»   » ಒಂದೇ ದಿನದಲ್ಲಿ ಲಕ್ಷಾಂತರ ಲೈಕ್ಸ್ ಗಿಟ್ಟಿಸಿರುವ ಈ ಫೋಟೋ ಒಳಗೇನೈತಿ.?

ಒಂದೇ ದಿನದಲ್ಲಿ ಲಕ್ಷಾಂತರ ಲೈಕ್ಸ್ ಗಿಟ್ಟಿಸಿರುವ ಈ ಫೋಟೋ ಒಳಗೇನೈತಿ.?

Posted By:
Subscribe to Filmibeat Kannada

ಒಂದು ದಿನದಲ್ಲಿ ಒಂದು ಫೋಟೋಗೆ ಅಂದಾಜು ಎಷ್ಟು ಲೈಕ್ಸ್ ಬರಬಹುದು.? ಸಾವಿರ... ಹತ್ತು ಸಾವಿರ... ಐವತ್ತು ಸಾವಿರ...? ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್ ಜಾಸ್ತಿ ಇದ್ರೆ, ಲೈಕ್ ಮಾಡುವವರ ಸಂಖ್ಯೆ ಕೂಡ ಸಹಜವಾಗಿ ಜಾಸ್ತಿನೇ ಇರುತ್ತೆ ಬಿಡಿ.

ಸೋಷಿಯಲ್ ಮೀಡಿಯಾ, ಫಾಲೋವರ್ಸ್, ಲೈಕ್ಸ್ ಬಗ್ಗೆ ನಾವೀಗ ಮಾತನಾಡಲು ಕಾರಣ ಅಮಿತಾಬ್ ಬಚ್ಚನ್ ಬಹುರಾಣಿ ಐಶ್ವರ್ಯ ರೈ ಬಚ್ಚನ್ ಕುರಿತು.

In pic: Aishwarya Rai Bachchan Goes On A Swing Ride With Aaradhya

ಅರೇ.. ಐಶ್ವರ್ಯ ರೈ ಬಚ್ಚನ್... ಫೇಸ್ ಬುಕ್ ನಲ್ಲಾಗಲಿ... ಟ್ವಿಟ್ಟರ್ ನಲ್ಲಾಗಲಿ... ಇನ್ಸ್ಟಾಗ್ರಾಮ್ ನಲ್ಲಾಗಲಿ ಇಲ್ವೇ ಇಲ್ಲ.! ಇನ್ನು ಫಾಲೋವರ್ಸ್ ಹಾಗೂ ಲೈಕ್ಸ್ ಎಲ್ಲಿಂದ ಬಂತು ಎಂದು ಬಾಯಿ ಮೇಲೆ ಬೆರಳಿಟ್ಟುಕೊಂಡ್ರಾ.? ವಿಶೇಷ ಇರೋದೇ ಇಲ್ಲಿ.!

ನಟಿ ಐಶ್ವರ್ಯ ರೈ ಬಚ್ಚನ್ ಹಾಗೂ ಪುತ್ರಿ ಆರಾಧ್ಯ ಉಯ್ಯಾಲೆ ಆಡುತ್ತಿರುವ ಒಂದು ಫೋಟೋ ಇನ್ಸ್ಟಾಗ್ರಾಮ್ ನಲ್ಲಿ ಯದ್ವಾತದ್ವಾ ಫೇಮಸ್ ಆಗಿಬಿಟ್ಟಿದೆ. ಕೇವಲ ಹದಿನೇಳು ಗಂಟೆ ಅವಧಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಈ ಫೋಟೋನ ಲೈಕ್ ಮಾಡಿದ್ದಾರೆ.

ಸಚಿನ್ ರನ್ನ ಐಶ್ವರ್ಯ ಅಪ್ಪಿಕೊಂಡಿದ್ದಕ್ಕೆ ಮುಖ ಗಂಟಿಕ್ಕಿದ್ರಾ ಅಭಿಶೇಕ್.?

ಅಷ್ಟಕ್ಕೂ, ಐಶ್ವರ್ಯ ಹಾಗೂ ಆರಾಧ್ಯ ಉಯ್ಯಾಲೆ ಆಡುತ್ತಿರುವ ಫೋಟೋನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವುದು ಪತಿ ಅಭಿಶೇಕ್ ಬಚ್ಚನ್. ಫೋಟೋ ಜೊತೆಗೆ 'ಹ್ಯಾಪಿನೆಸ್' ಎಂದು ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ ಅಭಿಶೇಕ್.

ಹಾಗ್ನೋಡಿದ್ರೆ, ಈ ಫೋಟೋದಲ್ಲಿ ಐಶ್ವರ್ಯ ಹಾಗೂ ಆರಾಧ್ಯ ಮುಖ ಕಾಣಲ್ಲ. ಹಿಂಬದಿಯಿಂದ ಕ್ಲಿಕ್ ಮಾಡಿರುವ ಈ ಫೋಟೋದಲ್ಲಿ ಮುದ್ದು ಮಗಳೊಂದಿಗೆ ಐಶ್ವರ್ಯ ಮಗುವಾಗಿ ಉಯ್ಯಾಲೆ ಆಡುತ್ತಿರುವುದು ಸೆರೆ ಆಗಿದೆ. ಲಕ್ಷಾಂತರ ಮಂದಿಗೆ ಈ ಫೋಟೋ ಇಷ್ಟವಾಗಿದೆ.

ಐಶ್ವರ್ಯ ರೈ ಬರ್ತಿಲ್ಲ, ಇವರು ಬಿಡ್ತಿಲ್ಲ.!

ಐಶ್ವರ್ಯ ರೈ ಬಚ್ಚನ್ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲವಾದರೂ, ಅವರ ಪಾಪ್ಯುಲಾರಿಟಿ ಮಾತ್ರ ಕಮ್ಮಿ ಅಗಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ.

English summary
Aishwarya Rai Bachchan Goes On A Swing Ride With Aaradhya. Take a look at the picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada