»   » ರಿಲೀಸ್ ಗೂ ಮುನ್ನ ಕೋಟಿ-ಕೋಟಿ ಬಾಚಿದ 'ಮೊಹೆಂಜೋದಾರೊ'

ರಿಲೀಸ್ ಗೂ ಮುನ್ನ ಕೋಟಿ-ಕೋಟಿ ಬಾಚಿದ 'ಮೊಹೆಂಜೋದಾರೊ'

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಕನ್ನಡತಿ ಪೂಜಾ ಹೆಗ್ಡೆ ಒಂದಾಗಿ ಕಾಣಿಸಿಕೊಂಡಿರುವ ಐತಿಹಾಸಿಕ ಕಥೆಯಾಧರಿತ 'ಮೊಹೆಂಜೋದಾರೊ' ತೆರೆಗೆ ಬರುವ ಮುನ್ನವೇ ಸಾಕಷ್ಟು ಸುದ್ದಿ ಮಾಡುತ್ತಿದೆ.

ಇದೀಗ ಹೃತಿಕ್-ಪೂಜಾ ಜುಗಲ್ ಬಂದಿಯ 'ಮೊಹೆಂಜೋದಾರೊ' ರಿಲೀಸ್ ಗೂ ಮುನ್ನವೇ ಸುಮಾರು 60 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದೆ. ಬಿಡುಗಡೆಗೆ ಮುನ್ನವೇ ಇಷ್ಟರಮಟ್ಟಿಗೆ ಕಲೆಕ್ಷನ್ ಮಾಡಿದ್ದನ್ನು ಕಂಡ ಚಿತ್ರತಂಡ ಕೂಡ ಫುಲ್ ಖುಷ್ ಆಗಿದೆ.[ಡೆಂಗ್ಯೂ ಜ್ವರದಿಂದ ಬಳಲುತ್ತಿರುವ 'ಮೊಹೆಂಜೋದಾರೊ' ಬೆಡಗಿ]

Hrithik Roshan's 'Mohenjo Daro' Earns Over 60 Crores Before Its Release

'ಮೊಹೆಂಜೋದಾರೊ' ಚಿತ್ರದ ಸ್ಯಾಟಲೈಟ್ ಹಕ್ಕು 45 ಕೋಟಿಗೆ, ಮ್ಯೂಸಿಕ್ ಹಕ್ಕು 15 ಕೋಟಿಗೆ ಸೇಲಾಗಿದ್ದು, ಇವರೆಡು ಒಟ್ಟು ಸೇರಿ ಭರ್ಜರಿ 60 ಕೋಟಿ ರೂಪಾಯಿ ಬಿಡುಗಡೆಗೆ ಮುನ್ನ ಗಳಿಕೆ ಮಾಡಿದೆ.

ಆಗಸ್ಟ್ 12, 'ವರಮಹಾಲಕ್ಷ್ಮಿ' ಹಬ್ಬದ ದಿನದಂದು ಇಡೀ ವಿಶ್ವದಾದ್ಯಂತ ಅದ್ಧೂರಿ ಸಿನಿಮಾ 'ಮೊಹೆಂಜೋದಾರೊ' ತೆರೆ ಕಾಣಲಿದ್ದು, ಅದೇ ದಿನ ಅಕ್ಷಯ್ ಕುಮಾರ್ ಅವರ 'ರುಸ್ತುಂ' ಚಿತ್ರ ಕೂಡ ತೆರೆ ಕಾಣುತ್ತಿದೆ.['ಮೊಹೆಂಜೋದಾರೊ'ದಲ್ಲಿ ಹೃತಿಕ್ ಪಟ್ಟದರಸಿಯಾದ ಪೂಜಾ ಹೆಗ್ಡೆ]

Hrithik Roshan's 'Mohenjo Daro' Earns Over 60 Crores Before Its Release

'ಲಗಾನ್' ಚಿತ್ರದ ಖ್ಯಾತಿಯ ನಿರ್ದೇಶಕ ಅಶುತೋಷ್ ಗೌರಿಕ್ಕರ್ ಆಕ್ಷನ್-ಕಟ್ ಹೇಳಿರುವ 'ಮೊಹೆಂಜೋದರೊ', ಪ್ರಚಾರ ಮತ್ತು ಜಾಹೀರಾತು ಸೇರಿದಂತೆ ಸುಮಾರು 115 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗಿದ್ದು, ಈಗಲೇ 60 ಕೋಟಿ ಗಳಿಕೆ ಮಾಡಿದೆ.

ಸಿಂಧು ಕಣಿವೆ ಮತ್ತು ಹರಪ್ಪ ನಾಗರೀಕತೆಯ ಅಂಶಗಳಿರುವ, ಪ್ರೇಮ ಮತ್ತು ಸಾಹಸ ಪ್ರದಾನವಾದ ಥ್ರಿಲ್ಲರ್ 'ಮೊಹೆಂಜೋದಾರೊ' ಯಾವ ರೀತಿ ಪ್ರೇಕ್ಷಕರ ಮನಗೆಲ್ಲುತ್ತದೆ ಅನ್ನೋದು ಇದೇ ವಾರದಲ್ಲಿ ತಿಳಿಯಲಿದೆ.['ಅಸಲಿ ಸತ್ಯ ಹೊರಬೀಳಲಿದೆ': ಕಂಗನಾಗೆ ಟಾಂಗ್ ಕೊಟ್ಟ ಹೃತಿಕ್]

English summary
Pre-release businesses ever in Hrithik Roshan's Mohenjo Daro has reportedly fetched over Rs 60 crore through its satellite, music and other rights. Actress Pooja Hegde in the lead. The movie is directed by Ashutosh Gowariker.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada