»   » ಕರೀನಾ ಕಪೂರ್ ಒಡಲು ಇನ್ನೂ ಯಾಕೆ ತುಂಬಿಲ್ಲ?

ಕರೀನಾ ಕಪೂರ್ ಒಡಲು ಇನ್ನೂ ಯಾಕೆ ತುಂಬಿಲ್ಲ?

By: ಉದಯರವಿ
Subscribe to Filmibeat Kannada

ಬಾಲಿವುಡ್ ಬೇಬೋ ಕರೀನಾ ಕಪೂರ್ ದಾಂಪತ್ಯ ಜೀವನಕ್ಕೆ ಅಡಿಯಿಟ್ಟು ಎರಡು ವರ್ಷಗಳು ಕಳೆದಿವೆ. ಇಷ್ಟು ಸಮಯವಾದರೂ ಯಾಕೆ ಇನ್ನೂ ಅವರ ಒಡಲು ತುಂಬಿಲ್ಲ ಎಂಬ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ.

ಆಗಾಗ ಅವರು ಗರ್ಭಿಣಿ ಎಂಬ ಸುದ್ದಿಗಳು ಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕರೀನಾ, "ನಾನಿನ್ನೂ ತಾಯ್ತನ ಅನುಭವಿಸಲು ಸಿದ್ಧಳಾಗಿಲ್ಲ. ನಾವೀಗಲೇ ಮಗು ಬೇಡ ಎಂದುಕೊಂಡಿದ್ದೇವೆ" ಎಂದಿದ್ದಾರೆ. ಪತ್ರಿಕೆಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಅವರು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. [ಕರೀನಾಳಿಂದ ಮಕ್ಕಳು ನಿರೀಕ್ಷಿಸಿಲ್ಲ: ಸೈಫ್ ಅಲಿ ಖಾನ್]

ತಾನೊಬ್ಬ ಜವಾಬ್ದಾರಿಯುತ ತಾರೆ. ಅದು ಹೇಗೆ ಜನ ತಾನು ಗರ್ಭಿಣಿ ಎಂದು ತರಾತುರಿಯಲ್ಲಿ ನಿರ್ಧರಿಸುತ್ತಾರೋ ನನಗಂತೂ ಗೊತ್ತಾಗುತ್ತಿಲ್ಲ. ಮದುವೆಯಾದ ತಾರೆಯೊಬ್ಬಳು ಯಾವುದೇ ಚಿತ್ರ ಒಪ್ಪಿಕೊಳ್ಳಲಿಲ್ಲ ಎಂದರೆ ಅದಕ್ಕೆ ಇದೇ ಕಾರಣ ಎಂದುಕೊಳ್ಳುತ್ತಾರೆ. ಬನ್ನಿ ಅವರು ತಮ್ಮ ಖಾಸಗಿ ವಿಚಾರಗಳ ಬಗ್ಗೆ ಏನೋ ಹೇಳುತ್ತಾರೆ ನೋಡೋಣ.

ಖಾಸಗಿ ವಿಚಾರದಲ್ಲಿ ಮಧ್ಯಪ್ರವೇಶಿಸಲು ನೀವ್ಯಾರು?

ಒಂದು ಚಿತ್ರವನ್ನು ಒಪ್ಪಿಕೊಳ್ಳುವುದು ಬಿಡುವುದು ನನಗೆ ಬಿಟ್ಟ ವಿಚಾರ. ನನ್ನ ಖಾಸಗಿ ವಿಚಾರದಲ್ಲಿ ಮಧ್ಯಪ್ರವೇಶಿಸುವ ಹಕ್ಕು ಯಾರಿಗೂ ಇಲ್ಲ.

ಈಗಲೇ ಗರ್ಭಿಣಿಯಾಗಲು ತಲೆಕೆಟ್ಟಿದೆಯೇ?

2015ರಲ್ಲಿ ಚಿತ್ರ 'ಭಜರಂಗಿ ಭಾಯ್ ಜಾನ್' ಚಿತ್ರ ಸೆಟ್ಟೇರುತ್ತಿದೆ. ಈಗಲೇ ಗರ್ಭಿಣಿಯಾಗಲು ನನಗೇನು ತಲೆಕೆಟ್ಟಿದೆಯೇ ಎನ್ನುತ್ತಾರೆ ಕರೀನಾ ಕಪೂರ್.

ಬ್ರಾಹ್ಮಣರ ಹುಡುಗಿ ಹಾಗೂ ಮುಸ್ಲಿಂ ಯುವಕನ ಕುರಿತಾದ 'ಭಜರಂಗಿ ಭಾಯ್ ಜಾನ್' ಚಿತ್ರದಲ್ಲಿ ಸಲ್ಮಾನ್ ಖಾನ್ ಗೆ ಕರೀನಾ ಜೋಡಿ.

ಹಣಕ್ಕಾಗಿ ಅಲ್ಲ, ಗೆಳೆತನಕ್ಕಾಗಿ ಈ ಚಿತ್ರಗಳು

ಅದೆಲ್ಲಾ ಸರಿ ಮಕ್ಕಳು ಮರಿ ಇಲ್ಲದೆ ಎಷ್ಟು ದಿನ ಇದೇ ರೀತಿ ಇರುತ್ತೀರಾ. ನಿಮಗೆ ಹಣವೇ ಮುಖ್ಯ ಅನ್ನಿಸುತ್ತಿದೆ ಎಂದು ಜೋರಾಗಿ ಕೇಳಿದರೆ, ನನ್ನ ಗೆಳೆಯರಿಗಾಗಿ ಸಾಕಷ್ಟು ಪ್ರಾಜೆಕ್ಟ್ ಗಳನ್ನು ಒಪ್ಪಿಕೊಂಡಿದ್ದೇನೆ. ಬಹುಶಃ ನಿಮಗೆ ಉತ್ತರ ಸಿಕ್ಕಿರಬಹುದು ಎನ್ನುತ್ತಾರೆ.

ಸದ್ಯಕ್ಕೆ ತಾಯ್ತನ ಬೇಡ ಎಂದುಕೊಂಡಿದ್ದೇನೆ

ಮದುವೆಯಾಗಿ ಎರಡು ವರ್ಷಗಳಾಗಿವೆ. ಮುದ್ದಾದ ಮಗುವನ್ನು ಪಡೆಯಲು ಇದೇ ಸೂಕ್ತ ಸಮಯ ಅಲ್ಲವೇ ಎಂದರೆ, ನನಗೂ ಮಗೂ ಬೇಕು ಅನ್ನಿಸುತ್ತಿದೆ. ಆದರೆ ಏನು ಮಾಡುವುದು ಬಲು ದೊಡ್ಡ ಜವಾಬ್ದಾರಿ ನನ್ನ ಹೆಗಲೇರಿದೆ. ಸದ್ಯಕ್ಕೆ ತಾಯ್ತನ ಬೇಡ ಎಂದುಕೊಂಡಿದ್ದೇನೆ.

ನನ್ನ ಕೈಗೆ ಮಗು ಬಂದಾಗಲೇ ಜೀವನ ಆರಂಭ

ಸೈಫ್ ಮತ್ತು ನಾನು ಇನ್ನೂ ಎರಡು ವರ್ಷಗಳ ಕಾಲ ಮಗು ಬೇಡ ಎಂದು ನಿರ್ಧರಿಸಿದ್ದೇವೆ. ಸದ್ಯಕ್ಕೆ ನಮ್ಮಿಬ್ಬರ ಗಮನ ಸಿನಿಮಾಗಳ ಮೇಲೆಯೇ ಇದೆ. ಹೊಸ ಮನೆಯನ್ನೂ ಕಟ್ಟುತ್ತಿದ್ದೇವೆ. ನನ್ನ ಕೈಗೆ ಯಾವಾಗ ಮಗು ಬರುತ್ತದೋ ಅಂದೇ ಜೀವನ ಆರಂಭ ಎಂದಿದ್ದಾರೆ.

ಜರೂರಾಗಿ ಎಲ್ಲರಿಗೂ ಮದುವೆ ಊಟ ಹಾಕಿಸುತ್ತೇನೆ

ಸರಿ ಬಿಡಿ, ನಿಮ್ಮ ನಾದಿನಿ ಸೋಹಾ ಆಲಿ ಖಾನ್ ಮದುವೆ ಯಾವಾಗ ಎಂದರೆ, ಶೀಘ್ರದಲ್ಲೇ ಅವರೂ ದಾಂಪತ್ಯ ಜೀವನಕ್ಕೆ ಅಡಿಯಿಡುತ್ತಿದ್ದಾರೆ. ಕೂನಲ್ ಜೊತೆ ಅವರ ಮದುವೆ ನಡೆಲಿದೆ. ಜರೂರಾಗಿ ಎಲ್ಲರಿಗೂ ಮದುವೆ ಊಟ ಹಾಕಿಸುತ್ತೇನೆ ಎನ್ನುತ್ತಾರೆ.

English summary
Saif Ali Khan and Kareena Kapoor have decided not to have a baby for the next tow years. Kareena says, she is not yet ready for motherhood yet.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada