For Quick Alerts
  ALLOW NOTIFICATIONS  
  For Daily Alerts

  ಹಿರಿಯ ನಟ ರಿಷಿ ಕಪೂರ್ ನಿಧನಕ್ಕೆ ಕಂಬನಿ ಮಿಡಿದ ಚಿತ್ರರಂಗದ ಗಣ್ಯರು

  |

  ಬಹುಮುಖ ಪ್ರತಿಭೆ ಇರ್ಫಾನ್ ಖಾನ್ ಕಳೆದುಕೊಂಡ ದುಃಖ ಮಾಸುವುದರೊಳಗೆ, ಭಾರತೀಯ ಚಿತ್ರರಂಗದ ಮತ್ತೋರ್ವ ಮೇರು ನಟ ರಿಷಿ ಕಪೂರ್ ಇಹಲೋಕ ತ್ಯಜಿಸಿದ್ದಾರೆ. ಹಿರಿಯ ನಟನ ಅಗಲಿಕೆಯಿಂದ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ.

  ಸಾವಿಗೂ ಮುನ್ನ ರಿಷಿ ಕಪೂರ್ ಆಸ್ಪತ್ರೆಯಲ್ಲಿ ಕೇಳಿದ ಹಾಡು ಇದೇ | Rishi Kapoor | Filmibeat Kannada

  ದೀರ್ಘ ಕಾಲದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ 67 ವರ್ಷದ ರಿಷಿ ಕಪೂರ್ ಇಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 2018ರಿಂದ ಯು.ಎಸ್.ಎಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಷಿ ಕಪೂರ್ ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಭಾರತಕ್ಕೆ ವಾಪಸ್ ಆಗಿದ್ದು. ಮೇರು ನಟನನ್ನು ಕಳೆದು ಕೊಂಡ ದುಃಖದಲ್ಲಿರುವ ಭಾರತೀಯ ಚಿತ್ರರಂಗದ ಗಣ್ಯರು ಅಗಲಿದ ನಟನಿಗೆ ಸಂತಾಪ ಸೂಚಿಸಿದ್ದಾರೆ.

  ನಟ ಸುದೀಪ್

  ನಟ ಸುದೀಪ್

  "ತುಂಬ ದುಃಖದ ಸುದ್ದಿ. ಎರಡು ದಿನ ಇಬ್ಬರು ಅದ್ಭುತ ಕಲಾವಿದರನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಸಿಗಲಿ". ಎಂದು ಇರ್ಫಾನ್ ಖಾನ್ ಮತ್ತು ರಿಷಿ ಕಪೂರ್ ನಿಧನಕ್ಕೆ ನಟ ಸುದೀಪ್ ಸಂತಾಪ ಸೂಚಿಸಿದ್ದಾರೆ.

  ಬಾಲಿವುಡ್‌ನ ಖ್ಯಾತ ನಟ ರಿಷಿ ಕಪೂರ್ ಇನ್ನಿಲ್ಲಬಾಲಿವುಡ್‌ನ ಖ್ಯಾತ ನಟ ರಿಷಿ ಕಪೂರ್ ಇನ್ನಿಲ್ಲ

  ನಟ ಅಕ್ಷಯ್ ಕುಮಾರ್

  ನಟ ಅಕ್ಷಯ್ ಕುಮಾರ್

  "ನಟ ಅಕ್ಷಯ್ ಕುಮಾರ್ ಸಹ ಮೇರು ನಟನ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. "ನಾವು ದುಸ್ವಪ್ನ ಕಾಣುತ್ತೀದ್ದೇವೆ ಎಂದು ತೋರುತ್ತಿದೆ. ರಿಷಿ ಕಪೂರ್ ಜಿ ನಿಧನ ಹೊಂದಿದ್ದಾರೆ ಎನ್ನುವ ಸುದ್ದಿ ಆಘಾತ ನೀಡಿದೆ. ಅವರು ಲೆಜೆಂಡ್. ಅತ್ಯುತ್ತಮ ಸಹ ನಟ ಮತ್ತು ಉತ್ತಮ ಸ್ನೇಹಿತರಾಗಿದ್ದರು. ಅವರ ಕುಟುಂಬಕ್ಕೆ ನನ್ನ ಪ್ರಾರ್ಥನೆ" ಎಂದು ಹೇಳಿದ್ದಾರೆ.

  ನಟ ಆಮೀರ್ ಖಾನ್

  ನಟ ಆಮೀರ್ ಖಾನ್

  "ನಾವು ಒಬ್ಬ ಶ್ರೇಷ್ಠ ನಟನನ್ನು ಕಳೆದುಕೊಂಡಿದ್ದೀವಿ. ಅದ್ಭುತ ನಟ ಮತ್ತು ಅತ್ಯುತ್ತಮ ವ್ಯಕ್ತಿಯಾಗಿದ್ದರು. ನೀವು ನಮಗೆ ನೀಡಿದ ಮನರಂಜನೆಗೆ ಧನ್ಯವಾದಗಳು. ನಿಮ್ಮನ್ನು ತುಂಬ ಮಿಸ್ ಮಾಡಿಕೊಳ್ಳುತ್ತೇವೆ" ಎಂದು ಆಮೀರ್ ಖಾನ್ ಟ್ವೀಟ್ ಮಾಡಿದ್ದಾರೆ.

  ಜತೆಯಾಗಿ ಯುದ್ಧದಲ್ಲಿ ಗೆಲ್ಲೋಣ: ರಿಷಿ ಕಪೂರ್ ಕೊನೆಯದಾಗಿ ಮಾಡಿದ್ದ ಟ್ವೀಟ್ ಇದುಜತೆಯಾಗಿ ಯುದ್ಧದಲ್ಲಿ ಗೆಲ್ಲೋಣ: ರಿಷಿ ಕಪೂರ್ ಕೊನೆಯದಾಗಿ ಮಾಡಿದ್ದ ಟ್ವೀಟ್ ಇದು

  ಅಮಿತಾಬ್ ಬಚ್ಚನ್

  ಅಮಿತಾಬ್ ಬಚ್ಚನ್

  ರಿಷಿ ಕಪೂರ್ ನಿಧನಕ್ಕೆ ನಟ ಅಮಿತಾಬ್ ಸಂತಾಪ ಸೂಚಿಸಿದ್ದಾರೆ. ರಿಷಿ ಹೋಗಿಬಿಟ್ಟರು. ಎಂದು. ಅಮಿತಾಬ್ ಮತ್ತು ರಿಷಿ ನಡುವೆ ಉತ್ತಮ ಸ್ನೇಹ ಬಾಂಧವ್ಯವಿತ್ತು. ಇಬ್ಬರು ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅಮರ್ ಅಕ್ಬರ್ ಆಂಥೋನಿ, 102 ನಟ್ ಔಟ್ ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ.

  ನಟ ಪವನ್ ಕಲ್ಯಾಣ್

  ನಟ ಪವನ್ ಕಲ್ಯಾಣ್

  "ರಿಷಿ ಕಪೂರ್ ನಿಧನದ ಸುದ್ದಿ ಕೇಳಿ ತುಂಬಾ ನೋವಾಗಿದೆ. ಭಾರತೀಯ ಚಿತ್ರರಂಗಕ್ಕೆ ತುಂಬಲಾದ ನಷ್ಟ. ಅವರ ಕುಟುಂಬಕ್ಕೆ ನನ್ನ ಪ್ರಾರ್ಥನೆ. ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ತೆಲುಗು ನಟ ಪವನ್ ಕಲ್ಯಾಣ್ ಟ್ವೀಟ್ ಮಾಡಿದ್ದಾರೆ.

  ಬಾಲಿವುಡ್ ಸುರಸುಂದರ ರಿಶಿ ಕಪೂರ್ ಸಿನಿಮಾ ಯಾನದ ಹಿನ್ನೋಟಬಾಲಿವುಡ್ ಸುರಸುಂದರ ರಿಶಿ ಕಪೂರ್ ಸಿನಿಮಾ ಯಾನದ ಹಿನ್ನೋಟ

  ನಟ ಮಹೇಶ್ ಬಾಬು

  ನಟ ಮಹೇಶ್ ಬಾಬು

  ರಿಷಿ ಕಪೂರ್ ಸರ್ ನಿಧನದ ಸುದ್ದಿ ಕೇಳಿ ಹೃದಯ ಚಿತ್ರವಾಗಿದೆ. ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ತುಂಬಲಾರದ ನಷ್ಟ. ಸಂಪೂರ್ಣ ಮನರಂಜನೆ ಮತ್ತು ಅದ್ಭುತ ನಟ. ನಿಜವಾದ ಲೆಜೆಂಡ್. ರಣಬೀರ್ ಮತ್ತು ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ದೇವರು ನೀಡಲಿ. ಆವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ.

  ವೈರಲ್ ಆಗ್ತಿದೆ ರಿಶಿ ಕಪೂರ್ ಅಂತಿಮ ಕ್ಷಣದ ವಿಡಿಯೋ: ಸತ್ಯವೇನು?ವೈರಲ್ ಆಗ್ತಿದೆ ರಿಶಿ ಕಪೂರ್ ಅಂತಿಮ ಕ್ಷಣದ ವಿಡಿಯೋ: ಸತ್ಯವೇನು?

  ಪ್ರಿಯಾಂಕಾ ಚೋಪ್ರಾ

  ಪ್ರಿಯಾಂಕಾ ಚೋಪ್ರಾ

  "ನನ್ನ ಹೃದಯ ತುಂಬಾ ಭಾರವಾಗಿದೆ. ಇದು ಒಂದು ಯುಗದ ಅಂತ್ಯ. ಪ್ರಾಮಾಣಿಕ ಹೃದಯ ಮತ್ತು ಅದ್ಭುತ ಪ್ರತಿಭೆಯ ವ್ಯಕ್ತಿ. ನಿಮ್ಮನ್ನು ಸ್ವಲ್ಪ ಮಟ್ಟಿಗೆ ತಿಳಿದಿರುವುದು ಒಂದು ಭಾಗ್ಯ. ನೀತು, ರಿಧಿಮಾ, ರಣಬೀರ್ ಮತ್ತು ಕುಟುಂಬಕ್ಕೆ ನನ್ನ ಪ್ರಾರ್ಥನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಪ್ರಿಯಾಂಕಾ ಚೋಪ್ರಾ ಟ್ವೀಟ್ ಮಾಡಿದ್ದಾರೆ.

  English summary
  Bollywood great Actor Rishi Kapoor passed away. Indian film stars condolences to Rishi kapoor death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X