'ನ್ಯೂರೊಎಂಡ್ರೊಕ್ರೈನ್ ಟ್ಯೂಮರ್'ನಿಂದ ಬಳಲುತ್ತಿರುವ ನಟ ಇರ್ಫಾನ್ ಖಾನ್
Bollywood
oi-Bharathkumar
By Bharath Kumar
|
ಇರ್ಫಾನ್ ಖಾನ್ 'ನ್ಯೂರೊಎಂಡ್ರೊಕ್ರೈನ್ ಟ್ಯೂಮರ್'ನಿಂದ ಬಳಲುತ್ತಿದ್ದಾರೆ | Filmibeat Kannada
ಬಾಲಿವುಡ್ ನಟ ಇರ್ಫಾನ್ ಖಾನ್ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಶುಕ್ರವಾರ ಖುದ್ದು ಬಹಿರಂಗಪಡಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಇರ್ಫಾನ್ ಖಾನ್ ಅವರ ಆರೋಗ್ಯದ ಬಗ್ಗೆ ವದಂತಿಗಳು ಹಬ್ಬಿದ್ದವು. ಮಾರಕ ಕಾಯಿಲೆಯಿಂದ ನಟ ತುತ್ತಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿತ್ತು.
ಇದಕ್ಕೆಲ್ಲ ತೆರೆ ಎಳೆದಿರುವ ಇರ್ಫಾನ್ ಖಾನ್ ''ನಾನು ನ್ಯೂರೊಎಂಡ್ರೊಕ್ರೈನ್ ಟ್ಯೂಮರ್ (ಕ್ಯಾನ್ಸರ್ ಗಡ್ಡೆ) ಎಂಬ ಅಪರೂಪದ ಕ್ಯಾನ್ಸರ್ ನಿಂದ ಬಳಲುತ್ತಿದ್ದೇನೆ'' ಎಂದು ಟ್ವೀಟ್ ಮಾಡುವ ಮೂಲಕ ಎಲ್ಲ ಉಹಾಪೋಹಗಳಿಗೆ ಬ್ರೇಕ್ ಹಾಕಿದ್ದಾರೆ.
ಈ ಹಿಂದೆ ಮಾರ್ಚ್ 5 ರಂದು ಈ ಸಂಬಂಧ ಟ್ವಿಟ್ಟರ್ ನಲ್ಲಿ ಇರ್ಫಾನ್ ಖಾನ್ ಹೇಳಿದ್ದರು. ಆದ್ರೆ, ಯಾವ ಕಾಯಿಲೆ ಎಂಬುದನ್ನ ತಿಳಿಸಿರಲಿಲ್ಲ. ನಂತರ ಇರ್ಫಾನ್ ಅನಾರೋಗ್ಯದ ಬಗ್ಗೆ ಇಲ್ಲಸಲ್ಲದ ವದಂತಿ ಹಬ್ಬಿತ್ತು. ಹೀಗಾಗಿ, ಮತ್ತೆ ಸ್ಪಷ್ಟನೆ ನೀಡಿರುವ ಇರ್ಫಾನ್ ತಮ್ಮ ನೋವನ್ನ ಹೊರಹಾಕಿದ್ದಾರೆ.
''ನನಗೆ ನ್ಯೂರೊಎಂಡ್ರೊಕ್ರೈನ್ ಟ್ಯೂಮರ್ ಕ್ಯಾನ್ಸರ್ ಇದೆ ಎಂದಾಗ ಬಹಳ ಕಷ್ಟವೆನಿಸಿತು. ಆದರೆ ನನ್ನ ಆತ್ಮೀಯರು, ಸ್ನೇಹಿತರು ಎಲ್ಲರೂ ನನಗೆ ಪ್ರೀತಿ ಕೊಟ್ಟು, ಆತ್ಮ ವಿಶ್ವಾಸ ತುಂಬಿದರು'' ಎಂದು ಭಾವುಕರಾಗಿದ್ದಾರೆ.
ಅಷ್ಟೇ ಅಲ್ಲದೇ, ''ಚಿಕಿತ್ಸೆಗಾಗಿ ನಾನು ವಿದೇಶಕ್ಕೆ ತೆರಳುತ್ತಿದ್ದು, ನಿಮ್ಮ ಹಾರೈಕೆಗಳು ಸದಾ ನನ್ನೊಂದಿಗೆ ಇರಲಿ' ಎಂದು ಮನವಿ ಮಾಡಿಕೊಂಡಿದ್ದಾರೆ. 'ನರಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳೂ ಮಿದುಳಿಗೆ ಸಂಬಂಧಿಸಿರುವುದಿಲ್ಲ. ಬೇಕಾದರೆ ಗೂಗಲ್ ನಲ್ಲಿ ಹುಡುಕಿ ನೋಡಿ' ಎಂದು ಗಾಳಿ ಸುದ್ದಿ ಹಬ್ಬಿಸದವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ನ್ಯೂರೊಎಂಡ್ರೊಕ್ರೈನ್ ಟ್ಯೂಮರ್ ಎಂಬುದು ಕ್ಯಾನ್ಸರ್‌ನ ಅಪರೂಪದ ಇದನ್ನ ಆರಂಭದಲ್ಲೇ ಗುರುತಿಸಿದರೇ ಚಿಕಿತ್ಸೆ ಸಾಧ್ಯೆವೆಂದು ವೈದ್ಯ ಮೂಲಗಳು ತಿಳಿಸಿವೆ.
Bollywood actor irrfan Khan revealed he has been diagnosed with neuroendocrine tumour. Neuroendocrine tumour is a rare form of cancer that can target various parts of the body.