»   » 'ಐ ಯಾಮ್ ಕಲಾಂ' ಎನ್ನುತ್ತಿದ್ದಂತೆ ರೋಮಾಂಚನ

'ಐ ಯಾಮ್ ಕಲಾಂ' ಎನ್ನುತ್ತಿದ್ದಂತೆ ರೋಮಾಂಚನ

Posted By:
Subscribe to Filmibeat Kannada

'ಐ ಯಾಮ್ ಕಲಾಂ' ಹೆಸರು ಹೇಳುತ್ತಿದಂತೆ ಒಂಥರಾ ರೋಮಾಂಚನ ಅನಿಸುತ್ತದೆ ಅಲ್ವಾ. ಹೌದು ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ವ್ಯಕ್ತಿತ್ವವೇ ಅಂತದ್ದು. ನಾವೀಗ ಯಾವುದರ ಬಗ್ಗೆ ಮಾತನಾಡುತ್ತಿದ್ದೇವೆ ಅಂದ್ರೆ 2011 ರಲ್ಲಿ ತೆರೆ ಕಂಡ ಹಿಂದಿ ಚಿತ್ರ 'ಐ ಯಾಮ್ ಕಲಾಂ' ಬಗ್ಗೆ.

ಡಾ.ಕಲಾಂ ಅವರಿಂದ ಸ್ಪೂರ್ತಿ ಪಡೆದುಕೊಂಡ ಮತ್ತೊಂದು ಚಿತ್ರ 'ಐ ಯಾಮ್ ಕಲಾಂ'. ಮೇ 12, 2010 ರಲ್ಲಿ 63ನೇ 'ಕ್ಯಾನ್ಸ್ ಫಿಲ್ಮ್ ಫೆಸ್ಟಿವಲ್' ನಲ್ಲಿ ಸ್ಕ್ರೀನಿಂಗ್ ಆಗಿದ್ದು, ನಿರ್ದೇಶಕ ನಿಲಾ ಮದ್ಹಬ್ ಪಾಂಡ ಅವರು ಆಕ್ಷನ್-ಕಟ್ ಹೇಳಿರುವ ಈ ಚಿತ್ರ ಒಬ್ಬ ಸಣ್ಣ ಸ್ಲಂ ಹುಡುಗನ ಸುತ್ತ ಸುತ್ತುತ್ತದೆ.

I Am Kalam Hindi film inspired by Life of APJ Abdul Kalam

ಈ ಚಿತ್ರದಲ್ಲಿ ಕಥಾನಾಯಕ 'ಚೋಟು' ಪಾತ್ರ ಮಾಡಿರುವ ದೆಹಲಿಯ ಸ್ಲಂ ಬಾಲಕ ಹರ್ಷ ಮಯಾರ್ 'ಕಲಾಂ' ಬಗ್ಗೆ ಕಾಣುವ ಕನಸುಗಳೇ ಈ ಚಿತ್ರದಲ್ಲಿ ಹೈಲೈಟ್ ಆಗುತ್ತದೆ. ರಾಜಾಸ್ಥಾನದ ಮರುಭೂಮಿಯಲ್ಲಿ 'ಐ ಯಾಮ್ ಕಲಾಂ' ಚಿತ್ರೀಕರಣಗೊಂಡಿದೆ.[ಸ್ಫೂರ್ತಿ ತುಂಬುವ ಡಾ.ಕಲಾಂ ಸ್ಫೂರ್ತಿ ಹೇಳಿಕೆಗಳು]

ಕಡುಬಡತನದಲ್ಲಿ ಬೆಳೆದಿರುವ 'ಚೋಟು' ತಾಯಿಯ ಮಾತಿನಂತೆ ಹೋಟೆಲ್ ಒಂದಕ್ಕೆ ಕೆಲಸ ಮಾಡಲು ಸೇರಿಕೊಳ್ಳುತ್ತಾನೆ. ಆದರೆ ಓದು-ಬರಹದ ಹುಚ್ಚು ಇರುವ ಚೋಟು ತಾನು ಓದಿ ಮುಂದಕ್ಕೆ ಸೂಟು-ಬೂಟು ಧರಿಸಿ ದೊಡ್ಡ ವ್ಯಕ್ತಿಯಾಗಬೇಕು ಎಂದು ಕನಸು ಕಾಣುತ್ತಿರುತ್ತಾನೆ.

ಇಂತಹ ಸಂದರ್ಭದಲ್ಲಿ ಹೋಟೆಲ್ ನಲ್ಲಿರುವ ಟಿವಿ ಯಲ್ಲಿ ಒಂದು ದಿನ ಕಲಾಂ ಅವರು ಗಣರಾಜ್ಯೋತ್ಸವ ದಿನದ ಪರೇಡ್ ನಲ್ಲಿ ಎಲ್ಲರ ಕೈಯಿಂದ ಸೆಲ್ಯೂಟ್ ಹೊಡೆಸಿಕೊಳ್ಳುತ್ತಿರುವ ವ್ಯಕ್ತಿಯ ಹೆಸರು 'ಕಲಾಂ' ಎಂದು ತಿಳಿದಾಗ ಮುಂದೆ ಅವರಂತೆ ಆಗಬೇಕೆಂದು ಚೋಟು ನಿರ್ಧಾರ ಮಾಡುತ್ತಾನೆ.[ಕೇರ್ ಆಫ್ ಫುಟ್ ಪಾತ್ ಚಿತ್ರಕ್ಕೆ ಸ್ಪೂರ್ತಿಯಾಗಿದ್ದ ಕಲಾಂ]

I Am Kalam Hindi film inspired by Life of APJ Abdul Kalam

ಮಾತ್ರವಲ್ಲದೇ ಕಲಾಂ ನಂತೆ ಕಾಣಿಸಿಕೊಳ್ಳೋಕೆ ಅವರಂತೆ ಹೇರ್ ಸ್ಟೈಲ್ ಕೂಡ ಮಾಡುತ್ತಾನೆ ನಮ್ಮ ನಾಯಕ ಚೋಟು. ಮುಂದೆ ಚೋಟುವಿಗೆ ಶ್ರೀಮಂತ ಹುಡುಗನೊಬ್ಬನ ಪರಿಚಯವಾಗಿ ಗೆಳೆತನ ಬೆಳೆದು ನಂತರ ಇಂಗ್ಲೀಷ್ ಕಲಿಯುತ್ತಾನೆ.

ಮುಂದೊಂದು ದಿನ ಚೆನ್ನಾಗಿ ಓದು-ಬರಹ ಕಲಿಯುವ ಚೋಟು ತನ್ನ ಕನಸಿನಂತೆ ಕಲಾಂ ಅವರನ್ನು ಹುಡುಕಿಕೊಂಡು ಹೊರಡುತ್ತಾನೆ. ಇವಿಷ್ಟು 'ಐ ಯಾಮ್ ಕಲಾಂ' ಚಿತ್ರದ ಹೂರಣ. ಒಟ್ಟಾರೆ ಹೇಳಬೇಕೆಂದರೆ 'ಐ ಯಾಮ್ ಕಲಾಂ' ಎಲ್ಲರಿಗೂ ಸ್ಪೂರ್ತಿ ನೀಡುವ ಚಿತ್ರವಾಗಿದೆ.

I Am Kalam Hindi film inspired by Life of APJ Abdul Kalam

ಸತ್ಯ ಘಟನೆಯೊಂದರ ಎಳೆ ಇಟ್ಟುಕೊಂಡು ಮಾಡಿರುವ ಈ ಚಿತ್ರದಲ್ಲಿ ಮನ ಮಿಡಿಯುವ ದೃಶ್ಯಗಳು ಇವೆ. ಒಟ್ನಲ್ಲಿ ಚಿತ್ರ ನೋಡಿದವರಿಗೆ ಮಾತ್ರ ಒಂದು ಅಭೂತಪೂರ್ಣ ಬದಲಾವಣೆ ಗ್ಯಾರಂಟಿ.

'ಐ ಯಾಮ್ ಕಲಾಂ' ಆಗಸ್ಟ್ 5, 2011 ರಲ್ಲಿ ಭಾರತದಲ್ಲಿ ತೆರೆ ಕಂಡಿದ್ದು, ವಿಶೇಷವಾಗಿ ಎ.ಪಿ.ಜೆ ಅಬ್ದುಲ್ ಕಲಾಂ ಅವರು ದೆಹಲಿಯಲ್ಲಿ ಜುಲೈ 29 ರಂದು ಈ ಚಿತ್ರ ವೀಕ್ಷಿಸಿ ಹರಸಿದ್ದರು.

English summary
I Am Kalam is a 2011 hindi film directed by Nila Madhab Panda. The plot revolves around Chhotu, a poor Rajasthani boy, who is inspired by the life of the former President of India, APJ.Abdul Kalam and his strong desire to learn.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada