ್ನು ರವಾನಿಸುತ್ತಿದ್ದೇವೆ' ಎಂದು ಹೇಳಿ ಬಂಪರ್ ಆಫರ್ ನೀಡಿದೆ.

  ಉಮಾಪತಿ ಗಿಫ್ಟ್,ತರುಣ್ ಗೆ ಕ್ರೆಡಿಟ್ ಅಂತಿದ್ದಾರೆ ರಾಬರ್ಟ್ ನೋಡಿದ ಪ್ರೇಕ್ಷಕರು | Roberrt | Filmibeat Kannada

  ಅಭಿಮಾನಿ ರೂಪಾಲಿಗೆ ಹೃತಿಕ್ ಕಡೆಯಿಂದ ಪ್ರತಿಕ್ರಿಯೆ ಸಿಕ್ಕ ಸಂತೋಷ ಒಂದೆಡೆಯಾದರೆ, ಅರ್ಬನ್ ಕಂಪನಿಯ ಆಫರ್ ಮತ್ತೊಂದೆಡೆ. ಒಟ್ನಲ್ಲಿ ಡಬಲ್ ಸಂತಸದಲ್ಲಿದ್ದಾರೆ ರೂಪಾಲಿ.

  English summary
  Actor Hrithik Roshan replies to fan who requested him to get her Free AC service.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X