»   » ರಾಷ್ಟ್ರಧ್ವಜಕ್ಕೆ ಅಪಮಾನ, ಮಲ್ಲಿಕಾಗೆ ನೋಟಿಸ್

ರಾಷ್ಟ್ರಧ್ವಜಕ್ಕೆ ಅಪಮಾನ, ಮಲ್ಲಿಕಾಗೆ ನೋಟಿಸ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಮಾದಕ ನಟಿ ಮಲ್ಲಿಕಾ ಶೆರವಾತ್ ಮತ್ತೆ ಸುದ್ದಿಯಲ್ಲಿದ್ದಾರೆ. 'ಡರ್ಟಿ ಪಾಲಿಟಿಕ್ಸ್' ಚಿತ್ರದ ಪ್ರಚಾರಕ್ಕಾಗಿ ಭಾರತದ ರಾಷ್ಟ್ರಧ್ವಜವನ್ನು ಬಳಸಿಕೊಂಡ ಕಾರಣಕ್ಕೆ ಈಗ ಮಲ್ಲಿಕಾ ಕೋರ್ಟ್ ಮೆಟ್ಟಿಲೇರಬೇಕಿದೆ.

ಹೈದರಾಬಾದಿನ ಹೈಕೋರ್ಟ್ ಸೋಮವಾರ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಹಾಗೂ ಡರ್ಟಿ ಪಾಲಿಟಿಕ್ಸ್ ಚಿತ್ರ ತಂಡಕ್ಕೆ ನೋಟಿಸ್ ಜಾರಿ ಮಾಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್ ಚಿತ್ರದ ನಿರ್ಮಾಪಕ ಕೆಸಿ ಬೊಕಾಡಿಯಾ ಅವರಿಗೂ ನೋಟಿಸ್ ನೀಡಿದೆ.

ಡರ್ಟಿ ಪಾಲಿಟಿಕ್ಸ್ ಚಿತ್ರದ ಪೋಸ್ಟರ್ ನಲ್ಲಿ ತ್ರಿವರ್ಣ ಧ್ವಜವನ್ನು ಬಟ್ಟೆಯಂತೆ ಮೈಮೇಲೆ ಸುತ್ತಿಕೊಂಡು ಪೋಸ್ ನೀಡಿರುವ ಮಲ್ಲಿಕಾಳನ್ನು ಕಂಡು ಕೆರಳಿದ ಸಾಮಾಜಿಕ ಕಾರ್ಯಕರ್ತ ಟಿ ಧನಗೋಪಾಲ್ ರಾವ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ತ್ರಿವರ್ಣಧ್ವಜಕ್ಕೆ ಅಪಮಾನ ಮಾಡಿ ಅಗ್ಗದ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ವಾದಿಸಿದ್ದರು.

Hyderabad High Court issues notice to Mallika Sherawat, Centre for obscene poster

ಸರ್ಕಾರಿ ವಕೀಲ ನಾರಾಯಣ ರೆಡ್ಡಿ ಅವರು ಇದಕ್ಕೆ ಪೂರಕವಾಗಿ ವಾದ ಮಂಡಿಸಿದ ಕಾರಣ, ಚಿತ್ರ ನಿರ್ಮಾಪಕ, ಪೋಸ್ಟರ್ ನಲ್ಲಿರುವ ನಟಿ ವಿರುದ್ಧ ನೋಟಿಸ್ ಜಾರಿಗೊಳಿಸಲಾಗಿದೆ. ಈ ಬಗ್ಗೆ ಸೂಕ್ತ ಮಾಹಿತಿ ನೀಡಿ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಗೃಹ ಇಲಾಖೆ ಪ್ರತಿನಿಧಿಗಳಿಗೆ ಕೋರ್ಟ್ ನಿರ್ದೇಶಿಸಿದೆ.[ಶೆರಾವತ್ 'ಡರ್ಟಿ' ಪೋಸ್ಟರ್]


ರಾಷ್ಟ್ರಧ್ವಜವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ದೇಶದ ಘನತೆ ದಕ್ಕೆ ತರುವ ವಿಚಾರ. ಈಗಾಗಲೆ ಈ ಪೋಸ್ಟರ್ ಗಳು ಸಾಮಾಜಿಕ ಜಾಲ ತಾಣಗಳ ಮೂಲಕ ದೇಶ ವಿದೇಶಗಳಲ್ಲಿ ಪ್ರದರ್ಶನ ಕಂಡಿವೆ. ಇದರಿಂದ ಭಾರತಕ್ಕೆ ಅಪಮಾನ ಮಾಡಿದ್ದಾರೆ ಎಂದು ರಾವ್ ವಾದಿಸಿದ್ದಾರೆ.

ರಾವ್ ಅವರ ವಾದ ಮನ್ನಿಸಿದ ಮುಖ್ಯ ನ್ಯಾಯಾಧೀಶ ಕಲ್ಯಾಣ್ ಜ್ಯೋತಿ ಸೇನ್ ಗುಪ್ತ ಹಾಗೂ ಜಸ್ಟೀಸ್ ಪಿವಿ ಸಂಜಯ್ ಕುಮಾರ್ ಅವರು ಮೇಲ್ಕಂಡ ಆದೇಶ ನೀಡಿ ಮೂರು ವಾರದೊಳಗೆ ಉತ್ತರಿಸುವಂತೆ ನಿರ್ದೇಶಿಸಿದ್ದಾರೆ. ಈ ಬಗ್ಗೆ ಏನು ಅರಿವಿಲ್ಲದ ನಟಿ ಮಲ್ಲಿಕಾ ಅವರು ವಿದೇಶಿ ಪ್ರವಾಸದಲ್ಲಿ ನಿರತರಾಗಿದ್ದಾರೆ. ನಿರ್ಮಾಪಕ ನಮಗೆ ಯಾವುದೇ ನೋಟಿಸ್ ಬಂದಿಲ್ಲ. ಪೋಸ್ಟರ್ ನಲ್ಲಿ ಅಶ್ಲೀಲತೆ, ದೇಶಕ್ಕೆ ಅಪಮಾನವಾಗುವ ಸಂಗತಿ ಇಲ್ಲ ಎಂದಿದ್ದಾರೆ.
ಈ ಚಿತ್ರದ ಪಾತ್ರವರ್ಗದಲ್ಲಿ ಓಂ ಪುರಿ, ರಾಜ್ ಪಾಲ್ ಯಾದವ್ ಮುಂತಾದವರಿದ್ದಾರೆ. ಪ್ರಸ್ತುತ ರಾಜಕೀಯ ಸನ್ನಿವೇಶಗಳ ಸುತ್ತ ಕಥೆ ಸುತ್ತುತ್ತದೆ ಎನ್ನಲಾಗಿದೆ. ಮಲ್ಲಿಕಾ ಶೆರಾವತ್ ಅವರು ಅನೂಕಿ ದೇವಿ ಪಾತ್ರವನ್ನು ಚಿತ್ರದಲ್ಲಿ ಪೋಷಿಸಿದ್ದಾರೆ.

English summary
The Hyderabad High Court on Monday issued notices to Bollywood actress Mallika Sherawat and the Centre on a PIL against a poster of her upcoming film 'Dirty Politics' that shows the Bollywood actress draped in the three colours of the national flag.
Please Wait while comments are loading...