For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ನೋಡಲು ತುದಿಗಾಲಿನಲ್ಲಿ ನಿಂತ ಕಂಗನಾ ರನೌತ್; ಚಿತ್ರ ನೋಡುವ ಮುನ್ನವೇ ಹೊಗಳಿಕೆಯ ಮಳೆ

  |

  ಕಾಂತಾರ ಚಿತ್ರ ಸದ್ಯ ಎಲ್ಲೆಡೆ ಭರ್ಜರಿ ಸದ್ದು ಮಾಡುತ್ತಿದೆ. ಏಕ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಚಿತ್ರ ಸದ್ಯ ಭಾರತದ ವಿವಿಧ ಪ್ರಮುಖ ಚಿತ್ರ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಹಂತ ತಲುಪಿದೆ.

  ಕಾಂತಾರ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಬೆಳೆ ಬೆಳೆಯುತ್ತಿದ್ದು, ಚಿತ್ರ ಈಗಾಗಲೇ ನೂರು ಕೋಟಿ ಕ್ಲಬ್ ಸೇರಿದೆ. ಇನ್ನು ಚಿತ್ರವನ್ನು ದಕ್ಷಿಣ ಭಾರತದ ಹಲವು ತಾರೆಗಳು ಮೆಚ್ಚಿ ಕೊಂಡಾಡಿದ್ದು, ಕಳೆದ ಭಾನುವಾರವಷ್ಟೇ ಕಾಂತಾರ ಚಿತ್ರವನ್ನು ವೀಕ್ಷಿಸಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳುವುದರ ಮೂಲಕ ಮೆಚ್ಚುಗೆಯ ಸುರಿಮಳೆ ಗೈದಿದ್ದರು.

  ಶಿಲ್ಪಾ ಶೆಟ್ಟಿ ಬಳಿಕ ಇದೀಗ ಮತ್ತೋರ್ವ ಬಾಲಿವುಡ್ ನಟಿ ಕಂಗನಾ ರನೌತ್ ಸಾಮಾಜಿಕ ಜಾಲತಾಣದಲ್ಲಿ ಕಾಂತಾರ ಕುರಿತು ಬರೆದುಕೊಂಡಿದ್ದಾರೆ. ಸುಲಭವಾಗಿ ಚಿತ್ರವೊಂದನ್ನು ಚೆನ್ನಾಗಿದೆ ಎಂದು ಒಪ್ಪಿಕೊಳ್ಳದ ಕಂಗನಾ ರನೌತ್ ರಿಷಬ್ ಶೆಟ್ಟಿ ನಿರ್ದೇಶನದ, ನಟನೆಯ ಕಾಂತಾರ ಚಿತ್ರವನ್ನು ನೋಡುವ ಮುನ್ನವೇ ಚಿತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ತನ್ನ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

   ಕಾಂತಾರ ಕಾಣಲು ಕಾತರತೆ ವ್ಯಕ್ತಪಡಿಸಿದ ಕಂಗನಾ

  ಕಾಂತಾರ ಕಾಣಲು ಕಾತರತೆ ವ್ಯಕ್ತಪಡಿಸಿದ ಕಂಗನಾ

  ಕಾಂತಾರ ಚಿತ್ರದ ಟ್ರೈಲರ್ ದೃಶ್ಯಗಳ ಚಿತ್ರಗಳನ್ನು ತನ್ನ ಇನ್ ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ಹಂಚಿಕೊಂಡಿರುವ ಕಂಗನಾ ರನೌತ್ 'ಕಾಂತಾರ ಚಿತ್ರದ ಕುರಿತು ಅಸಾಧಾರಣ ಸಂಗತಿಗಳು ಕೇಳಿಬರುತ್ತಿವೆ. ಚಿತ್ರವನ್ನು ವೀಕ್ಷಿಸಲು ಕಾತರಳಾಗಿದ್ದೇನೆ. ಆದಷ್ಟು ಬೇಗ ಚಿತ್ರ ವೀಕ್ಷಿಸುವೆ' ಎಂದು ಬರೆದುಕೊಳ್ಳುವುದರ ಮೂಲಕ ಚಿತ್ರದ ಕುರಿತು ತಮಗಿರುವ ಕಾತರತೆಯನ್ನು ವ್ಯಕ್ತಪಡಿಸಿದ್ದಾರೆ.

   ನಮ್ಮ ಮಣ್ಣಿನ ಕತೆ ಎಂದ ಶಿಲ್ಪಾ ಶೆಟ್ಟಿ

  ನಮ್ಮ ಮಣ್ಣಿನ ಕತೆ ಎಂದ ಶಿಲ್ಪಾ ಶೆಟ್ಟಿ

  ಇನ್ನು ಭಾನುವಾರ ( ಅಕ್ಟೋಬರ್ 16 ) ಕಾಂತಾರ ಚಿತ್ರವನ್ನು ವೀಕ್ಷಿಸಿದ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಕಾಂತಾರ ಚಿತ್ರಕ್ಕಿದು ಪ್ರಶಂಸೆಯ ಪೋಸ್ಟ್ ಎಂದು ಬರೆದುಕೊಂಡಿದ್ದರು. 'ಕಾಂತಾರ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದೆ, ಓ ಮೈ ಗಾಡ್ ಎಂಥ ಚಿತ್ರವಿದು, ಎಂತಹ ನಿರೂಪಣೆ, ಭಾವನೆ ಮತ್ತು ಪ್ರಪಂಚ.. ಚಿತ್ರದ ಕ್ಲೈಮ್ಯಾಕ್ಸ್ ರೋಮಾಂಚನಗೊಳಿಸಿತು. ಇದು ಸಿನಿಮಾವೊಂದರ ಶಕ್ತಿ. ವೀಕ್ಷಕನನ್ನು ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯುವಂತಹ ಚಿತ್ರ. ನಾನು ಹುಟ್ಟಿ ಬೆಳೆದಂತಹ ಪ್ರಪಂಚಕ್ಕೆ (ಕರಾವಳಿ) ಕೊಂಡೊಯ್ದ ಚಿತ್ರ' ಎಂದು ಶಿಲ್ಪಾ ಶೆಟ್ಟಿ ಚಿತ್ರವನ್ನು ಹಾಡಿ ಹೊಗಳಿದ್ದರು. ಹಾಗೂ ವಿಶೇಷವಾಗಿ ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನವನ್ನು ಶಿಲ್ಪಾ ಶೆಟ್ಟಿ ಕೊಂಡಾಡಿದ್ದರು.

   ಅನುಷ್ಕಾ ಕೂಡ ಫಿದಾ

  ಅನುಷ್ಕಾ ಕೂಡ ಫಿದಾ

  ಕಾಂತಾರ' ಸಿನಿಮಾ ವೀಕ್ಷಿಸಿದೆ. ಸಂಪೂರ್ಣವಾಗಿ ಸಿನಿಮಾ ಇಷ್ಟವಾಯಿತು, ಪ್ರತಿಯೊಬ್ಬ ನಟ, ನಿರ್ಮಾಪಕರು, ತಂತ್ರಜ್ಞರಿಗೆ ಅಭಿನಂದನೆಗಳು. 'ಕಾಂತಾರ' ತಂಡ ನಿಜಕ್ಕೂ ನೀವು ಅದ್ಭುತ. ತೆರೆಮೇಲೆ ಇಂತಹ ಅನುಭವ ನೀಡಿದ್ದಕ್ಕೆ ಧನ್ಯವಾದ. ರಿಷಬ್ ಶೆಟ್ಟಿ ನಿಜಕ್ಕೂ ನೀವು ಅದ್ಭುತ. ದಯವಿಟ್ಟು ಚಿತ್ರಮಂದಿರದಲ್ಲೇ ಎಲ್ಲರೂ ಸಿನಿಮಾ ನೋಡಿ. ಮಿಸ್ ಮಾಡಲೇಬೇಡಿ' ಎಂದು ಇನ್‌ಸ್ಟಾಗ್ರಾಂನಲ್ಲಿ ಅನುಷ್ಕಾ ಶೆಟ್ಟಿ ಬರೆದುಕೊಂಡಿದ್ದರು.

   2 ಬಾರಿ ಚಿತ್ರ ನೋಡಿದ ಪ್ರಭಾಸ್

  2 ಬಾರಿ ಚಿತ್ರ ನೋಡಿದ ಪ್ರಭಾಸ್

  ಇನ್ನು ಕಾಂತಾರ ಚಿತ್ರ ಮೊದಲಿಗೆ ಕನ್ನಡದಲ್ಲಿ ಬಿಡುಗಡೆಯಾದಾಗ ವೀಕ್ಷಿಸಿದ್ದ ಡಾರ್ಲಿಂಗ್ ಪ್ರಭಾಸ್ ತೆಲುಗು ಅವತರಣಿಕೆಯನ್ನು ಕೂಡ ವೀಕ್ಷಿಸಿದರು. ಹಾಗೂ ಈ ಎರಡೂ ಬಾರಿಯೂ ಸಹ ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಕುರಿತು ಪೋಸ್ಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

  English summary
  I am so curious about Kantara and can't wait to watch says Kangana Ranaut y. Read on
  Tuesday, October 18, 2022, 12:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X