For Quick Alerts
  ALLOW NOTIFICATIONS  
  For Daily Alerts

  ಉಗ್ರರ ಬಾಂಬ್ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಹೃತಿಕ್

  By Sonu Gowda
  |

  ಹಲವಾರು ಮಂದಿಯ ಧಾರುಣ ಸಾವಿಗೆ ಕಾರಣವಾಗಿದ್ದ ಇಸ್ತಾನ್ ಬುಲ್ ತ್ರಿವಳಿ ಆತ್ಮಹತ್ಯಾ ಬಾಂಬ್ ದಾಳಿಯಿಂದ ಬಾಲಿವುಡ್ ಹ್ಯಾಂಡ್ಸಮ್ ನಟ ಹೃತಿಕ್ ರೋಷನ್ ಅವರು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ.

  ಬಾಲಿವುಡ್ ನಟ ಹೃತಿಕ್ ರೋಷನ್ ಅವರು ತಮ್ಮ ಮಕ್ಕಳಾದ ರೆಹಾನ್ ಮತ್ತು ರಿಧಾನ್ ಅವರ ಜೊತೆ ಹಾಲಿಡೇ ಎಂಜಾಯ್ ಮಾಡಲು ಸ್ಪೇನ್ ಮತ್ತು ಆಫ್ರಿಕಾ ದೇಶಕ್ಕೆ ತೆರಳಿದ್ದರು.[ಟರ್ಕಿ : ವಿಮಾನ ನಿಲ್ದಾಣದ ಮೇಲೆ ಉಗ್ರರ ದಾಳಿ, 36 ಸಾವು]

  ಹಾಲಿಡೇ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸಾಗುವ ಸಲುವಾಗಿ ಸಂಪರ್ಕ ವಿಮಾನಕ್ಕಾಗಿ ಇಸ್ತಾನ್ ಬುಲ್ ವಿಮಾನ ನಿಲ್ದಾಣದಲ್ಲಿ ಇಳಿದಿದ್ದಾರೆ. ಅಷ್ಟೊತ್ತಿಗಾಗಲೇ ಇಸ್ತಾನ್ ಬುಲ್ ವಿಮಾನ ನಿಲ್ದಾಣದಲ್ಲಿ ಬ್ಯುಸಿನೆಸ್ ಕ್ಲಾಸ್ ವಿಮಾನ ಹೃತಿಕ್ ಅವರಿಗೆ ಸಿಗಲಿಲ್ಲ. ಆದ ಕಾರಣ ಅವರು ತಕ್ಷಣ ಎಕಾನಮಿಕ್ ಕ್ಲಾಸ್ ನಲ್ಲಿ ಮೂರು ಟಿಕೆಟ್ ಬುಕ್ ಮಾಡಿ ತಮ್ಮ ಮಕ್ಕಳೊಂದಿಗೆ ಹೊರಟುಬಿಟ್ಟರು.['ಅಸಲಿ ಸತ್ಯ ಹೊರಬೀಳಲಿದೆ': ಕಂಗನಾಗೆ ಟಾಂಗ್ ಕೊಟ್ಟ ಹೃತಿಕ್]

  ಹೃತಿಕ್ ರೋಷನ್ ಅವರು ಹೊರಟ ಸ್ಪಲ್ಪ ಹೊತ್ತಿನಲ್ಲೇ ಉಗ್ರರು ಇಸ್ತಾನ್ ಬುಲ್ ವಿಮಾನ ನಿಲ್ದಾಣಕ್ಕೆ ಬಾಂಬ್ ದಾಳಿ ನಡೆಸಿದ್ದರು. ಆದ್ದರಿಂದ ಕೊಂಚ ಗ್ಯಾಪ್ ನಲ್ಲಿ ಹೃತಿಕ್ ಅವರು ಭಾರಿ ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ.[ವಿಚ್ಛೇದನದ ಅಸಲಿ ಕಾರಣ ಹೇಳಿದ ಹೃತಿಕ್ ಮಾಜಿ ಪತ್ನಿ ಸುಸೇನ್]

  ಒಂದು ವೇಳೆ ಹೃತಿಕ್ ಅವರು ನಂತರ ಬರುವ ಬ್ಯುಸಿನೆಸ್ ಕ್ಲಾಸ್ ವಿಮಾನಕ್ಕೆ ಕಾಯುತ್ತಿದ್ದರೆ, ತಮ್ಮ ಮಕ್ಕಳೊಂದಿಗೆ ಅವರು ಕೂಡ ಇಸ್ತಾನ್ ಬುಲ್ ನಿಲ್ದಾಣದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದರು. ಇದೀಗ ಯಾವುದೇ ತೊಂದರೆ ಆಗದಿದ್ದಕ್ಕೆ ಹೃತಿಕ್ ಅವರು ದೇವರಿಗೆ ಕೋಟಿ ನಮನ ಸಲ್ಲಿಸಿದ್ದಾರೆ.

  ಈ ವಿಚಾರವನ್ನು ಖುದ್ದಾಗಿ ನಟ ಹೃತಿಕ್ ರೋಷನ್ ಅವರೇ ಟ್ವಿಟ್ಟರ್ ಮೂಲಕ ಖಚಿತಪಡಿಸಿದ್ದಾರೆ. 'ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ ಹಲವು ಮಂದಿ ಮೃತ ಪಟ್ಟಿದ್ದಾರೆ ಎಂದು ತಿಳಿದು ತುಂಬಾ ನೋವಾಯಿತು. ಉಗ್ರರ ಚಟುವಟಿಕೆ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡಬೇಕು' ಎಂದು ನಟ ಹೃತಿಕ್ ರೋಷನ್ ಅವರು ಕರೆ ನೀಡಿದ್ದಾರೆ.

  ಇದೀಗ ಹೃತಿಕ್ ರೋಷನ್ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಸುರಕ್ಷಿತವಾಗಿ ಭಾರತಕ್ಕೆ ಹಿಂದಿರುಗಿದ್ದಾರೆ.

  English summary
  Hrithik Roshan and his two little kids, who were holidaying in Africa, were on their way back to India with a connecting flight at Istanbul, Turkey, at the very same airport which witnessed terrorist attacks. Hrithik ended up missing the connecting flight and was at the airport booking another flight to India.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X