For Quick Alerts
ALLOW NOTIFICATIONS  
For Daily Alerts

ಮರಿದು ಬಿತ್ತು ಹೃತಿಕ್ ರೋಷನ್ ಮದುವೆ

|

ಕ್ರಿಶ್ 3 ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ನಟ ಹೃತಿಕ್ ರೋಷನ್ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ, ಅವರು ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂದು ಹಲವು ದಿನಗಳಿಂದ ಹರಿದಾಡುತ್ತಿದ್ದ ಸುದ್ದಿ ಸತ್ಯವಾಗಿದೆ. ಪತ್ನಿ ಸುಸಾನ್ ಜತೆಗಿನ ಸಂಬಂಧವನ್ನು ಕಡಿದುಕೊಂಡು ಬೇರೆಯಾಗುವುದಾಗಿ ಹೃತಿಕ್ ರೋಷನ್ ಶುಕ್ರವಾರ ಪ್ರಕಟಿಸಿದ್ದಾರೆ.

ಡಿ.13ರ ಶುಕ್ರವಾರ ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ಹೃತಿಕ್ ರೋಷನ್, ಸೂಸಾನ್ ಅವರು 17 ವರ್ಷಗಳ ನನ್ನ ಜತೆಗಿನ ಸಂಬಂಧವನ್ನು ತೊರೆಯಲು ನಿರ್ಧರಿಸಿದ್ದಾರೆ. ಇದು ನಮ್ಮ ಇಡೀ ಕುಟುಂಬಕ್ಕೆ ಸಂದಿಗ್ಧದ ಸನ್ನಿವೇಶ. ದಯವಿಟ್ಟು ಮಾಧ್ಯಮ ಮತ್ತು ಜನರು ನಮ್ಮ ಖಾಸಗಿತನಕ್ಕೆ ಅಡ್ಡಿಯುಂಟು ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ಮದುವೆ ಎಂಬ ವ್ಯವಸ್ಥೆ ಬಗ್ಗೆ ನಾನು ಬಹಳಷ್ಟು ಗೌರವವನ್ನು ಹೊಂದಿದ್ದೇನೆ ಎಂದು ಹೇಳಿರುವ ಹೃತಿಕ್, ನನ್ನ ಆರೋಗ್ಯದ ಕುರಿತು ಕಾಳಜಿ ವಹಿಸಿದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಆರೋಗ್ಯ ಚೇತರಿಸಿಕೊಂಡಿದ್ದು, ಶೀಘ್ರವೇ ಚಟುವಟಿಕೆಗಳಲ್ಲಿ ತೊಡಗಲು ಸಮರ್ಥನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಹೃತಿಕ್ ಮತ್ತು ಸುಸಾನ್ ದಂಪತಿಗೆ ಹೆಹ್ರಾನ್ (7) ಮತ್ತು ಹಿಧ್ರಾನ್ (5) ಎಂಬ ಇಬ್ಬರು ಮಕ್ಕಳಿದ್ದಾರೆ. ನಟ ಸಂಜಯ ಖಾನ್ ಪುತ್ರಿಯಾದ ಸುಸಾನ್ ಳನ್ನು ಪ್ರೀತಿಸಿ ಹೃತಿಕ್ ಮದುವೆಯಾಗಿದ್ದರು. ಹೃತಿಕ್ ರಿಂದ ಸುನಾನ್ ಬೇರೆಯಾಗಲು ನಿಖರವಾದ ಕಾರಣವೇನೆಂದು ತಿಳಿದು ಬಂದಿಲ್ಲ. ಈ ತಾರಾ ಜೋಡಿಯ ವಿವಾಹ ಬೆಂಗಳೂರು ಹೊರವಲಯದಲ್ಲಿರುವ ಗೋಲ್ಡನ್ ಪಾಮ್ ರೆಸಾರ್ಟ್ ನಲ್ಲಿ 2000ದಲ್ಲಿ ನಡೆದಿತ್ತು.

17 ವರ್ಷಗಳ ಸಂಬಂಧ : ಹೃತಿಕ್ ಮತ್ತು ಸುಸಾನ್ ದಾಂಪತ್ಯಕ್ಕೆ 13 ವರ್ಷ 2000ದಲ್ಲಿ ಅವರು ಹಸೆಮಣೆ ಏರಿದ್ದರು. ಆದರೆ, ವಿವಾಹಕ್ಕೂ ನಾಲ್ಕು ವರ್ಷಗಳ ಮುನ್ನ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಆದ್ದರಿಂದ ಹೃತಿಕ್ ಮತ್ತು ಸುನಾನ್ ಅವರದ್ದು, 17 ವರ್ಷಗಳ ಪ್ರೀತಿಯ ಜೀವನ.

ನಾಲ್ಕು ತಿಂಗಳಿನಿಂದ ದೂರಾಗಿದ್ದರು : ಹೃತಿಕ್ ಮತ್ತು ಸುನಾನ್ ದಂಪತಿ ಕಳೆದ ನಾಲ್ಕು ತಿಂಗಳಿನಿಂದ ದೂರಾಗಿದ್ದರು. ಮುಂಬೈನಲ್ಲಿ ತಮ್ಮ ಪೋಷಕರ ಜೊತೆ ಸುಸಾನ್ ಅವರು ವಾಸಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಹೃತಿಕ್ ಹುಟ್ಟುಹಬ್ಬಕ್ಕೂ ಪೋಷಕರ ಜೊತೆ ಆಗಮಿಸಿ, ಪುನಃ ಪೋಷಕರ ಮನೆಗೆ ಮರಳಿದ್ದರು.

2009ರಲ್ಲಿ ಸುದ್ದಿಯಾಗಿತ್ತು : ಕೈಟ್ಸ್ ಚಿತ್ರದ ನಾಯಕಿ ಬಾರ್ಬರಾ ಮೋರಿ ಜೊತೆ ಹೃತಿಕ್ ತೀರಾ ಆಪ್ತವಾಗಿ ನಡೆದುಕೊಂಡ ಕಾರಣಕ್ಕೆ ಸುನಾನ್ ಅಸಮಾಧಾನಗೊಂಡಿದ್ದರು. ಇಬ್ಬರು ಆಗಲೇ ವಿಚ್ಛೇದನ ಪಡೆಯುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಬಳಿಕ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದರು.

English summary
Bollywood heartthrob Hrithik Roshan Friday, December 13 announced that he and his wife Sussanne have parted ways after the latter decided to annul their marriage. Sussanne has decided to separate from me and end our 17-year relationship. This is a very trying time for the entire family and I request the media and the people to grant us our privacy at this time he said.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more