»   » ಚಿತ್ರಗಳು: 'Isn't It Romantic?' ನಲ್ಲಿ ಕಣ್ಮನ ಸೆಳೆದ ಪ್ರಿಯಾಂಕ ಅವತಾರಗಳು

ಚಿತ್ರಗಳು: 'Isn't It Romantic?' ನಲ್ಲಿ ಕಣ್ಮನ ಸೆಳೆದ ಪ್ರಿಯಾಂಕ ಅವತಾರಗಳು

Posted By:
Subscribe to Filmibeat Kannada

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಇತ್ತೀಚೆಗೆ ಬರ್ಡ್‌ಡೇ ಆಚರಿಸಿಕೊಂಡರು. ಮಾಲ್ಡೀವ್ಸ್ ನಲ್ಲಿ ತಮ್ಮ ತಾಯಿ ಮಧು ಚೋಪ್ರಾ, ಸಹೋದರ ಸಿದ್ಧಾರ್ಥ್ ಚೋಪ್ರಾರೊಂದಿಗೆ ಪ್ರವಾಸವನ್ನು ಎಂಜಾಯ್ ಮಾಡಿದರು. ಹಲವು ದಿನಗಳಿಂದ ಚಿತ್ರೀಕರಣಕ್ಕೆ ಬ್ರೇಕ್ ಪಡೆದಿದ್ದ ಪಿಗ್ಗಿ ಈಗ ಮತ್ತೆ ಅಮೆರಿಕಕ್ಕೆ ಹಾರಿದ್ದಾರೆ.

ಪ್ರಿಯಾಂಕ ಚೋಪ್ರಾ ಹಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಬರ್ಡ್‌ ಡೇ ಮುಗಿಸಿ ಹೋದ ನಂತರ ಪಿಗ್ಗಿ ಈಗ 'ಈಸ್ ನಾಟ್‌ ಇಟ್ ರೊಮ್ಯಾಂಟಿಕ್?' ಚಿತ್ರದಲ್ಲಿ ತೊಡಗಿಕೊಂಡಿದ್ದು, ಚಿತ್ರೀಕರಣದ ವೇಳೆ ಅವರು ಕಾಣಿಸಿಕೊಂಡ ಕೆಲವು ಅದ್ಭುತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ಪ್ರಿಯಾಂಕಾರ ಆ ಚಿತ್ರಗಳು ಈ ಕೆಳಗಿನಂತಿವೆ ನೋಡಿ..

ಈಸ್‌ ನಾಟ್ ಇಟ್ ರೊಮ್ಯಾಂಟಿಕ್?

ಪ್ರಿಯಾಂಕ ಈಗ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಸಿನಿಮಾ ಹೆಸರು 'ಈಸ್‌ ನಾಟ್ ಇಟ್ ರೊಮ್ಯಾಂಟಿಕ್?'. ಚಿತ್ರದ ಹೆಸರಿಗೆ ತಕ್ಕಂತೆ ಪಿಗ್ಗಿ, ಚಿತ್ರ ನಟ Liam Hemsworth ಜೊತೆ ಶೂಟಿಂಗ್ ವೇಳೆ ಕಾಣಿಸಿಕೊಂಡ ಕಣ್ಣು ಕುಕ್ಕುವಂತಹ ದೃಶ್ಯವಿದು.

Liam Hemsworth ಕ್ಯೂಟ್ ಎಕ್ಸ್‌ಪ್ರೆಶನ್

ಚಿತ್ರ ನಟ Liam Hemsworth ಜೊತೆ ಪ್ರಿಯಾಂಕ ಚೋಪ್ರಾ ರವರು ನಿಂತಿದ್ದು, ಆ ವೇಳೆ ನಟ ನೀಡಿರುವ ಕ್ಯೂಟ್ ಎಕ್ಸ್‌ಪ್ರೆಶನ್ ಯಾವುದೇ ಹುಡುಗಿಯು ಲವ್ ನಲ್ಲಿ ಬೀಳುವಂತೆ ಮಾಡುತ್ತದೆ ಅಲ್ವಾ..?. ಫೋಟೋ ನೋಡಿ

ಮನಮೋಹಕ ನೋಟ

ಪಿಗ್ಗಿ ನಟಿಸುತ್ತಿರುವ 'ಈಸ್ ನಾಟ್ ಇಟ್ ರೊಮ್ಯಾಂಟಿಕ್' ಚಿತ್ರವನ್ನು Todd Strauss-Schulson ಎಂಬುವರು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರ ಶೂಟಿಂಗ್ ವೇಳೆ ಕ್ಲಿಕ್ಕಿಸಿದ ಪ್ರಿಯಾಂಕರ ಈ ಮೇಲಿನ ಪೋಟೋ ನೋಡಲು ಮನಮೋಹಕವಾಗಿದ್ದು, ಅವರು ಏನೋ ಥಿಂಕ್ ಮಾಡುತ್ತಿರಬಹುದು ಎಂಬ ಪ್ರಶ್ನೆಯನ್ನು ಹುಟ್ಟಿಸುತ್ತದೆ..

ಬಾಸ್ ರೀತಿ ನಡಿಗೆಯಲ್ಲಿ ಪಿಗ್ಗಿ

ಪ್ರಿಯಾಂಕ ತಮ್ಮ ಈ ಹಿಂದಿನ ಹಾಲಿವುಡ್ ಚಿತ್ರ 'ಬೇವಾಚ್'ನಲ್ಲಿ ಖಳನಾಯಕಿ ಪಾತ್ರದಲ್ಲಿ ಬಾಸ್ ಆಗಿ ಮಿಂಚಿದ್ದರು. ಈ ಚಿತ್ರದಲ್ಲಿ ಅವರ ನಡಿಗೆಯ ಸ್ಟೈಲ್ ಸಹ ಬಾಸ್ ರೀತಿಯಲ್ಲೇ ಇದ್ದು, ಸಖತ್ ಹಾಟ್ ಆಗಿ ಕಾಣುತ್ತಿದ್ದಾರೆ.

ಕಣ್ಮನ ಸೆಳೆದ ಪ್ರಿಯಾಂಕ ಲುಕ್

ಪ್ರಿಯಾಂಕ ಚೋಪ್ರಾರ ಈ ಸ್ಟಿಲ್‌ ಅನ್ನು ಹೆಚ್ಚು ಕ್ಲೋಸಪ್‌ ಆಗಿಯೇ ಕ್ಲಿಕ್ಕಿಸಿದ್ದು, ಈ ಅದ್ಭುತ ನೋಟದಲ್ಲಿ ಪಿಗ್ಗಿ ಎಲ್ಲರ ಕಣ್ಮನ ಸೆಳೆದಿದ್ದಾರೆ. ಚಿತ್ರದಲ್ಲಿ ಪಿಗ್ಗಿ ಯೋಗ ರಾಯಭಾರಿಯಾಗಿ ಇಸಾಬೆಲ್ಲಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

English summary
In Pics: Priyanka Chopra Shooting With Liam Hemsworth Will Make You Say 'Feelin' HOT'!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada