»   » ಪ್ರಿಯಾಂಕಾ ಚೋಪ್ರಾಗೆ ಆಕಸ್ಮಿಕವಾಗಿ ನರೇಂದ್ರ ಮೋದಿ ಸಿಕ್ಕಾಗಾ.!

ಪ್ರಿಯಾಂಕಾ ಚೋಪ್ರಾಗೆ ಆಕಸ್ಮಿಕವಾಗಿ ನರೇಂದ್ರ ಮೋದಿ ಸಿಕ್ಕಾಗಾ.!

Posted By:
Subscribe to Filmibeat Kannada

ನಟಿ ಪ್ರಿಯಾಂಕಾ ಚೋಪ್ರಾಗೆ ಆಕಸ್ಮಿಕವಾಗಿ ಇವತ್ತು (ಮೇ 30) ಪ್ರಧಾನಿ ನರೇಂದ್ರ ಮೋದಿ ಸಿಕ್ಕಿಬಿಟ್ಟರಂತೆ. ಈ ವಿಷಯವನ್ನು ಸ್ವತಃ ಪ್ರಿಯಾಂಕಾ ಚೋಪ್ರಾ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚಿಗಷ್ಟೆ ಪ್ರಿಯಾಂಕಾ ಅಭಿನಯದ ಹಾಲಿವುಡ್ ಸಿನಿಮಾ 'ಬೇವಾಚ್' ರಿಲೀಸ್ ಆಗಿತ್ತು. ಸದ್ಯ ಈ ಚಿತ್ರದ ಬಿಡುಗಡೆಯ ನಂತರದ ಕಾರ್ಯಕ್ರಮಗಳಿಗಾಗಿ ಪ್ರಿಯಾಂಕಾ ಚೋಪ್ರಾ ಜರ್ಮನಿಯಲ್ಲಿ ಇದ್ದರು. ಪ್ರಧಾನಿ ಮೋದಿ ಅವರು ಸಹ ಆರು ದಿನದ ನಾಲ್ಕು ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ.

In pic: Priyanka Chopra Meets Narendra modi

ಸ್ಪೇನ್, ರಷ್ಯಾ ಮತ್ತು ಫ್ರಾನ್ಸ್ ದೇಶಗಳ ಪ್ರವಾಸದಲ್ಲಿರುವ ಮೋದಿ ಬರ್ಲಿನ್ (ಜರ್ಮನಿ) ನಲ್ಲಿ ಪ್ರಿಯಾಂಕಾ ಚೋಪ್ರಾಗೆ ಆಕಸ್ಮಿಕವಾಗಿ ಸಿಕ್ಕಿದ್ದಾರೆ. ಬಳಿಕ ಪ್ರಿಯಾಂಕಾ ಜೊತೆಗೆ ಮೋದಿ ಕೆಲಕಾಲ ಮಾತುಕತೆ ನಡೆಸಿದ್ದಾರೆ.

In pic: Priyanka Chopra Meets Narendra modi

''ಸುಂದರ ಕಾಕತಾಳೀಯ ಎಂಬಂತೆ ಇಂದು ಬೆಳ್ಳಗೆ (ಮಂಗಳವಾರ) ಪ್ರಧಾನಿ ಮೋದಿ ಸಿಕ್ಕರು. ನನ್ನ ಭೇಟಿಗಾಗಿ ಅವರ ವೇಳಾಪಟ್ಟಿಯಿಂದ ಸಮಯ ತೆಗೆದುಕೊಂಡಿದ್ದಕ್ಕೆ ಧನ್ಯವಾದಗಳು ಮೋದಿ ಸರ್'' ಅಂತ ಹೇಳಿ ಮೋದಿ ಅವರ ಜೊತೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಾಕಿ ತಮ್ಮ ಸಂತಸವನ್ನು ಪ್ರಿಯಾಂಕಾ ಚೋಪ್ರಾ ಹಂಚಿಕೊಂಡಿದ್ದಾರೆ.

English summary
Bollywood Actress Priyanka Chopra Meets Prime Minister Narendra Modi today (May 30th) in Berlin, Germany

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada