»   » ಚಿತ್ರಗಳಲ್ಲಿ ಆಮೀರ್ ಖಾನ್ 50ನೇ ಹುಟ್ಟುಹಬ್ಬ

ಚಿತ್ರಗಳಲ್ಲಿ ಆಮೀರ್ ಖಾನ್ 50ನೇ ಹುಟ್ಟುಹಬ್ಬ

Posted By:
Subscribe to Filmibeat Kannada

ಬಾಲಿವುಡ್ ಬಾನಂಗಳದ ಕಲಾ ನಿಪುಣ, ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಗೆ ಈ ದಿನ ಜನುಮದಿನ. 50 ನೇ ವಸಂತಕ್ಕೆ ಕಾಲಿಟ್ಟಿರುವ ಆಮೀರ್ ಖಾನ್, ಇಂದು ತಮ್ಮ ಹುಟ್ಟುಹಬ್ಬವನ್ನ ಅಭಿಮಾನಿಗಳೊಂದಿಗೆ ಮತ್ತು ಆತ್ಮೀಯ ಮಾಧ್ಯಮ ಮಿತ್ರರೊಂದಿಗೆ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ.

ನಿಜ ಜೀವನದಲ್ಲಿ ಹಾಫ್ ಸೆಂಚುರಿ ಬಾರಿಸಿರುವ ಆಮೀರ್ ಖಾನ್, ನಿನ್ನೆ ಮಧ್ಯರಾತ್ರಿ ತಮ್ಮ ಮನೆಯಲ್ಲಿ ಕೇಕ್ ಕತ್ತರಿಸಿ ಬರ್ತಡೇ ಸೆಲೆಬ್ರೇಟ್ ಮಾಡಿದರು. ಆಮೀರ್ ಹುಟ್ಟುಹಬ್ಬ ಸಂಭ್ರಮದ ಚಿತ್ರಗಳು ಇಲ್ಲಿದೆ. ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ಜ್ಯಾಕಿ ಶ್ರಾಫ್ ಕಡೆಯಿಂದ ಹಾರ್ದಿಕ ಶುಭಾಶಯ

ಬಾಲಿವುಡ್ ಗೆ ಕಾಲಿಟ್ಟಾಗಿನಿಂದಲೂ ಆಮೀರ್ ಖಾನ್ ಗೆ ಜ್ಯಾಕಿ ಶ್ರಾಫ್ ಆತ್ಯಾಪ್ತ. ಕ್ಲೋಸ್ ಫ್ರೆಂಡ್ ಆಗಿರುವುದರಿಂದ ಆಮೀರ್ ಗೆ ಜ್ಯಾಕಿ ವಿಶ್ ಮಾಡ್ಲಿಲ್ಲ ಅಂದ್ರೆ ಹೇಗೆ. ಅದಕ್ಕೆ ಕರೆಕ್ಟಾಗಿ ಮಧ್ಯರಾತ್ರಿ 12 ಗಂಟೆಗೆ ಹಾಜರಾದ ಜ್ಯಾಕಿ ಶ್ರಾಫ್, ಆಮೀರ್ ಗೆ 'ಹ್ಯಾಪಿ ಬರ್ತಡೆ' ಅಂತ ಹಾಡು ಹಾಡಿ ವಿಶ್ ಮಾಡಿದ್ರು.

''ಎಲ್ಲರಿಗೂ ನನ್ನ ಧನ್ಯವಾದ'

50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಆಮೀರ್ ಖಾನ್ ಇದೇ ಸಡಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ''ಬೆರಳೆಣಿಕೆಯ ಮಂದಿಗೆ ಮಾತ್ರ ಇಂತಹ ಅವಕಾಶ ಸಿಗುತ್ತದೆ. ನಾನು ಯಾವಾಗಲೂ ಹೃದಯದಾಳದಿಂದ ಕೆಲಸ ಮಾಡುತ್ತೇನೆ. ಇಂತಹ ಶುಭ ಸಂದರ್ಭದಲ್ಲಿ ನನ್ನ ಎಲ್ಲಾ ನಿರ್ದೇಶಕರಿಗೂ ಧನ್ಯವಾದ ಅರ್ಪಿಸಬೇಕು. ಅವರಿಂದಲೇ ನಾನು ಇಂದು ಈ ಸ್ಥಾನ ತಲುಪಿದ್ದೇನೆ'' ಅಂದಿದ್ದಾರೆ.

''ನಾನಿನ್ನೂ ಜಸ್ಟ್ 20''

ಇನ್ನೂ ಹರೆಯದ ಹುಡುಗನಂತೆ ಕಾಣುವ ಆಮೀರ್ ಖಾನ್ ಗೆ ವಯಸ್ಸು 50 ಅಂದ್ರೆ ನಂಬೋದು ಕಷ್ಟ. ಅದನ್ನ ಖುದ್ದು ಆಮೀರ್ ಕೂಡ ಒಪ್ಪಿಕೊಳ್ಳೋದಿಲ್ಲ. '' ಶಾರುಖ್, ಸಲ್ಮಾನ್ ಮತ್ತು ನಾನು. ಮೂವರು ಈ ವರ್ಷ 50 ರ ಗಡಿಯಲ್ಲಿದ್ದೇವೆ. ಆದ್ರೆ, ನಾವೆಲ್ಲಾ ಇನ್ನೂ 18-20 ವಯಸ್ಸಿನ ಹುಡುಗರಿದ್ದ ಹಾಗೆ.'' ಅಂತ ಚಟಾಕಿ ಕೂಡ ಹಾರಿಸಿದರು ಆಮೀರ್. [ಬಾಲಿವುಡ್ ಬೆಚ್ಚಿಬೀಳಿಸಿದ ಅಮೀರ್ ಖಾನ್ ಹೇಳಿಕೆ]

ಯಶಸ್ಸಿನ ಹಿಂದಿನ ಕಾರಣ ಏನು?

ಶ್ರದ್ಧೆ ಮತ್ತು ಅದೃಷ್ಟದಿಂದ ಯಶಸ್ಸು ಸಿಕ್ಕಿದೆ ಅಂತ ಹೇಳುವ ಆಮೀರ್, ''ಜೀವನದಲ್ಲಿ ತಪ್ಪುಗಳಿಂದ ತುಂಬಾ ಕಲಿತಿದ್ದೇನೆ. ಸೋಲಿನಿಂದ ಏನು ಮಾಡಬಾರದು ಮತ್ತು ಏನು ಮಾಡಬೇಕು ಅನ್ನುವ ಪಾಠವನ್ನ ನಾನು ಕಲಿತ್ತಿದ್ದೇನೆ'' ಅಂತ ಆಮೀರ್ ಖಾನ್ ಹೇಳಿದ್ದಾರೆ. [ಬಾಕ್ಸ್ ಆಫೀಸಲ್ಲಿ ಕೇಕೆ ಹಾಕಿದ ಅಮೀರ್ ಖಾನ್ 'ಪಿಕೆ']

ಪ್ರತಿದಿನವೂ ಸ್ಪೆಷಲ್!

''ಬರ್ತಡೆ ದಿನ ಮಾತ್ರ ಅಲ್ಲ. ಪ್ರತಿ ದಿನವೂ ನನಗೆ ಸ್ಪೆಷಲ್.'' ಅಂತ ಮಾಧ್ಯಮ ಮಿತ್ರರೊಂದಿಗೆ ಬರ್ತಡೆ ಸೆಲೆಬ್ರೇಟ್ ಮಾಡಿಕೊಂಡ ನಂತ್ರ ಆಮೀರ್ ಹೇಳಿದರು.

ಆಮೀರ್ ಖಾನ್ ಮುಂದಿನ ಚಿತ್ರ

'ಪಿಕೆ' ಬಳಿಕ ಆಮೀರ್ ಖಾನ್ 'Dangal' ಅನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಕ್ಸರ್ ಪಾತ್ರ ನಿಭಾಯಿಸುತ್ತಿರುವ ಆಮೀರ್, ಅದಕ್ಕಾಗಿ ಸಿಕ್ಕಾಪಟ್ಟೆ ವರ್ಕೌಟ್ ಕೂಡ ಮಾಡುತ್ತಿದ್ದಾರೆ. ರಿಯಲ್ ಲೈಫ್ ನಲ್ಲಿ ಹಾಫ್ ಸೆಂಚುರಿ ಬಾರಿಸಿರುವ ಆಮೀರ್ ಖಾನ್ ಗೆ ನಮ್ಮ ಕಡೆಯಿಂದಲೂ ಹಾರ್ದಿಕ ಶುಭಾಶಯಗಳು.

English summary
Bollywood Actor Aamir Khan turns 50 today (March 14th). Mr.Perfectionist celebrated his birthday with the Media. Check out the celebration pictures here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada