For Quick Alerts
  ALLOW NOTIFICATIONS  
  For Daily Alerts

  ಕಿರಿಯ ನಟಿಯ ನಟನೆ ಕಂಡು ಅಭದ್ರತೆ ಅನುಭವಿಸಿದ್ದರೇ ಕರೀನಾ ಕಪೂರ್?

  |

  ನಟಿಯರಿಗೆ ಈರ್ಷೆ, ಅಭದ್ರತೆ ಹೆಚ್ಚು ಎಂಬುದು ಲೋಕರೂಢಿ ಮಾತು. ಬಾಲಿವುಡ್ ನಟಿಯರಲ್ಲಂತೂ ಈರ್ಷೆ ತುಸು ಹೆಚ್ಚೇ ಇದೆ.

  ಬಾಲಿವುಡ್ ನಟಿಯರು ಪರಸ್ಪರ ಒಬ್ಬರು ಮತ್ತೊಬ್ಬರ ಅಭಿನಯವನ್ನು, ಸುಂದರತೆಯನ್ನು ಶ್ಲಾಘಿಸುವುದು ಬಹಳ ಅಪರೂಪ. 'ಕ್ಯಾಟ್‌ ಫೈಟ್‌' (ಕೋಳಿ ಜಗಳ) ಗಳಂತೂ ಬಾಲಿವುಡ್‌ ನಾಯಕಿಯರಲ್ಲಿ ಬೇರೆ ಸಿನಿ ಉದ್ಯಮಕ್ಕಿಂತಲೂ ತುಸು ಹೆಚ್ಚೇ.

  ಬಾಲಿವುಡ್‌ನ ಅನುಭವಿ ನಟಿ ಕರೀನಾ ಕಪೂರ್ ಅವರೂ ಸಹ ಇದಕ್ಕೆ ಹೊರತಲ್ಲ ಎಂಬುದೇ ಬಾಲಿವುಡ್ ಪ್ರೇಮಿಗಳ ನಂಬಿಕೆ. ಅವರೂ ಸಹ ತಮ್ಮ ಸಮಕಾಲೀನ ನಟಿಯರೊಂದಿಗೆ ಕೋಳಿ ಜಗಳ ಮಾಡಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ.

  ಆದರೆ ಅವರೇ ಹೇಳುವಂತೆ ಇದು ಸುಳ್ಳಂತೆ. ಕರೀನಾ ಕಪೂರ್ ಅವರು ನಾಯಕಿಯಾಗಿ ಯೋಚಿಸುವ ಬದಲಿಗೆ ಸೋದರಿಯಾಗಿ ಈ ವಿಷಯದಲ್ಲಿ ಯೋಚಿಸುತ್ತಾರಂತೆ. ಉದಾಹರಣೆ ಸಮೇತ ತಮಗೆ ಈರ್ಷೆ ಇಲ್ಲವೆಂದು ಕರೀನಾ ಹೇಳಿದ್ದಾರೆ.

  ಉಡ್ತಾ ಪಂಜಾಬ್ ನಲ್ಲಿ ಆಲಿಯಾ ಪಾತ್ರ ಶಕ್ತಿಯುತವಾಗಿತ್ತು: ಕರೀನಾ

  ಉಡ್ತಾ ಪಂಜಾಬ್ ನಲ್ಲಿ ಆಲಿಯಾ ಪಾತ್ರ ಶಕ್ತಿಯುತವಾಗಿತ್ತು: ಕರೀನಾ

  ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿರುವ ಕರೀನಾ ಕಪೂರ್, 'ಉಡ್ತಾ ಪಂಜಾಬ್' ಸಿನಿಮಾದಲ್ಲಿ ನನ್ನ ಪಾತ್ರಕ್ಕಿಂತಲೂ ಆಲಿಯಾ ಪಾತ್ರ ಹೆಚ್ಚು ಶಕ್ತಿಯುತವಾಗಿದೆ ಎಂದು ಗೊತ್ತಿದ್ದರೂ ಸಹ ನಾನು ಸಿನಿಮಾ ಒಪ್ಪಿಕೊಂಡೆ ಎಂದು ಹೇಳಿದ್ದಾರೆ.

  ನನ್ನ ಪಾತ್ರಕ್ಕೆ ಆದ್ಯತೆ ಕಡಿಮೆ ಎಂದು ಗೊತ್ತಿತ್ತು: ಕರೀನಾ

  ನನ್ನ ಪಾತ್ರಕ್ಕೆ ಆದ್ಯತೆ ಕಡಿಮೆ ಎಂದು ಗೊತ್ತಿತ್ತು: ಕರೀನಾ

  ಆಲಿಯಾ ಭಟ್ ಸಿನಿಮಾದಲ್ಲಿ ಇದ್ದರೂ, ಆಕೆಯ ಪಾತ್ರಕ್ಕೆ ಹೆಚ್ಚಿನ ಆದ್ಯತೆ ಇದೆ, ನನ್ನ ಪಾತ್ರಕ್ಕೆ ಆದ್ಯತೆ ಇಲ್ಲ ಎನ್ನುವುದು ಸಿನಿಮಾದ ಕತೆ ಕೇಳಿದಾಗಲೇ ನನಗೆ ಗೊತ್ತಿತ್ತು, ಆದರೆ ನಾನು ಅದೆಲ್ಲವನ್ನೂ ಯೋಚನೆ ಮಾಡದೆ ಸಿನಿಮಾಕ್ಕೆ ಸಹಿ ಹಾಕಿದೆ ಎಂದು ಕರೀನಾ ಹೇಳಿದ್ದಾರೆ.

  ಆಲಿಯಾಗೆ ಸಂದೇಶ ಕಳಿಸಿದ್ದ ಕರೀನಾ ಕಪೂರ್

  ಆಲಿಯಾಗೆ ಸಂದೇಶ ಕಳಿಸಿದ್ದ ಕರೀನಾ ಕಪೂರ್

  ಅಷ್ಟೆ ಅಲ್ಲ, ಆಕೆಯ ಅಭಿನಯವನ್ನು ಬಹುವಾಗಿ ಇಷ್ಟಪಟ್ಟೆ, ಆಲಿಯಾಳಿಗೆ ಸಂದೇಶ ಕಳುಹಿಸಿ ಅಭಿನಂದನೆಗಳನ್ನು ಸಹ ತಿಳಿಸಿದ್ದೆ. ಈ ರೀತಿಯ ಸಿನಿಮಾಗಳು ಮಾಡುವಾಗ ನಾಯಕಿಯಾಗಿ ಅಲ್ಲ, ಸಹೋದರಿಯಾಗಿ ನಾನು ಯೋಚಿಸುತ್ತೇನೆ ಎಂದು ಕರೀನಾ ಸಂದರ್ಶನದಲ್ಲಿ ಹೇಳಿದ್ದಾರೆ.

  ಮನೆಯಲ್ಲಿಯೇ ಕುಟುಂಬದೊಡನೆ ಇರುವ ಕರೀನಾ

  ಮನೆಯಲ್ಲಿಯೇ ಕುಟುಂಬದೊಡನೆ ಇರುವ ಕರೀನಾ

  ಕರೀನಾ ಕಪೂರ್ ಸದ್ಯಕ್ಕೆ ಲಾಕ್‌ಡೌನ್‌ ನಿಂದಾಗಿ ಮನೆಯಲ್ಲಿಯೇ ಪತಿ ಸೈಫ್ ಅಲಿ ಖಾನ್, ಪುತ್ರ ತೈಮೂರ್ ಜೊತೆಗೆ ಇದ್ದಾರೆ. ಪುಸ್ತಕ ಓದುವುದು, ಮಗನೊಂದಿಗೆ ಸಮಯ ಕಳೆಯುವುದು ಇನ್ನಿತರೆ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

  English summary
  Kareena Kapoor said, Alia's character in Udta Punjab is more powerful than my character still i signed that movie because of sisterhood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X