»   » 'ಕತ್ರಿನಾ ಕಪೂರ್' ಆಗುವ ಕ್ಯಾಟ್ ಕನಸು ಈಡೇರುತ್ತಾ..?

'ಕತ್ರಿನಾ ಕಪೂರ್' ಆಗುವ ಕ್ಯಾಟ್ ಕನಸು ಈಡೇರುತ್ತಾ..?

Posted By:
Subscribe to Filmibeat Kannada

ಕತ್ರಿನಾ ಕಪೂರ್ ಆಗಬೇಕೆಂಬ ಕತ್ರಿನಾ ಕೈಫ್ ಕನಸು ಅಷ್ಟು ಸುಲಭವಾಗಿ ಈಡೇರುವಂತೆ ಕಾಣುತ್ತಿಲ್ಲ. ರಣಬೀರ್ ಕಪೂರ್ ಜೊತೆ ಲಿವಿಂಗ್ ಟುಗೆದರ್ ಸಂಬಂಧ ಹೊಂದಿರುವ ಕತ್ರಿನಾ ತನ್ನ ಹೆಸರಿನ ಜೊತೆ ಕಪೂರ್ ಸೇರಿಸಿಕೊಳ್ಳಲು ಕಾತರಳಾಗಿರುವುದು ಹೊಸ ವಿಷಯವೇನೂ ಅಲ್ಲ. ಆದರೆ, ಇದು ರಣಬೀರ್ ತಾಯಿ ನೀತೂಗೆ ಸುತಾರಾಂ ಇಷ್ಟವಿಲ್ಲ ಎಂಬುದೂ ರಹಸ್ಯವಲ್ಲ.

ರಣಬೀರ್ ಮದುವೆ ಆಗ್ತಾರಾ ಎಂಬ ಪತ್ರಕರ್ತರ ಪ್ರಶ್ನೆಗೆ "ನನಗೆ ಹಾಗನ್ನಿಸುತ್ತಿಲ್ಲ" ಎಂದು ನೀತು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿದ್ದಾರೆ.

"ನಾವು ಯಾವಾಗಲೋ ತಯಾರಿದ್ದೇವೆ. ಆದರೆ, ಆತನೇ ಇನ್ನೂ ಮನಸ್ಸು ಮಾಡಿಲ್ಲ. ಆಜ್ ಕಲ್ ಕೆ ಬಚ್ಚೋ ಕಾ ಕುಚ್ ಪತಾ ನಹಿ ಚಲ್ತಾ" ಎಂದು ಅಪ್ಪಟ ಗ್ರಾಮೀಣ ತಾಯಿಯಂತೆ ಉತ್ತರಿಸಿದ್ದಾರೆ ನೀತೂ.

kat

ಕತ್ರಿನಾಳೇ ನಿನ್ನ ಸೊಸೆ ಅಂದರೆ ನೀತು ಒಪ್ತಾರಾ..? : ಏನೇ ಆದರೂ ಕತ್ರಿನಾ ತಮ್ಮ ಕುಟುಂಬದ ಸದಸ್ಯೆ ಆಗುವುದು ನೀತೂಗೆ ಸುತಾರಾಂ ಇಷ್ಟವಿಲ್ಲ ಎಂಬುದು ರಹಸ್ಯವೇನೂ ಅಲ್ಲ. ಸ್ವಲ್ಪ ದಿನಗಳ ಮೊದಲಷ್ಟೇ ತನ್ನ ಕುಟುಂಬದ ಚಿತ್ರದಲ್ಲಿ ರಣಬೀರ್ ಜೊತೆ ನಿಂತಿದ್ದ ಕತ್ರಿನಾ ಫೋಟೊ ಅಳಸಿಹಾಕಿದ್ದರು. ಅದನ್ನು ಇನ್‌ಸ್ಟಾಗ್ರಾಂ ಮೆಸೇಜ್ ಆಪ್‌ನಲ್ಲಿ ಹರಿಬಿಟ್ಟಾಗ ಈ ವಿಷಯ ಬಯಲಾಗಿತ್ತು.

ಇದಕ್ಕೂ ಮೊದಲು ರಜೆ ಕಳೆಯಲು ಸ್ಪೇನ್‌ಗೆ ಹೋಗಿದ್ದ ಕತ್ರಿನಾ ಬಿಕಿನಿ ಧರಿಸಿ ರಣಬೀರ್ ಜೊತೆ ನಿಂತಿದ್ದ ಫೋಟೊ ಮಾಧ್ಯಮದಲ್ಲಿ ಜಗಜ್ಜಾಹೀರಾಗಿತ್ತು.

ಆಗ ರಣಬೀರ್ ಪಾಲಕರು ಕತ್ರಿನಾ ವಿಷಯದಲ್ಲಿ ಕೋಪಗೊಂಡಿದ್ದರು. ಆದರೆ, ಇದಕ್ಕೆ ಸೊಪ್ಪು ಹಾಕದ ರಣಬೀರ್ ಕತ್ರಿನಾ ಜೊತೆ ಬೇರೆ ಮನೆ ಮಾಡಿ ಸಹಜೀವನ ಆರಂಭಿಸಿದ್ದಾರೆ.

English summary
Bollywood actress Neetu Kapoor told media that her son actor Ranbir may not knot soon. But she added as a mother I want my son to be married soon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada