For Quick Alerts
  ALLOW NOTIFICATIONS  
  For Daily Alerts

  ಅಮೆರಿಕ ನಿವಾಸದ ಮುಂದೆ ಅಮಿತಾಬ್ ಬಚ್ಚನ್ ಪ್ರತಿಮೆ ಸ್ಥಾಪಿಸಿದ ಅಭಿಮಾನಿ!

  |

  ನೆಚ್ಚಿನ ನಟರ ಪುತ್ಥಳಿಗಳನ್ನು ಸ್ಥಾಪಿಸುವ ಸಂಪ್ರದಾಯ ಭಾರತದಲ್ಲಿ ಹೆಚ್ಚು. ಈ ರೀತಿಯ ಅಭಿಮಾನ ವಿಶ್ವದ ಬೇರೆಡೆ ಕಾಣ ಸಿಗುವುದು ಅಪರೂಪ. ಆದರೆ ವಿಶ್ವದೆಲ್ಲೆಡೆ ಇರುವ ಭಾರತೀಯರು ಇದ್ದಕಡೆಗಳಲ್ಲಿಯೇ ತಮ್ಮ ಅಭಿಮಾನ ಮಾಡುವುದು ಮರೆತಿಲ್ಲ.

  ಅಂತೆಯೇ ಇದೀಗ ಅಮೆರಿಕದಲ್ಲಿ ನೆಲೆಸಿರುವ ಅಮಿತಾಬ್ ಬಚ್ಚನ್ ಅಭಿಮಾನಿಯೊಬ್ಬರು ತಮ್ಮ ಮನೆಯ ಮುಂದೆ ದೊಡ್ಡ ಅಮಿತಾಬ್ ಬಚ್ಚನ್ ಪುತ್ಥಳಿ ಸ್ಥಾಪಿಸಿದ್ದಾರೆ. ಅದ್ಧೂರಿ ಕಾರ್ಯಕ್ರಮ ಆಯೋಜಿಸಿ ಪುತ್ಥಳಿ ಅನಾವರಣ ಸಹ ಮಾಡಿದ್ದಾರೆ.

  ಅಮೆರಿಕದ ಎಡಿಸನ್ ನ್ಯೂ ಜೆರ್ಸಿನಲ್ಲಿನ ಅವರ ಮನೆಯ ಮುಂದೆ ದೊಡ್ಡ ಗಾತ್ರದ ಅಮಿತಾಬ್ ಬಚ್ಚನ್ ಪುತ್ಥಳಿಯನ್ನು ಪ್ರತಿಷ್ಠಾಪಿಸಿದ್ದಾರೆ. ಪಾರದರ್ಶಕ ಗಾಜಿನ ಪೆಟ್ಟಿಗೆಯಲ್ಲಿ ಅಮಿತಾಬ್ ಬಚ್ಚನ್‌ರ ಪ್ರತಿಮೆಯನ್ನು ಇರಿಸಲಾಗಿದೆ. ಹಲವು ಬಚ್ಚನ್ ಅಭಿಮಾನಿಗಳನ್ನು ಕರೆಸಿ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಸಹ ಮಾಡಲಾಗಿದೆ. ಬಚ್ಚನ್ ಅಭಿಮಾನಿಗಳಿಂದ ಅವರ ಹಾಡುಗಳಿಗೆ ನೃತ್ಯ ಕಾರ್ಯಮವೂ ನಡೆದಿದೆ.

  ಗೋಪಿ ಸೇಠ್ ಎಂಬುವರು ಹೀಗೆ ಅಮಿತಾಬ್ ಬಚ್ಚನ್ ಪ್ರತಿಮೆಯನ್ನು ಮನೆಯ ಮುಂದಿ ಪ್ರತಿಷ್ಠಾಪಿಸಿದ್ದು, ಮಾಧ್ಯಮದೊಟ್ಟಿಗೆ ಮಾತನಾಡಿರುವ ಅವರು, ''ನನಗೆ ಹಾಗೂ ನನ್ನ ಪತ್ನಿಗೆ ಅಮಿತಾಬ್ ಬಚ್ಚನ್ ದೇವರ ಸಮಾನ. ಅವರು ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ನಿಜ ಜೀವನದಲ್ಲಿಯೂ ಹೀರೋ. ಸಮಾಜದಲ್ಲಿ ಅವರು ತಮ್ಮನ್ನು ತಾವು ಸ್ಥಿತಗೊಳಿಸಿಕೊಂಡಿರುವ ರೀತಿಯೂ ನಮಗೆ ಬಹಳ ಇಷ್ಟ. ಅವರು ಬಹಳ ವಿನಯವಂತರು. ಅವರ ರೀತಿಯ ಸ್ಟಾರ್‌ಗಳು ಬಾಲಿವುಡ್‌ನಲ್ಲಿಲ್ಲ. ಹಾಗಾಗಿ ಅವರ ಪುತ್ಥಳಿಯನ್ನು ಮನೆಯ ಮುಂದೆ ಇರಿಸಿದ್ದೇನೆ'' ಎಂದಿದ್ದಾರೆ.

  ಗೋಪಿ 1990 ರಲ್ಲಿ ಭಾರತದಿಂದ ಅಮೆರಿಕಕ್ಕೆ ಹೋದವರು ಅಲ್ಲಿಯೇ ನೆಲೆಸಿದ್ದಾರೆ. ಬಿಗ್‌ಬಿ ಫ್ಯಾಮಿಲಿ ಹೆಸರಿನಲ್ಲಿ ಅಂತರ್ಜಾಲ ತಾಣವನ್ನೂ ನಡೆಸುತ್ತಿರುವ ಗೋಪಿ ಬಚ್ಚನ್ ಹೆಸರಿನ ಇನ್ನೂ ಕೆಲವು ಸಂಘಗಳನ್ನು ಸಹ ನಡೆಸುತ್ತಿದ್ದಾರೆ. ಬಚ್ಚನ್ ಅವರಿಗೆ ವಿಷಯ ಮುಟ್ಟಿಸಿಯೇ ಅವರ ಪ್ರತಿಮೆಯನ್ನು ಮನೆಯ ಮುಂದೆ ಇಟ್ಟಿದ್ದಾರಂತೆ ಗೋಪಿ. ''ನಾನು ಈ ಗೌರವಕ್ಕೆ ಯೋಗ್ಯನಲ್ಲ, ಹಾಗೆಂದು ನಿಮ್ಮ ಖುಷಿಯನ್ನು ತಡೆಯುವ ಅಧಿಕಾರವೂ ನನಗೆ ಇಲ್ಲ'' ಎಂದು ಬಚ್ಚನ್ ಗೋಪಿಯವರಿಗೆ ಹೇಳಿದ್ದಾರಂತೆ.

  ಬಚ್ಚನ್ ಅವರ ಕೌನ್ ಬನೇಗಾ ಕರೋಡ್‌ಪತಿ ಲುಕ್‌ನಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗಿದ್ದು ಈ ಪ್ರತಿಮೆ ನಿರ್ಮಾಣಕ್ಕೆ 60 ಲಕ್ಷ ರುಪಾಯಿ ಹಣ ಖರ್ಚಾಗಿದೆಯಂತೆ.

  English summary
  Indian-American family install Amitabh Bachchan statue n front of their house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X