»   » 2014ರ ಐಐಎಫ್ಎ ಪ್ರಶಸ್ತಿ ಪುರಸ್ಕೃತರ ಪಟ್ಟಿ

2014ರ ಐಐಎಫ್ಎ ಪ್ರಶಸ್ತಿ ಪುರಸ್ಕೃತರ ಪಟ್ಟಿ

Posted By:
Subscribe to Filmibeat Kannada

ಫ್ಲೋರಿಡಾದ ಟಾಂಪಾ ಬೇ ಯಲ್ಲಿ 15ನೇ ಇಂಟರ್ ನ್ಯಾಶನಲ್‌ ಇಂಡಿಯನ್‌ ಫಿಲ್ಮ್ ಅಕಾಡೆಮಿ (ಐಐಎಫ್ಎ) ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ದೀಪಿಕಾ ಪಡುಕೋಣೆ, ಸೋನಾಕ್ಷಿ ಸಿನ್ಹಾ, ಹೃತಿಕ್ ರೋಷನ್ ಮತ್ತು ಭವ್ಯ ಸಮಾರಂಭದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟು ಪ್ರೇಕ್ಷಕರನ್ನು ರಂಜಿಸಿದರು.

ಎ.23ರಿಂದ 26ರ ವರೆಗೆ ಟಾಂಪಾ ಬೇಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಧುರಿ ದೀಕ್ಷಿತ್‌, ಕರೀನಾ ಕಪೂರ್‌ ಖಾನ್‌, ಸೈಫ್ ಅಲಿ ಖಾನ್‌ ಮತ್ತು ಅನಿಲ್‌ ಕಪೂರ್‌ ಮುಂತಾದವರು ಪಾಲ್ಗೊಂಡಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭದ ಕಾರ್ಯಕ್ರಮವನ್ನು ಶಹೀದ್‌ ಕಪೂರ್‌ ಮತ್ತು ಫ‌ರ್ಹಾನ್‌ ಅಖ್ತರ್‌ ನಿರೂಪಿಸಿದರು.

IIFA 2014

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶತ್ರುಘ್ನ ಸಿನ್ಹಾ 2014ರ ಜೀವಮಾನದ ಶೇಷ್ಠ ಸಾಧನೆ ಪ್ರಶಸ್ತಿಯನ್ನು ಪುತ್ರಿ ಸೋನಾಕ್ಷಿ ಸಿನ್ಹಾ ಅವರಿಂದ ಪಡೆದರು. ಹಾಡುಗಳಿಂದಲೇ ಮೋಡಿ ಮಾಡಿದ್ದ ಆಶಿಕಿ 2 ಚಿತ್ರ ಉತ್ತಮ ಸಾಹಿತ್ಯಕ್ಕಾಗಿ ಪ್ರಶಸ್ತಿಯನ್ನು ಪಡೆಯಿತು.

ಭಾಗ್ ಮಿಲ್ಕಾ ಭಾಗ್ 9 ಪ್ರಶಸ್ತಿಗಳನ್ನು ಪಡೆದರೆ, ಗುಳಿ ಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ Best entertainer ಪ್ರಶಸ್ತಿಯನ್ನು ಪಡೆದರು. ಹಲವಾರು ಇತರ ಪ್ರಶಸ್ತಿಗಳಿಗೂ ದೀಪಿಕಾ ನಾಮ ನಿರ್ದೇಶನಗೊಂಡಿದ್ದರು. 2014ರ Best Debutant award ಪಡೆದ ಧನುಷ್ ಕೊಲವೆರಿ ಡಿ ಹಾಡನ್ನು ಹಾಡಿದರು.

ಪ್ರಶಸ್ತಿಗಳ ವಿವರ ಹೀಗಿದೆ

ಉತ್ತಮ ಸಾಹಿತ್ಯ : ಮಿಥುನ್ (ತುಮ್ ಹಿ ಹೋ - ಆಶಿಕಿ 2)
Best Entertainer of the Year: ದೀಪಿಕಾ ಪಡುಕೋಣೆ
Best Debutant Award map: ಧನುಷ್ (ರಾಜನ್ನ)
Best male playback singer Award: ಅರ್ಜಿತ್ ಸಿಂಗ್ (ತುಮ್ ಹಿ ಹೋ - ಆಶಿಕಿ 2)
Best female playback singer Award : ಶ್ರೇಯಾ ಘೋಷಾಲ್ (ಸುನ್ ರಹಾ ಹೇ ತೂ - ಆಶಿಕಿ 2)
Best Performance in a comic Role Award :ಅರ್ಷಾದ್ ವಾರ್ಸಿ (ಜಾಲಿ ಎಲ್ಎಲ್ ಬಿ)
Best Performance in negative role Award: ರಿಷಿ ಕಪೂರ್ (ಡಿ ಡೇ)

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

English summary
Shatrughan Sinha receives Lifetime Achievement award in IIFA 2014. He receives from his own daughter Sonakshi Sinha. Aashique 2 which hit the whole India by its wave won for its Best Lyrics award. Bhaag Milkha Bhaag bags nine awards.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada