twitter
    For Quick Alerts
    ALLOW NOTIFICATIONS  
    For Daily Alerts

    ದಕ್ಷಿಣ ಭಾರತ 25ಕ್ಕೂ ಹೆಚ್ಚು ಸಿನಿಮಾ ಬಾಲಿವುಡ್‌ಗೆ ರಿಮೇಕ್: ಇದರಲ್ಲಿ ಕನ್ನಡದ ಪಾಲು ಒಂದೇ ಒಂದು

    |

    ಅದೊಂದು ಕಾಲವಿತ್ತು. ದಕ್ಷಿಣ ಭಾರತದ ಸಿನಿಮಾಗಳ ಕಡೆ ಬಾಲಿವುಡ್ ಮಂದಿ ತಿರುಗಿ ಕೂಡ ನೋಡುತ್ತಿರಲಿಲ್ಲ. ಬಾಲಿವುಡ್ ಸಿನಿಮಾ ಇಡೀ ವಿಶ್ವದ ಮೂಲೆ ಮೂಲೆಯಲ್ಲಿರುವ ಸಿನಿಮಾ ಮಂದಿಗೂ ನೋಡಲು ಸಿಗುತ್ತಿತ್ತು. ಆದರೆ, ಈಗ ಬಾಲಿವುಡ್ ಸ್ಥಿತಿ ಹಾಗೇ ಉಳಿಸಿಕೊಂಡಿಲ್ಲ. ಇವರು ಕೂಡ ದಕ್ಷಿಣ ಭಾರತದ ಸಿನಿಮಾ ಕಡೆ ಮುಖ ಮಾಡಿದ್ದಾರೆ. ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಯ ಸಿನಿಮಾಗಳನ್ನು ರಿಮೇಕ್ ಮಾಡುತ್ತಿದ್ದಾರೆ.

    ದಕ್ಷಿಣ ಭಾರತದ ಸಿನಿಮಾಗಳು ವಿಶ್ವಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಖುಷಿ ವಿಷಯ. ಆದರೆ, ದಕ್ಷಿಣದ ನಾಲ್ಕು ಭಾಷೆಗಳಲ್ಲಿ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳೇ ಬಾಲಿವುಡ್‌ಗೆ ಹೆಚ್ಚು ರಿಮೇಕ್ ಆಗುತ್ತಿದೆ. ಕನ್ನಡದ ಸಿನಿಮಾಗಳು ಇನ್ನೂ ಆ ಮಟ್ಟಿಗೆ ಗಮನ ಸೆಳೆಯುವಲ್ಲಿ ವಿಫಲವಾಗಿವೆ. ಅಷ್ಟಕ್ಕೂ ಬಾಲಿವುಡ್‌ಗೆ ರಿಮೇಕ್ ಆಗುತ್ತಿರುವ ಆ 25 ಸಿನಿಮಾಗಳು ಯಾವುವು? ರಿಮೇಕ್ ಆಗುತ್ತಿರುವ ಕನ್ನಡದ ಒಂದೇ ಒಂದು ಸಿನಿಮಾ ಯಾವುದು? ತಿಳಿಯಲು ಮುಂದೆ ಓದಿ.

     ತಮಿಳಿನ 13 ಸಿನಿಮಾ ರಿಮೇಕ್

    ತಮಿಳಿನ 13 ಸಿನಿಮಾ ರಿಮೇಕ್

    ಬಾಲಿವುಡ್‌ಗೆ ರಿಮೇಕ್ ಆಗುತ್ತಿರುವ ದಕ್ಷಿಣ ಭಾರತದ ಸಿನಿಮಾಗಳ ಪೈಕಿ ತಮಿಳಿನ ಪಾಲು ಹೆಚ್ಚಿದೆ. ಸುಮಾರು 25 ಸಿನಿಮಾಗಳಲ್ಲಿ ತಮಿಳಿನ 13 ಸಿನಿಮಾಗಳು ಬಾಲಿವುಡ್‌ನಲ್ಲಿ ರಿಮೇಕ್ ಆಗುತ್ತಿವೆ. 'ಕೈತಿ', 'ಜಿಗರ್‌ಥಾಂಡ', 'ಅನ್ನಿಯನ್', 'ವಿಕ್ರಂ ವೇದ', 'ಧ್ರುವಂಗಳ್ ಪಾಥಿನಾರು', 'ರಟ್ಸಸನ್', 'ಥಡಮ್', 'ಕೊಮಲಿ', 'ಮಾನಗಾರಂ', 'ಅರುವಿ', 'ಮಾನಾಡು', 'ಸುರರೈ ಪೋಟ್ರು' ಹಾಗೂ 'ಮಾಸ್ಟರ್' ಸಿನಿಮಾಗಳು ಬಾಲಿವುಡ್‌ನಲ್ಲಿ ರಿಮೇಕ್ ಆಗುತ್ತಿದ್ದು, ಸೂಪರ್‌ಸ್ಟಾರ್‌ಗಳೇ ರಿಮೇಕ್‌ಗೆ ಇಳಿದಿದ್ದಾರೆ.

     5 ಸಿನಿಮಾ ಬಾಲಿವುಡ್‌ಗೆ ರಿಮೇಕ್

    5 ಸಿನಿಮಾ ಬಾಲಿವುಡ್‌ಗೆ ರಿಮೇಕ್

    'ಬಾಹುಬಲಿ' ಬಳಿಕ ತೆಲುಗು ಸಿನಿಮಾಗಳು ಬಾಲಿವುಡ್ ಮಂದಿ ಗಮನ ಸೆಳೆದಿವೆ. ಅದರಲ್ಲೂ 'ಪುಷ್ಪ' ಬಿಡುಗಡೆ ಬಳಿಕ ಟಾಲಿವುಡ್‌ ಸಿನಿಮಾಗಳ ಮೇಲೆ ಬಾಲಿವುಡ್ ಕಣ್ಣಿಟ್ಟಿದೆ. 'ಅಲಾ ವೈಕುಂಠಪುರಮುಲೋ', 'ಜೆರ್ಸಿ', 'ಹಿಟ್', 'ನಾಂದಿ', 'ಛತ್ರಪತಿ' ಸಿನಿಮಾಗಳೂ ಬಾಲಿವುಡ್‌ನಲ್ಲಿ ರಿಮೇಕ್ ಆಗುತ್ತಿವೆ. ಸದ್ಯ 5 ಸಿನಿಮಾಗಳಿಗೆ ಬಾಲಿವುಡ್‌ನಲ್ಲಿ ರಿಮೇಕ್ ಆಗುತ್ತಿದ್ದು, ಇನ್ನು ಕೆಲವು ಸಿನಿಮಾಗಳು ಮಾತುಕಥೆಯಲ್ಲಿವೆ ಎನ್ನಲಾಗುತ್ತಿದೆ.

     ಮಲಯಾಳಂನ 5 ಸಿನಿಮಾ ರಿಲೀಸ್

    ಮಲಯಾಳಂನ 5 ಸಿನಿಮಾ ರಿಲೀಸ್

    ಇತ್ತೀಚೆಗಿನ ದಿನಗಳಲ್ಲಿ ಮಲಯಾಳಂ ಸಿನಿಮಾಗಳು ಬಾಲಿವುಡ್‌ಗೆ ಹೆಚ್ಚು ರಿಮೇಕ್ ಆಗುತ್ತಿವೆ. ಬಾಲಿವುಡ್ ಮಂದಿಗೆ ಗಮನ ಸೆಳೆಯುವಲ್ಲಿ ಮಲಯಾಳಂ ಸೂಪರ್‌ಸ್ಟಾರ್‌ಗಳು ಹಿಂದೆ ಬಿದ್ದಿಲ್ಲ. 'ಡ್ರೈವಿಂಗ್ ಲೈಸೆನ್ಸ್', 'ದೃಶ್ಯಂ 2', 'ಹೆಲೆನ್', 'ಅಯ್ಯಪ್ಪನುಂ ಕೋಶಿಯುಂ', 'ನಾಯಟ್ಟು' ಸಿನಿಮಾಗಳು ಬಾಲಿವುಡ್‌ಗೆ ರಿಮೇಕ್ ಆಗುತ್ತಿವೆ.

     ಬಾಲಿವುಡ್‌ನಲ್ಲಿ 'ಯೂಟರ್ನ್' ರಿಮೇಕ್

    ಬಾಲಿವುಡ್‌ನಲ್ಲಿ 'ಯೂಟರ್ನ್' ರಿಮೇಕ್

    ದಕ್ಷಿಣದ ನಾಲ್ಕು ಭಾಷೆಯ ಸಿನಿಮಾಗಳಲ್ಲಿ ಕಾಂಪಿಟೇಷನ್‌ನಿಂದ ಕನ್ನಡ ಚಿತ್ರರಂಗ ಹಿಂದೆ ಸರಿದಿದೆ. ಕಮ್ಮಿ ಅಂದರೂ ತೆಲುಗು, ತಮಿಳು ಹಾಗೂ ಮಲಯಾಳಂ 5 ಸಿನಿಮಾಗಳು ರಿಮೇಕ್ ಆಗುತ್ತಿವೆ. ಆದರೆ, ಕನ್ನಡದಿಂದ ಬಾಲಿವುಡ್‌ಗೆ ರಿಮೇಕ್ ಆಗುತ್ತಿರುವುದು ಕೇವಲ ಒಂದೇ ಒಂದು ಸಿನಿಮಾ. ಅದು 'ಯೂಟರ್ನ್'. ಬಾಲಿವುಡ್‌ನಲ್ಲಿ ಸದ್ಯ 'ಯೂಟರ್ನ್' ಸಿನಿಮಾ ಶೂಟಿಂಗ್ ಮುಗಿಸಿದೆ. ಶ್ರದ್ಧಾ ಶ್ರೀನಾಥ್ ಪಾತ್ರದಲ್ಲಿ ಅಲಯ ಫರ್ನೀಚರ್‌ವಾಲಾ ನಟಿಸುತ್ತಿದ್ದು, ಆರಿಫ್ ಖಾನ್ ನಿರ್ದೇಶಿಸಿದ್ದಾರೆ. ಸದ್ಯಕ್ಕೆ ಕನ್ನಡದಿಂದ ರಿಮೇಕ್ ಅಂತ ಆಗುತ್ತಿರುವುದು ಇದೊಂದು ಸಿನಿಮಾ. ಯಾವುದೇ ಸಿನಿಮಾ ಮಾತುಕತೆಯ ಹಂತದಲ್ಲಿ ಇದ್ದರೂ, ಆ ಸಿನಿಮಾ ಬಗ್ಗೆ ಅಧಿಕೃತವಾಗಿ ಯಾರೂ ಹೇಳಿಕೊಂಡಿಲ್ಲ.

    English summary
    In 25 South Films only one kannada movie getting remake in Bollywood. There are 25 South Indian remake projects which are getting remade in Bollywood.
    Monday, January 31, 2022, 15:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X