»   » ಈ ನಟನಿಗೆ ರಜನಿಕಾಂತ್ ತಂದೆಯಂತೆ, ಧನುಷ್ ಸ್ಫೂರ್ತಿಯಂತೆ!

ಈ ನಟನಿಗೆ ರಜನಿಕಾಂತ್ ತಂದೆಯಂತೆ, ಧನುಷ್ ಸ್ಫೂರ್ತಿಯಂತೆ!

Posted By:
Subscribe to Filmibeat Kannada

ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್ ಸದ್ಯ, 'ಕಾಬಿಲ್' ಚಿತ್ರದ ಯಶಸ್ಸಿನ ಸಂತಸದಲ್ಲಿದ್ದಾರೆ. 'ಕಾಬಿಲ್' ಚಿತ್ರ ಈ ವಾರ (ಜನವರಿ 25) ವರ್ಲ್ಡ್ ವೈಡ್ ರಿಲೀಸ್ ಆಗಿದ್ದು, ಅತ್ಯುತ್ತಮ ಪ್ರದರ್ಶನ ಕಾಣುತ್ತಿದೆ.

ಹೀಗೆ, ತಮ್ಮ ನಟನೆ ಮತ್ತು ಸಾಮರ್ಥ್ಯದಿಂದ ಬಾಲಿವುಡ್ ಗ್ರೀಕ್ ಗಾಡ್ ಎನಿಸಿಕೊಂಡಿರುವ ಹೃತಿಕ್ ರೋಷನ್ ಗೆ, ಸೂಪರ್ ಸ್ಟಾರ್ ರಜನಿಕಾಂತ್ ತಂದೆಯಂತೆ ಹಾಗೂ ತಮಿಳು ಧನುಷ್ ಸ್ಫೂರ್ತಿ ಎಂಬುದನ್ನು ಅವರೇ ಬಹಿರಂಗಪಡಿಸಿದ್ದಾರೆ.['ಕಾಬಿಲ್' ಅಸಾಧಾರಣ, ಅಚ್ಚರಿದಾಯಕ, ಅವಾರ್ಡ್ ವಿನ್ನಿಂಗ್ ಚಿತ್ರ]

Hrithik Roshan talks about Rajinikanth and Dhanush

ಹೌದು, 'ಕಾಬಿಲ್' ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೃತಿಕ್, ತಮ್ಮ ಎರಡು ದಶಕಗಳ ವೃತ್ತಿಜೀವನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ವೇಳೆ ರಜನಿಕಾಂತ್ ಹಾಗೂ ಧನುಷ್ ಅವರ ಜೊತೆಗಿನ ಸಂಬಂಧದ ಬಗ್ಗೆನೂ ಖುಷಿಯನ್ನ ಹಂಚಿಕೊಂಡಿದ್ದಾರೆ.[ಕಾಬಿಲ್‌ನ ಪ್ರೇಮಕ್ಕೆ ವಿಮರ್ಶಕರು ಏನಂದ್ರು?]

Hrithik Roshan talks about Rajinikanth and Dhanush

''ಸೂಪರ್ ರಜನಿಕಾಂತ್ ಅವರು ನನಗೆ ತಂದೆಯಿದ್ದಂತೆ. ಒಳ್ಳೆಯ ಮಾರ್ಗದರ್ಶಿ, ಸ್ನೇಹಿತರು ಕೂಡ ಹೌದು, ಹಿರಿಯರು, ಯುವಕರು ಎಂಬ ಭೇದಭಾವ ಮಾಡದೆ ಎಲ್ಲರನ್ನೂ ಒಟ್ಟಾಗಿ ನೋಡುತ್ತಾರೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಗೌರವ ನೀಡುತ್ತಾರೆ. ಅವರಿಂದ ಸಾಕಷ್ಟು ಕಲಿತ್ತಿದ್ದೇನೆ'' ಎಂದು ರಜನಿ ಬಗ್ಗೆ ಹೃತಿಕ್ ಹೇಳಿದರು.

Hrithik Roshan talks about Rajinikanth and Dhanush

ಇನ್ನೂ ನಟ ಧನುಷ್ ಬಗ್ಗೆ ಮಾತನಾಡಿದ ಹೃತಿಕ್ '' ಧನುಷ್ ನನಗೆ ಸ್ಫೂರ್ತಿ, ಅವರ ಕೆಲಸವನ್ನ ನಾನು ಇಷ್ಟಪಡುತ್ತೇನೆ. ತಮಿಳು ಚಿತ್ರರಂಗದಲ್ಲಿ ಕೇವಲ ನಟನಾಗಿ ಮಾತ್ರವಲ್ಲದೇ, ಒಬ್ಬ ತಂತ್ರಜ್ಞನಾಗಿಯೂ ಕೆಲಸ ಮಾಡಿದ್ದಾರೆ. ಅದು ನನಗೆ ಇಷ್ಟ'' ಎಂದು ಹೇಳಿದರು.

English summary
Rajinikanth is like my father, Dhanush is my inspiration says Bollywood actor Hrithik Roshan.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X