For Quick Alerts
  ALLOW NOTIFICATIONS  
  For Daily Alerts

  ಹಿಜಾಬ್ ಬಗ್ಗೆ ಪ್ರಶ್ನೆ ಮಾಡಲು ಹೋಗಿ ಸಮಸ್ಯೆಗೆ ಸಿಲುಕಿದ ಬಾಲಿವುಡ್ ನಟಿ!

  |

  ಕರ್ನಾಟಕದ ಉಡುಪಿಯಲ್ಲಿ ಆರಂಭವಾದ ಮುಸ್ಲಿಂ ಯುವತಿಯರು ಹಿಜಾಬ್ ಧರಿಸುವ ವಿಚಾರ ಇಂದು ಕೇವಲ ಕರ್ನಾಟಕಕ್ಕೆ ಸೀಮಿತವಾಗಿ ಉಳಿದಿಲ್ಲ. ಈ ವಿಚಾರ ಬೃಹತ್ ರೂಪವನ್ನು ಪಡೆದುಕೊಂಡು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಿಗೆ ಕಾರಣವಾಗಿದೆ.

  ಒಂದು ಕಡೆ ಸಮವಸ್ತ್ರ ಎನ್ನುವುದು ಒಂದೇ ರೀತಿಯಾಗಿರಬೇಕು, ಇದರಲ್ಲಿ ತಾರತಮ್ಯ ಸಲ್ಲದು ಎನ್ನುವ ಮಾತನ್ನು ಹೇಳಿದರೆ, ಇನ್ನೂ ಕೆಲವರು ಹಿಜಾಬ್ ಮುಸ್ಲಿಂ ಯುವತಿಯರ ಹಕ್ಕು ಎಂದು ಒಟ್ಟಾರೆ ಪರ, ವಿರೋಧ ಚರ್ಚೆಗಳು ನಡೆದಿವೆ.

  ಗರ್ಭಿಣಿ ಎಂದವರಿಗೆ ಹೀಗಾ ಉತ್ತರ ಕೊಡೋದು ಸೋನಮ್ ಕಪೂರ್
  ಈ ಪ್ರಕರಣವು ಈಗಾಗಲೇ ಕೋರ್ಟ್ ಮೆಟ್ಟಿಲೇರಿದೆ. ರಾಜ್ಯದಲ್ಲಿ ಕಾಲೇಜುಗಳಲ್ಲಿ ನಡೆದ ಘಟನೆಗಳನ್ನು ಕಂಡು ಭದ್ರತೆಯ ದೃಷ್ಟಿಯಿಂದ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿತ್ತು. ಇನ್ನು ಈ ಹಿಜಾಬ್ ಪ್ರಕರಣವು ದೊಡ್ಡ ಸುದ್ದಿಯಾದ ಮೇಲೆ ಹಲವು ಸಿನಿಮಾ ಸೆಲೆಬ್ರಿಟಿಗಳು ಇದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ.

  'ಈದ್ ಮುಬಾರಕ್' ಪೋಸ್ಟ್ ಹಾಕಿ ಟ್ರೋಲ್ ಆದ ಸೋನಮ್ ಕಪೂರ್: ನಟಿಯ ಪ್ರತಿಕ್ರಿಯೆ ಹೀಗಿದೆ 'ಈದ್ ಮುಬಾರಕ್' ಪೋಸ್ಟ್ ಹಾಕಿ ಟ್ರೋಲ್ ಆದ ಸೋನಮ್ ಕಪೂರ್: ನಟಿಯ ಪ್ರತಿಕ್ರಿಯೆ ಹೀಗಿದೆ

  ಸೋನಮ್ ರನ್ನು ಟ್ರೋಲ್ ಮಾಡಿದ ನೆಟ್ಟಿಗರು

  ಸೋನಮ್ ರನ್ನು ಟ್ರೋಲ್ ಮಾಡಿದ ನೆಟ್ಟಿಗರು

  ಈಗ ಇದೇ ವಿಚಾರಕ್ಕೆ ಬಾಲಿವುಡ್ ನ ಮತ್ತೊಬ್ಬ ಜನಪ್ರಿಯ ನಟಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ, ಫ್ಯಾಷನ್ ವಿಚಾರದಲ್ಲಿ ಸದಾ ಟ್ರೆಂಡ್‌ನಲ್ಲಿ ಇರುವ ನಟಿ ಸೋನಮ್ ಕಪೂರ್ ಹಿಜಾಬ್ ವಿಚಾರವಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಎರಡು ವಿಭಿನ್ನ ಫೋಟೋಗಳನ್ನು ಕೊಲಾಜ್ ಮಾಡಿದ್ದಾರೆ, ಇದರಲ್ಲಿ ಒಂದು ಕಡೆ ಪೇಟ ತೊಟ್ಟ ಸಿಖ್ ವ್ಯಕ್ತಿ, ಇನ್ನೊಂದು ಕಡೆ ಹಿಜಬ್ ಧರಿಸಿದ ಮಹಿಳೆಯ ಚಿತ್ರವನ್ನು ನಾವು ಗಮನಿಸಬಹುದಾಗಿದೆ.

  "ಪೇಟವು ಒಂದು ಆಯ್ಕೆಯಾದ್ರೆ, ಹಿಜಾಬ್​ ಯಾಕಾಗಬಾರದು ಎಂದ ನಟಿ

  ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅನುಮತಿ ನೀಡಬೇಕೆ ಎಂಬ ಕುರಿತು ಕರ್ನಾಟಕ ರಾಜ್ಯದಲ್ಲಿ ಉಲ್ಬಣವಾಗಿರುವ ವಿವಾದದ ಬಗ್ಗೆ ಬಾಲಿವುಡ್​ ನಟಿ ಸೋನಂ ಕಪೂರ್​ ಪ್ರತಿಕ್ರಿಯೆ ನೀಡಿ, ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆದರೆ, ಅವರು ಇನ್ನೊಂದು ಧರ್ಮದ ವಿಚಾರಕ್ಕೆ ತಲೆ ಹಾಕಿ ಟ್ರೋಲ್​ಗೊಳಗಾಗಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಫೋಟೋವೊಂದನ್ನು ಸೋನಂ ಕಪೂರ್​ ಶೇರ್​ ಮಾಡಿದ್ದರು. ಸಿಖ್​ ಧರ್ಮದ ವ್ಯಕ್ತಿಯೊಬ್ಬರು ಪೇಟ(ಪಗಡಿ) ಧರಿಸಿರುವ ಹಾಗೂ ಮುಸ್ಲಿಂ ಧರ್ಮದ ಮಹಿಳೆಯೊಬ್ಬರು ಹಿಜಾಬ್​ ಧರಿಸಿರುವ ಫೋಟೋ ಅದಾಗಿತ್ತು.ಅದಕ್ಕೆ ನಟಿ, "ಪೇಟವು ಒಂದು ಆಯ್ಕೆಯಾದ್ರೆ, ಹಿಜಾಬ್​ ಯಾಕಾಗಬಾರದು?" ಎಂದು ಕ್ಯಾಪ್ಶನ್​ ನೀಡಿದ್ದರು. ಆದರೆ, ಹಿಜಾಬ್​-ಕೇಸರಿ ಶಾಲೆ ವಿವಾದದ ನಡುವೆ ಸಿಖ್​ ಧರ್ಮವನ್ನು ಎಳೆದಿದ್ದಕ್ಕೆ ಸೋನಂ ಕಪೂರ್​ ವಿರುದ್ಧ ನೆಟ್ಟಿಗರು ಕಿಡಿ ಕಾರಿ, ಟ್ರೋಲ್​​ ಮಾಡಿದ್ದಾರೆ. ಸೋನಮ್ ಕಪೂರ್ ಈ ಮೂಲಕ ಹಿಜಾಬ್ ಪ್ರಕರಣಕ್ಕೆ ಇನ್ನೊಂದು ಧಾರ್ಮಿಕ ಸಂಪ್ರದಾಯವನ್ನು ತಳಕು ಹಾಕುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.

  ಹಿಜಾಬ್ ಬಗ್ಗೆ ಏನಂದ್ರು ಕಮಲ್ ಹಾಸನ್

  ಹಿಜಾಬ್ ಬಗ್ಗೆ ಏನಂದ್ರು ಕಮಲ್ ಹಾಸನ್

  ಸೋನಮ್ ಕಪೂರ್ ಮಾತ್ರವಲ್ಲದೇ ಬಾಲಿವುಡ್​, ಕಾಲಿವುಡ್​ ಸೇರಿದಂತೆ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಹಿಜಾಬ್​ ವಿವಾದದ ಬಗ್ಗೆ ಧ್ವನಿ ಎತ್ತಿದ್ದಾರೆ. ಇತ್ತೀಚೆಗೆ ಕಮಲ್​ ಹಾಸನ್​, ರಮ್ಯಾ, ಕಂಗನಾ ರಣಾವತ್​, ಜಾವೇದ್​ ಅಖ್ತರ್​ ಮುಂತಾದವರು ಈ ಕುರಿತು ಪೋಸ್ಟ್​ ಮಾಡಿದ್ದರು. 'ಕರ್ನಾಟಕದಲ್ಲಿ ನಡೆಯುತ್ತಿರುವ ಘಟನೆಗಳು ಶಾಂತಿ ಕದಡಲು ಪ್ರಚೋದಿಸುತ್ತಿವೆ. ವಿದ್ಯಾರ್ಥಿಗಳ ನಡುವೆ ಧಾರ್ಮಿಕ ವಿಷದ ಗೋಡೆ ನಿರ್ಮಾಣವಾಗುತ್ತಿದೆ. ಪಕ್ಕದ ರಾಜ್ಯದಲ್ಲಿ ನಡೆಯುತ್ತಿರುವುದು ತಮಿಳುನಾಡಿಗೆ ಬರಬಾರದು. ಪ್ರಗತಿಪರ ಶಕ್ತಿಗಳು ಹೆಚ್ಚು ಎಚ್ಚರಿಕೆಯಿಂದ ಇರಬೇಕಾದ ಸಮಯವಿದು' ಎಂದು ಕಮಲ್​ ಹಾಸನ್​ ಟ್ವೀಟ್​ ಮಾಡಿದ್ದರು.

  ಎರಡು ಭಾಗವಾಗಿರುವುದನ್ನು ನೋಡಲು ದುಃಖವಾಗ್ತಿದೆ ಎಂದ ರಮ್ಯಾ

  ಎರಡು ಭಾಗವಾಗಿರುವುದನ್ನು ನೋಡಲು ದುಃಖವಾಗ್ತಿದೆ ಎಂದ ರಮ್ಯಾ

  ಹಿಜಾಬ್​ ಧರಿಸಿದ ವಿದ್ಯಾರ್ಥಿನಿಯರು ಮತ್ತು ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಪರಸ್ಪರ ಕಾದಾಡುತ್ತಿರುವ ವಿಡಿಯೋವನ್ನು ರಮ್ಯಾ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ಭಾರತದ ಯುವಜನತೆ ಈ ರೀತಿ ಎರಡು ಭಾಗವಾಗಿರುವುದನ್ನು ನೋಡಲು ದುಃಖವಾಗುತ್ತದೆ' ಎಂದು ರಮ್ಯಾ ಪೋಸ್ಟ್​ ಬರೆದುಕೊಂಡಿದ್ದರು.

  ಬಟ್ಟೆ ಎಂಬುದು ಅವರವರ ವೈಯಕ್ತಿಕ ವಿಚಾರ ಎಂದಿದ್ದ ಗಾಯಕಿ

  ಬಟ್ಟೆ ಎಂಬುದು ಅವರವರ ವೈಯಕ್ತಿಕ ವಿಚಾರ ಎಂದಿದ್ದ ಗಾಯಕಿ

  ಯಾವ ಬಟ್ಟೆ ಧರಿಸಬೇಕು ಎಂಬುದು ಮಹಿಳೆಯರ ಸ್ವಾತಂತ್ರ್ಯ ಎಂದು ಕೆಲವರು ಹೇಳುತ್ತಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಇರಬೇಕು ಎಂದು ಇನ್ನೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 'ನಾನು ಕೂಡ ಇಸ್ಲಾಂ ಕುಟುಂಬದಲ್ಲಿ ಬೆಳೆದವಳು. ನಾನು ಹಿಜಾಬ್​ ಹಾಕಲ್ಲ. ಹಾಗಂತ ನಾನು ಹಿಬಾಬ್ ಹಾಕುವವರ ವಿರೋಧಿ ಕೂಡ ಅಲ್ಲ. ಬಟ್ಟೆ ಎಂಬುದು ಅವರವರ ವೈಯಕ್ತಿಕ ವಿಚಾರ. ನಾನು ಹಿಜಾಬ್​ ಹಾಕಲ್ಲ ಅಂತ ಅನೇಕ ಪರ-ವಿರೋಧ ಚರ್ಚೆ ನಡೆದಿದೆ ಎಂದು ಗಾಯಕಿ ಸುಹಾನಾ ಸೈಯದ್ ಇತ್ತೀಚೆಗೆ​​ ಹೇಳಿದ್ದರು.

  English summary
  Sonam shared a picture of a man in a turban and a woman in a hijab, and it questions why can a turban be a choice but a hijab can't. Sonam's post comes days after several women in Karnataka were heckled by protestors for wearing a hijab.
  Sunday, February 13, 2022, 15:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X