For Quick Alerts
  ALLOW NOTIFICATIONS  
  For Daily Alerts

  ಆರೋಗ್ಯದ ಬಗ್ಗೆ ಆತಂಕಕಾರಿ ವಿಚಾರ ಬಿಚ್ಚಿಟ್ಟ ನಟ ಇರ್ಫಾನ್ ಖಾನ್

  By Pavithra
  |

  ಬಾಲಿವುಡ್ ಸಿನಿಮಾರಂಗದಲ್ಲಿ ವಿಭಿನ್ನ ಪಾತ್ರಗಳನ್ನ ಮಾಡುತ್ತಾ ಭಾರತೀಯ ಚಿತ್ರರಂಗದ ಪ್ರೇಕ್ಷಕರನ್ನ ತನ್ನತ್ತ ಸೆಳೆದಿರುವ ನಟ ಇರ್ಫಾನ್ ಖಾನ್ ತಮ್ಮ ಆರೋಗ್ಯದ ಬಗ್ಗೆ ಆತಂಕಕಾರಿ ವಿಚಾರವನ್ನ ಹೇಳಿಕೊಂಡಿದ್ದಾರೆ.

  ಕೆಲವು ದಿನಗಳ ಹಿಂದೆ ಇರ್ಫಾನ್ ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಸುದ್ದಿ ಆಗಿತ್ತು. "ನನಗೆ ಜಾಂಡಿಸ್ ಇಲ್ಲ ನಾನು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದೇನೆ" ಎಂದು ಇರ್ಫಾನ್ ಖಾನ್ ಸ್ಪಷ್ಟ ಪಡಿಸಿದ್ದಾರೆ.

  ಅದರ ಜೊತೆಯಲ್ಲಿ "ನನಗೆ ಕಾಯಿಲೆ ಇದೆ ಅನ್ನೋ ಕಾರಣಕ್ಕೆ ನಾನು ಧೈರ್ಯ ಕಳೆದುಕೊಂಡಿಲ್ಲ ನನ್ನ ಕುಟುಂಬದವರು ಹಾಗೂ ಸ್ನೇಹಿತರ ಕಾಳಜಿ ಮತ್ತು ಅವರು ನೀಡುತ್ತಿರುವ ಧೈರ್ಯದಿಂದ ನಾನು ಚೆನ್ನಾಗಿದ್ದೇನೆ. ನನ್ನ ಕನಸುಗಳನ್ನ ನನಸು ಮಾಡಿಕೊಳ್ಳಲು ಪ್ರತಿ ನಿತ್ಯ ಹೋರಾಡುತ್ತಲೇ ಇರುತ್ತೇನೆ" ಎಂದು ತಮ್ಮ ಟ್ವಿಟ್ಟರ್ ನ ಮೂಲಕ ತಿಳಿಸಿದ್ದಾರೆ.

  ಆ ಅಪರೂಪದ ಕಾಯಿಲೆ ಯಾವುದು ಎನ್ನುವುದು ಇನ್ನು ಪತ್ತೆ ಆಗಿಲ್ಲವಂತೆ ಸದ್ಯ ಚಿಕಿತ್ಸೆ ಪಡೆಯುತ್ತಿರುವ ಇರ್ಫಾನ್ ಖಾನ್ ಒಂದು ವಾರ ಅಥವಾ ಹತ್ತು ದಿನದ ಒಳಗೆ ಈ ಬಗ್ಗೆ ಅಭಿಮಾನಿಗಳಿಗೆ ನಾನೇ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

  ಸದ್ಯ ಇರ್ಫಾನ್ ಹಾಗೂ ದೀಪಿಕಾ ಪಡುಕೋಣೆ ಒಟ್ಟಿಗೆ ಅಭಿನಯಿಸುತ್ತಿದ್ದು ಇಬ್ಬರು ಕಲಾವಿದರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಚಿತ್ರೀಕರಣವನ್ನ ನಿಲ್ಲಿಸಲಾಗಿದೆ . ಚಿತ್ರವನ್ನ ವಿಶಾಲ್ ಭಾರಧ್ವಜ್ ನಿರ್ದೇಶನ ಮಾಡುತ್ತಿದ್ದಾರೆ.

  English summary
  Bollywood actor Irfan Khan is suffering from a Rare Disease, Actor Irfan Khan wrote on Twitter about it ,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X