Don't Miss!
- Technology
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- News
ಬೊಮ್ಮಾಯಿ ಎಂದರೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಸಿಎಂ!
- Lifestyle
ದಕ್ಷಿಣ ಧ್ರುವಕ್ಕೆ ಯಾತ್ರೆ ಮಾಡಿ ಸಾಧನೆ ಮೊದಲ ಮಹಿಳೆ: ಕ್ಯಾ. ಪ್ರೀತಿ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Sports
BGT 2023: ಭಾರತದ ಸ್ಪಿನ್ ದಾಳಿ ಭಯ: ಆಸ್ಟ್ರೇಲಿಯಾ ಆಟಗಾರರು ಮಾಡ್ತಿರೋದೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ದಿ ಕಾಶ್ಮೀರ್ ಫೈಲ್ಸ್' ಅತ್ಯಂತ ಕಳಪೆ ಸಿನಿಮಾ: ಇರಾನಿ ನಿರ್ದೇಶಕ
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಿಡುಗಡೆ ಆದಾಗಿನಿಂದಲೂ ವಿವಾದಗಳಿಂದ ಸುದ್ದಿಯಾಗಿದೆ. ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಕತೆ ಹೊಂದಿರುವ ಸಿನಿಮಾ ಎನ್ನಲಾಗಿರುವ ಈ ಸಿನಿಮಾ ಪ್ರೊಪಾಗಾಂಡಾ ಸಿನಿಮಾ ಹಿಂಸೆಗೆ ಪ್ರಚೋದನೆ ನೀಡುವ ಸಿನಿಮಾ ಎಂಬ ಮಾತುಗಳು ಕೇಳಿ ಬಂದಿದ್ದವು.
ಇದೀಗ ಗೋವಾ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಸಿನಿಮಾಗಳನ್ನು ಪ್ರಶಸ್ತಿಗೆ ಆರಿಸುವ ಜೂರಿ ತಂಡದ ಸದಸ್ಯರೊಬ್ಬರು ಈ ಸಿನಿಮಾವನ್ನು ಅತ್ಯಂತ ಅಸಹ್ಯದ ಸಿನಿಮಾ ಎಂದಿದ್ದಾರೆ.
ಮುಖ್ಯ ಜ್ಯೂರಿಗಳಲ್ಲಿ ಒಬ್ಬರಾಗಿರುವ ಇಸ್ರೇಲಿನ ನಿರ್ದೇಶಕ ನದಾವ್ ಲಪಿದ್, ''ದಿ ಕಾಶ್ಮೀರ್ ಫೈಲ್ಸ್' ಸಿನಿಮಾವು ಪ್ರೊಪೊಗ್ಯಾಂಡಾ ಹಾಗೂ ವಲ್ಗರ್ (ಅಹಸ್ಯವಾದ) ಸಿನಿಮಾ. ಇಂಥಹಾ ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಈ ರೀತಿಯ ಸಿನಿಮಾ ನೋಡಿ ನಾವು ಆಶ್ಚರ್ಯಪಟ್ಟೆವು. ಸಿನಿಮೋತ್ಸವು ವಿಮರ್ಶಾತ್ಮಕ ಟೀಕೆಗಳನ್ನೂ ಸ್ವಾಗತಿಸಬೇಕು ಹಾಗೂ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಸ್ವತಂತ್ರ್ಯವಾಗಿ ಹಂಚಿಕೊಳ್ಳುವ ವಾತಾವರಣ ಇರಬೇಕು ಅದು ಕಲೆ ಹಾಗೂ ಜೀವನಕ್ಕೆ ಅತ್ಯಂತ ಅವಶ್ಯಕ'' ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಹಾಗೂ ಆರ್‌ಎಸ್ಎಸ್ ಒಟ್ಟಾಗಿ ಈ ಸಿನಿಮಾದ ಪ್ರಚಾರ ಮಾಡಿದ್ದವು. 'ದಿ ಕಾಶ್ಮೀರ್ ಫೈಲ್ಸ್' ದೊಡ್ಡ ಮೊತ್ತದ ಕಲೆಕ್ಷನ್ ಅನ್ನು ಮಾಡಿತು. ಆದರೆ ಸಿನಿಮಾವು ಹಿಂಸೆಗೆ ಪ್ರಚೋದನೆ ನೀಡುವ, ಧರ್ಮಗಳ ನಡುವೆ ದ್ವೇಷ ಬಿತ್ತುವ ಅಂಶವನ್ನು ಹೊಂದಿದೆ ಎಂದು ತೀವ್ರವಾಗಿ ಟೀಕೆಗೂ ಒಳಗಾಯಿತು.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಅರಬ್ ದೇಶಗಳಲ್ಲಿ ಮಾತ್ರವೇ ಅಲ್ಲದೆ ನ್ಯೂಜಿಲೆಂಡ್ ಹಾಗೂ ಇನ್ನಿತರೆ ದೇಶಗಳಲ್ಲಿ ನಿಷೇಧ ಮಾಡಲಾಗಿದೆ.
ಇದೀಗ, ಇಸ್ರೇಲಿ ನಿರ್ದೇಶಕ ಗೋವಾ ಸಿನಿಮೋತ್ಸವದಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಪ್ರೊಪಗ್ಯಾಂಡಾ ಹಾಗೂ ಅಸಹ್ಯಕರ ಸಿನಿಮಾ ಎಂದಿರುವುದಕ್ಕೆ ಆ ಸಿನಿಮಾದ ನಟ ಅನುಪಮ್ ಖೇರ್ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿದ್ದು, ''ಸುಳ್ಳು ಅದೆಷ್ಟೇ ಎತ್ತರದಲ್ಲಿರಲಿ ಸತ್ಯದ ಜೊತೆ ಹೋಲಿಕೆಯಲ್ಲಿ ಚಿಕ್ಕದಾಗಿಯೇ ಇರುತ್ತದೆ'' ಎಂದಿದ್ದಾರೆ. ಜೊತೆಗೆ ಹಾಲಿವುಡ್‌ನ ಜನಪ್ರಿಯ ಸಿನಿಮಾ 'ಶಿಂಡೆರ್ಸ್ ಲಿಸ್ಟ್'ನ ಚಿತ್ರಗಳ ಜೊತೆಗೆ ತಮ್ಮ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಸಿನಿಮಾ ಕರ್ಮಿ ಅಶೋಕ್ ಪಂಡಿತ್ ಸಹ ನದಾವ್ ಲಪಿದ್ ಅವರ ಮಾತುಗಳನ್ನು ಖಂಡಿಸಿದ್ದು, ''ಜ್ಯೂರಿ ಸದಸ್ಯ ನದಾವ್ ಲಪಿದ್ ಬಳಸಿರುವ ಭಾಷೆಯನ್ನು ನಾನು ಖಂಡಿಸುತ್ತೇನೆ. ಮೂರು ಲಕ್ಷ ಕಾಶ್ಮೀರಿ ಹಿಂದುಗಳನ್ನು ಹತ್ಯೆ ಮಾಡಿರುವುದು ಅಸಹ್ಯ ಅಲ್ಲ. ನಾನೊಬ್ಬ ಸಿನಿಮಾ ಕರ್ಮಿಯಾಗಿ ಹಾಗೂ ಕಾಶ್ಮೀರಿ ಪಂಡಿತನಾಗಿ ಇದನ್ನು ಉಗ್ರವಾಗಿ ಖಂಡಿಸುತ್ತೇನೆ'' ಎಂದಿದ್ದಾರೆ.