For Quick Alerts
  ALLOW NOTIFICATIONS  
  For Daily Alerts

  'ವರ್ಜಿನಿಟಿ ಯಾವಾಗ ಕಳೆದುಕೊಂಡ್ರಿ' ಪ್ರಶ್ನೆಗೆ ಇಲಿಯಾನಾ ಕೊಟ್ಟ ಉತ್ತರವೇನು?

  |

  ಸೆಲೆಬ್ರಿಟಿಗಳು ಅಭಿಮಾನಿಗಳಿಂದ ಹಲವು ಬಾರಿ ಮುಜುಗರಕ್ಕೆ ಒಳಗಾಗಿರುತ್ತಾರೆ. ಸೆಲ್ಫಿ ತೆಗೆದುಕೊಳ್ಳುವಾಗ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಬಂದಾಗ ಕೆಟ್ಟದಾಗಿ ಸ್ಪರ್ಶಿಸುವುದು, ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ಅಥವಾ ಪೋಸ್ಟ್ ಹಾಕಿದ್ರೆ ಅದಕ್ಕೆ ಕೆಟ್ಟಗಾಗಿ ಕಾಮೆಂಟ್ ಮಾಡುವುದು ಸಾಮಾನ್ಯ.

  ಇದೀಗ, ಬಾಲಿವುಡ್ ನಟಿ ಇಲಿಯಾನಾಗೆ ಇಂತಹದ್ದೇ ಸನ್ನಿವೇಶವೊಂದು ಎದುರಾಗಿದೆ. ನಟಿ ಇಲಿಯಾನಾ ಇತ್ತೀಚಿಗಷ್ಟೆ 'Ask Me Anything' (ನನ್ನ ಬಗ್ಗೆ ಏನಾದರೂ ಕೇಳಿ ಹೇಳುತ್ತೇನೆ) ಎಂಬ ಅಭಿಯಾನಕ್ಕೆ ಆಹ್ವಾನ ಕೊಟ್ಟಿದ್ದರು.

  ವಿದೇಶಿ ಬಾಯ್ ಫ್ರೆಂಡ್ ಜೊತೆ ಸಂಬಂಧ ಮುರಿದುಕೊಂಡ್ರಾ ಇಲಿಯಾನಾ?

  ಈ ಅಭಿಯಾನದಲ್ಲಿ ನೆಟ್ಟಿಗನೊಬ್ಬ ಇಲಿಯಾನಾಗೆ ನಿಮ್ಮ ವರ್ಜಿನಿಟಿ ಯಾವಾಗ ಕಳೆದುಕೊಂಡ್ರಿ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಇಲಿಯಾನ ಕೂಡ ಅಷ್ಟೇ ಖಡಕ್ ಆಗಿ ಉತ್ತರಿಸಿದ್ದಾರೆ. ಏನಂದ್ರು? ಮುಂದೆ ಓದಿ....

  ನೀವು ಯಾವಾಗ ಕನ್ಯತ್ವ ಕಳೆದುಕೊಂಡ್ರಿ?

  ನೀವು ಯಾವಾಗ ಕನ್ಯತ್ವ ಕಳೆದುಕೊಂಡ್ರಿ?

  ಸೆಲೆಬ್ರಿಟಿಗಳ ಖಾಸಗಿ ವಿಚಾರದ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಆಸಕ್ತಿ ಹೊಂದಿರುವ ಕೆಲವರು, ಇಂತಹ ಅವಕಾಶಗಳು ಸಿಕ್ಕಾಗ ಇಂತಹ ಪ್ರಶ್ನೆಗಳನ್ನ ಕೇಳ್ತಾರೆ. ಇಂತಹ ಘಟನೆಗಳು ಈ ಹಿಂದೆಯೇ ಆಗಿದೆ. ಇದೀಗ, 'Ask Me Anything' ನೆಪದಲ್ಲಿ ಅಭಿಮಾನಿಯೊಬ್ಬ ನೀವು ಯಾವಾಗ ಕನ್ಯತ್ವ ಕಳೆದುಕೊಂಡ್ರಿ? ಎಂದು ಇಲಿಯಾನಾ ಬಳಿ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಇಲಿಯಾನ '' ವಾಹ್ ನೋಸಿ ಮಚ್, ನಿಮ್ಮ ತಾಯಿನ ಕೇಳಿದ್ರೆ ಏನ್ ಹೇಳ್ತಾರೆ? ಎಂದು ತಿರುಗೇಟು ನೀಡಿದ್ದಾರೆ.

  ''ನಾನು ಗರ್ಭಿಣಿ ಅಲ್ಲ'' ಅಂತ ಒತ್ತಿ ಒತ್ತಿ ಹೇಳಿದ ನಟಿ ಇಲಿಯಾನಾ.!

  ಬಾಯ್ ಫ್ರೆಂಡ್ ಜೊತೆ ಸಂಬಂಧ ಮುರಿದುಕೊಂಡ್ರಾ?

  ಬಾಯ್ ಫ್ರೆಂಡ್ ಜೊತೆ ಸಂಬಂಧ ಮುರಿದುಕೊಂಡ್ರಾ?

  ಕಳೆದ ಕೆಲ ವರ್ಷಗಳಿಂದ ವಿದೇಶಿ ಫೋಟೋಗ್ರಫರ್ ಆಂಡ್ರ್ಯೂ ಜೊತೆ ಪ್ರೀತಿಯಲ್ಲಿದ್ದಾರೆ. ಒಬ್ಬರು ಸಹ ಜೀವನ ನಡೆಸುತ್ತಿದ್ದರು ಎಂಬ ಸುದ್ದಿ ಇತ್ತು. ಅದಕ್ಕೆ ಪುಷ್ಠಿ ಕೊಡುವಂತೆ ಇಲಿಯಾನ ಕೂಡ ಕೆಲವು ಆತ್ಮೀಯ ಫೋಟೋಗಳನ್ನ ಹಂಚಿಕೊಂಡಿದ್ದರು. ಅದ್ಯಾಕೋ ಈಗ ಇವರಿಬ್ಬರ ಸಂಬಂಧ ಮುರಿದುಬಿದ್ದಿದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಏನು ಎಂಬುದು ಗೊತ್ತಿಲ್ಲ.

  'ಪಾಗಲ್ ಪಂತಿ' ಚಿತ್ರದಲ್ಲಿ ನಟನೆ

  'ಪಾಗಲ್ ಪಂತಿ' ಚಿತ್ರದಲ್ಲಿ ನಟನೆ

  ಅನಿಲ್ ಕಪೂರ್, ಜಾನ್ ಅಬ್ರಾಹಿಂ, ಅರ್ಷಾದ್ ವರ್ಸಿ, ಕೃತಿ ಕರಬಂಧ, ಊರ್ವಶಿ ರೌಟೇಲಾ, ಸೇರಿದಂತೆ ದೊಡ್ಡತಾರಬಳಗ ಹೊಂದಿರುವ 'ಪಾಗಲ್ ಪಂತಿ' ಚಿತ್ರದಲ್ಲಿ ಇಲಿಯಾನಾ ನಟಿಸಿದ್ದಾರೆ. ಈ ಸಿನಿಮಾ ನವೆಂಬರ್ 8 ರಂದು ತೆರೆಗೆ ಬರಲಿದೆ.

  ಕನ್ನಡದಲ್ಲೂ ಇಲಿಯಾನ ಸಿನಿಮಾ

  ಕನ್ನಡದಲ್ಲೂ ಇಲಿಯಾನ ಸಿನಿಮಾ

  2006ರಲ್ಲಿತೆಲುಗಿನ 'ದೇವದಾಸ್' ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ಪರಿಚಯವಾದ ಇಲಿಯಾನಾ, ಪೊರ್ಕಿ, ರಾಕಿ, ಜಲ್ಸಾ, ಕಿಕ್, ಕನ್ನಡದ ಹುಡುಗ ಹುಡುಗಿ, ಹಿಂದಿಯಲ್ಲಿ ರುಸ್ತುಂ, ರೈಡ್ ಹೀಗೆ ಬಹುಭಾಷೆಯಲ್ಲಿ ನಟಿಸಿದ್ದಾರೆ. ಕೊನೆಯದಾಗಿ ತೆಲುಗಿನ ಅಮರ್ ಅಕ್ಬರ್ ಆಂಟೋನಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

  English summary
  Actress Ileana d'cruz Has Gives Strong Reply to A Fan Who Asked About Her Virginity

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X