»   » ಪ್ರಿಯಾಂಕಾ ಚೋಪ್ರಾ ಚೆಲುವಿನ ಚಿಲಿಪಿಲಿ ಅನಾವರಣ

ಪ್ರಿಯಾಂಕಾ ಚೋಪ್ರಾ ಚೆಲುವಿನ ಚಿಲಿಪಿಲಿ ಅನಾವರಣ

Posted By:
Subscribe to Filmibeat Kannada

ಮಾಡೆಲಿಂಗ್ ಲೋಕದಲ್ಲಿ ಅದೃಷ್ಟ ಪರೀಕ್ಷೆಗೆ ಅಂತ ಬಂದ ಕೃಷ್ಣ ಸುಂದರಿ, ಪ್ರಿಯಾಂಕಾ ಚೋಪ್ರಾ ಲ್ಯಾಂಡ್ ಆಗಿದ್ದು ಮಾತ್ರ ಬಾಲಿವುಡ್ ಅನ್ನುವ ಬಿಂದಾಸ್ ಫೀಲ್ಡ್ ನಲ್ಲಿ.

'ವಿಶ್ವಸುಂದರಿ' ಕಿರೀಟ ತೊಟ್ಟು ಸುಂದರಿಯರಿಗೆ ರಾಣಿಯಾಗಿ ಮೆರೆದ ಈ 'ಬದ್ಮಾಶ್ ಬಬ್ಲಿ' ಕಳೆದ ಒಂದು ದಶಕದಿಂದ ಬಾಲಿವುಡ್ ನಲ್ಲಿ ಬಿಜಿಯೋ ಬಿಜಿ.

ಬ್ಯೂಟಿ ವಿಥ್ ಟ್ಯಾಲೆಂಟೆಡ್ ಆಗಿರುವ ಪ್ರಿಯಾಂಕಾಗೆ ಯಶಸ್ಸು ಅನ್ನೋದು ತೀರಾ ಸಲೀಸು. ಹನ್ನೆರಡು ವರ್ಷಗಳಲ್ಲಿ 'ಅಂದಾಝ್', 'ಕ್ರಿಷ್', 'ಡಾನ್', 'ದೋಸ್ತಾನಾ', 'ಕಮೀನೇ', 'ಅಗ್ನೀಪತ್', 'ಗುನ್ ಡೇ' ಮತ್ತು ಇತ್ತೀಚೆಗೆ ತೆರೆಕಂಡ 'ಮೇರಿ ಕೋಮ್' ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನ ನೀಡಿರುವ ಸುಂದರಿ ಈಕೆ.

ಬಿಟೌನ್ ನಲ್ಲಿ ಪುರುಸೊತ್ತಿಲ್ಲದಷ್ಟು ಬಿಜಿಯಿದ್ದರೂ, ಹಳೆ ವೃತ್ತಿ 'ಮಾಡೆಲಿಂಗ್'ನ ಮಾತ್ರ ಪಿಗ್ಗಿ ಬಿಟ್ಟಿಲ್ಲ. 'ವಿಶ್ವದ ಅತ್ಯಂತ ಸೆಕ್ಸಿ ಮಹಿಳೆ' ಅಂತ ಆಗಾಗ ಬಿರುದಾಂಕಿತಗೊಳ್ಳುವ ಪ್ರಿಯಾಂಕಾ 'ಕಾಸ್ಮೊಪಾಲಿಟನ್' ಮ್ಯಾಗಝೀನ್ ಗಾಗಿ ಇತ್ತೀಚೆಗೆ ಗರಮಾಗರಂ ಫೋಟೋಶೂಟ್ ಮಾಡಿಸಿದ್ದಾಳೆ.

ಪಡ್ಡೆಗಳ ಕಣ್ಣುಕುಕ್ಕುವ ಪ್ರಿಯಾಂಕಾಳ ಹೊಚ್ಚ ಹೊಸ ಅವತಾರ ಇಲ್ಲಿದೆ ನೋಡಿ....ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ಕಾಸ್ಮೊಪಾಲಿಟನ್ ಮಾಗಝೀನ್ ಗಾಗಿ ಫೋಟೋಶೂಟ್

ಪ್ರಖ್ಯಾತ ಮ್ಯಾಗಝೀನ್ ಕಾಸ್ಮೋಪಾಲಿಟನ್ ಗಾಗಿ ಪ್ರಿಯಾಂಕಾ ತಾಳಿರುವ ಅವತಾರ ಇದು. ಕಪ್ಪು-ಬಿಳುಪಿನ ತುಂಡುಡುಗೆ ತೊಟ್ಟು ಪಿಗ್ಗಿ ನೀಡಿರುವ ಹಾಟ್ ಪೋಸ್ ಗಳು ಈ ತಿಂಗಳ ಆವೃತ್ತಿಯಲ್ಲಿ ಪ್ರಕಟಗೊಂಡಿದೆ.

ಪಿಗ್ಗಿಗೆ ಯಾರಿಲ್ಲ ಸರಿಸಾಟಿ..!

ಒಂದು ದಶಕದ ಹಿಂದೆ ಬಾಲಿವುಡ್ ಗೆ ಕಾಲಿಟ್ಟಾಗ ಪ್ರಿಯಾಂಕಾ ಹೇಗಿದ್ದರೋ, ಈಗಲೂ ಹಾಗೇ ಇದ್ದಾರೆ. ಅಂದಿನಿಂದ ಇಂದಿನವರೆಗೂ ಆಕೆ 'ಸೈಝ್ ಝೀರೋ'. ಫಿಟ್ನೆಸ್ ಬಗ್ಗೆ ಹೆಚ್ಚು ಜಾಗೃತಿ ವಹಿಸುವ ಪಿಗ್ಗಿಗೆ ಈಗ ವಯಸ್ಸು 32..! ಈ ಫೋಟೋಗಳನ್ನ ನೋಡಿದ್ಮೇಲೆ, ಪಿಗ್ಗಿಗೆ 32 ಅಂದ್ರೆ ನಂಬೋದು ಕಷ್ಟ, ಆದ್ರೂ ಇದೇ ಸತ್ಯ. [ನಟಿ ಪ್ರಿಯಾಂಕಾ ಚೋಪ್ರಾ ಮದುವೆಗೂ ಮುನ್ನ ತಾಯಿ!]

'ಡ್ಯಾಡಿ's ಲಿಟಿಲ್ ಗರ್ಲ್'

ಇಂಡಿಯನ್ ಆರ್ಮಿಯಲ್ಲಿದ್ದ ಅಶೋಕ್ ಮತ್ತು ಮಧು ಚೋಪ್ರಾ ದಂಪತಿಗೆ ಜನಿಸಿದ ಪುತ್ರಿ ಪ್ರಿಯಾಂಕಾ. ಕುಟುಂಬವನ್ನ ಎಂದೂ ಬಿಟ್ಟಿರದ ಪಿಗ್ಗಿ, ಅಪ್ಪನ ಮುದ್ದಿನ ಮಗಳು. ಅಪ್ಪನ ಮೇಲಿನ ಪ್ರೀತಿಗಾಗಿ ಎರಡು ವರ್ಷಗಳ ಹಿಂದೆಯಷ್ಟೇ 'ಡ್ಯಾಡಿ's ಲಿಟಿಲ್ ಗರ್ಲ್' ಅಂತ ಬಲಗೈ ಮೇಲೆ ಪಿಗ್ಗಿ ಟ್ಯಾಟೂ ಹಾಕಿಸಿಕೊಂಡಿದ್ರು. ಆದ್ರೆ, ದುರಾದೃಷ್ಟವಶಾತ್, ಅದಾದ ಒಂದೇ ವರ್ಷದಲ್ಲಿ ಪಿಗ್ಗಿ ತಂದೆ ಕೊನೆಯುಸಿರೆಳೆದರು. ಪಿಗ್ಗಿ ಟ್ಯಾಟೂ ಈ ಫೋಟೋಶೂಟ್ ನ ಮತ್ತೊಂದು ಹೈಲೈಟ್. [ಶಿಲ್ಪಾ ಶೆಟ್ಟಿ ಕಣ್ಣೀರಿಡುವಂತೆ ಮಾಡಿದ ಪ್ರಿಯಾಂಕಾ]

ಪ್ರಿಯಾಂಕಾ ಮುಂದಿನ ಚಿತ್ರಗಳು

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಭಾಜಿರಾವ್ ಮಸ್ತಾನಿ' ಚಿತ್ರದ ಚಿತ್ರೀಕರಣದಲ್ಲಿ ಪ್ರಿಯಾಂಕಾ ತೊಡಗಿದ್ದಾರೆ. ಹಾಗೆ, ಝೋಯಾ ಅಖ್ತರ್ ನಿರ್ದೇಶನದಲ್ಲಿ ರಣ್ವೀರ್ ಸಿಂಗ್ ಜೊತೆ 'ದಿಲ್ ಧಡ್ಕನೇ ದೋ' ಚಿತ್ರದಲ್ಲೂ ಪ್ರಿಯಾಂಕಾ ಅಭಿನಯಿಸುತ್ತಿದ್ದಾರೆ. [ಆರು ಸಲ ಮದುವೆಯಾಗುತ್ತೇನೆ ಎಂದ ಪ್ರಿಯಾಂಕಾ]

ಕಿರುತೆರೆಯಲ್ಲೂ ಪಿಗ್ಗಿ ಕಮಾಲ್

'ಖತರೋಂಕೆ ಖಿಲಾಡಿ' ಸೀಸನ್ 3 ಯಲ್ಲಿ ನಿರೂಪಕಿಯಾಗಿ ಎಲ್ಲರ ಮನೆಮನ ಗೆದ್ದಿದ್ದ ಪ್ರಿಯಾಂಕಾ ಇದೀಗ ಅಮೇರಿಕಾದ ಎಬಿಸಿ ವಾಹಿನಿಗಾಗಿ 'ಕ್ವಾಂಟಿಕೋ' ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

English summary
Bollywood Actress Priyanka Chopra has appeared in the March month Cover of Cosmopolitan magazine. Here are some of her pics from the Photo Shoot magazine cover.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada