»   » ಕೋಮುವಾದಿ ಅಭಿಮಾನಿಗಳು ನನಗೆ ಸಲ್ಲ ಎಂದ ಸಲ್ಲು

ಕೋಮುವಾದಿ ಅಭಿಮಾನಿಗಳು ನನಗೆ ಸಲ್ಲ ಎಂದ ಸಲ್ಲು

Posted By:
Subscribe to Filmibeat Kannada

ನರೇಂದ್ರ ಮೋದಿ ಜೊತೆ ಅಹಮದಾಬಾದಿನಲ್ಲಿ ಗಾಳಿಪಟ ಹಾರಿಸಿದ ನಂತರ ಕೆಲವು ಮುಸ್ಲಿಂ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ತನ್ನ ಸುತ್ತ ಸುತ್ತುತ್ತಿರುವವರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಹೇಡಿಗಳು, ದಬ್ಬಾಳಿಕೆ ನಡೆಸುವವರ ಜೊತೆ ನಾನು ಇರಲು ಬಯಸುವುದಿಲ್ಲ. ನಾನು ಒಬ್ಬ ಕಲಾವಿದ, ಕೋಮುವಾದಿ ಅಭಿಮಾನಿಗಳು ನನಗೆ ಬೇಕಾಗಿಲ್ಲ ಎಂದು ಸಲ್ಮಾನ್ ಖಾನ್ ತಿರುಗೇಟು ನೀಡಿದ್ದಾರೆ.

ಜೈಹೋ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡದೇ ಇರುವುದಕ್ಕೆ ಸಲ್ಮಾನ್, ಮೋದಿ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಕ್ಕೆ ಮುಸ್ಲಿಂ ಅಭಿಮಾನಿಗಳು ಚಿತ್ರ ವೀಕ್ಷಿಸಲಿಲ್ಲ ಎನ್ನುವ ಕಾರಣವೂ ಇರಬಹುದು ಎಂದು ಸಿನಿಮಾ ವರದಿಗಾರ ಕೋಮಲ್ ನಾಹ್ತಾ ಎನ್ನುವವರು ಟ್ವೀಟ್ ಮಾಡಿದ್ದರು.

ಇದಕ್ಕೆ ಖಾರವಾಗಿ ಸಲ್ಮಾನ್ ಖಾನ್ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. ಬಹುಷಃ ಬಾಲಿವುಡ್ ಜಗತ್ತಿನಲ್ಲಿ ತಮ್ಮ ನಿಲುವನ್ನು ಇಷ್ಟು ಖಡಕ್ಕಾಗಿ ಸ್ಪಷ್ಟ ಪಡಿಸಿದ ಉದಾಹರಣೆ ವಿರಳ ಎನ್ನಬಹುದು.

ಮೋದಿ ಭೇಟಿಯಾಗಿದ್ದ ಸಲ್ಮಾನ್

ಕಳೆದ ಜನವರಿ 24ರಂದು ಜೈಹೋ ಚಿತ್ರದ ಪ್ರಚಾರಕ್ಕಾಗಿ ಸಲ್ಮಾನ್ ಖಾನ್ ಅಹಮದಾಬಾದಿಗೆ ಬಂದಿದ್ದರು. ಭೇಟಿ ಸಂದರ್ಭದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದರು.

ಮೋದಿ ಪ್ರಧಾನಿ ಹುದ್ದೆಗೆ ಸೂಕ್ತ

ಅಲ್ಲದೇ, 'ಉತ್ತಮ ವ್ಯಕ್ತಿ ಈ ದೇಶದ ಮುಂದಿನ ಪ್ರಧಾನಿಯಾಗಲಿದ್ದು, ಮೋದಿಯವರು ದೇಶದ ನಾಯಕತ್ವ ವಹಿಸಿಕೊಳ್ಳಲು ಸಮರ್ಥ ವ್ಯಕ್ತಿ' ಎಂದು ಮೋದಿಯನ್ನು ಹಾಡಿ ಹೊಗಳಿದ್ದರು. (ಪ್ರಧಾನಿ ಹುದ್ದೆಗೆ ಮೋದಿ ಅರ್ಹ: ನಟ ಸಲ್ಮಾನ್ ಖಾನ್)

ಸಲ್ಮಾನ್ ಮಾತಿಗೆ ತಿರುಗಿ ಬಿದ್ದ ಧಾರ್ಮಿಕ ಮುಖಂಡರು

ಸಲ್ಮಾನ್ ಖಾನ್ ಹೇಳಿಕೆ ಮುಸ್ಲಿಂ ಸಮುದಾಯದ ಕೆಲವರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು. ಆದರೂ ಸಲ್ಮಾನ್ ಖಾನ್ ತನ್ನ ನಿಲುವಿನಿಂದ ಹಿಂದಕ್ಕೆ ಸರಿದಿರಲಿಲ್ಲ.

ಸಲ್ಮಾನ್ ಚಿತ್ರ ನೋಡಬೇಡಿ ಎಂದು ಫರ್ಮಾನು

ಸಲ್ಮಾನ್ ಎಂದು ಹೆಸರಿಟ್ಟರೆ ಎಲ್ಲರೂ ಸಲ್ಮಾನ್ ಆಗಲು ಸಾಧ್ಯವಿಲ್ಲ. ನಮ್ಮಲ್ಲೂ ಸಲ್ಮಾನ್ ರಶ್ದಿ ಇದ್ದಾರೆ. ಜನರ ಮುಂದೆ ಕುಣಿಯುವ, ಹಾಡುವ ವ್ಯಕ್ತಿ ಮಾತ್ರ ಮೋದಿಯನ್ನು ಹೀರೋ ಅನ್ನಬಲ್ಲ. ಇವನ ಅಭಿನಯದ 'ಜೈ ಹೋ' ಚಿತ್ರವನ್ನು ಯಾರೂ ನಮ್ಮ ಭಾಂದವರು ನೋಡಬಾರದು ಎಂದು ಅಸಾವುದ್ದೀನ್ ಓವೈಸಿ ಫರ್ಮಾನು ಹೊರಡಿಸಿದ್ದರು. (ಮೋದಿ, ಸಲ್ಮಾನ್ ವಿರುದ್ದ ವಿಷ ಕಕ್ಕಿದ ಅಸಾವುದ್ದೀನ್ ಓವೈಸಿ)

ಕೋಮಲ್ ನಾಹ್ತಾ ಟ್ವೀಟ್

ಇಟಿಸಿ ಬಾಲಿವುಡ್ ಸಿನಿಮಾ ವಿಭಾಗದ ಸಂಪಾದಕ ಕೋಮಲ್ ನಾಹ್ತಾ ಟ್ವೀಟಿಗೆ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದ್ದರು.

English summary
Bollywood actor Salman Khan made it very clear, he doesn't need fans who think on communal ground.
Please Wait while comments are loading...