»   » ಸಂಜಯ್ ಲೀಲಾ ಬನ್ಸಾಲಿ ಮುಂದಿನ ಚಿತ್ರದಲ್ಲಿ ಶಾರುಖ್-ಐಶ್ವರ್ಯ?

ಸಂಜಯ್ ಲೀಲಾ ಬನ್ಸಾಲಿ ಮುಂದಿನ ಚಿತ್ರದಲ್ಲಿ ಶಾರುಖ್-ಐಶ್ವರ್ಯ?

Posted By:
Subscribe to Filmibeat Kannada

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮತ್ತು ಐಶ್ವರ್ಯ ರೈ ಬಚ್ಚನ್ ಇಬ್ಬರೂ 2002 ರಲ್ಲಿ ತೆರೆಕಂಡ 'ದೇವದಾಸ್' ಚಿತ್ರದ ಮೂಲಕ ಬಿಟೌನ್ ನಲ್ಲಿ ಮ್ಯಾಜಿಕ್ ಮಾಡಿದ್ದರು. ಆದರೆ ಸಂಜಯ್ ಲೀಲಾ ಬನ್ಸಾಲಿಯ ಈ ಸಿನಿಮಾ ನಂತರ ಕಿಂಗ್ ಖಾನ್ ತಮ್ಮ ಯಾವ ಸಿನಿಮಾಗಳಿಗೂ ಐಶ್ವರ್ಯ ರೈ ರವರನ್ನು ಲೀಡ್ ರೋಲ್ ಆಗಿ ತೆಗೆದುಕೊಳ್ಳಲಿಲ್ಲ.[ಐಶ್ವರ್ಯ ರೈ-ರಾಮ್ ಚರಣ್ ಬಗ್ಗೆ ಇಂಥದೊಂದು ಸುದ್ದಿ! ನಿಜವೇ?]

ಶಾರುಖ್ ತಮ್ಮ 'ದೇವ್‌ದಾಸ್' ಚಿತ್ರದ ನಂತರ ಐಶ್ವರ್ಯ ಅವರೊಂದಿಗೆ ಅಭಿನಯಿಸುವ 5 ಚಿತ್ರಗಳಿಗೆ ನೋ ಎಂದಿದ್ದರಂತೆ. ಆದರೆ ಹಲವು ವರ್ಷಗಳ ನಂತರ ಈಗ ಮಾಜಿ ವಿಶ್ವ ಸುಂದರಿ ಜೊತೆ ನಟಿಸಲು ಇಂಟ್ರೆಸ್ಟ್ ತೋರಿಸಿದ್ದಾರಂತೆ. ಅದು ಸಹ 'ದೇವ್‌ದಾಸ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಸಂಜಯ್ ಲೀಲಾ ಬನ್ಸಾಲಿ ಅವರ ಮುಂದಿನ ಚಿತ್ರಕ್ಕಾಗಿಯೇ ಎಂಬುದು ಇನ್ನೊಂದು ವಿಶೇಷತೆ.

ಚಿತ್ರಕ್ಕಾಗಿ ಸೀಕ್ರೇಟ್ ಮೀಟಿಂಗ್

"ಸಂಜಯ್ ಲೀಲಾ ಬನ್ಸಾಲಿ ರವರು ತಮ್ಮ ಮುಂದಿನ ಸಿನಿಮಾಗಾಗಿ ಮುಂಬೈನಲ್ಲಿನ 'ಪದ್ಮಾವತಿ' ಚಿತ್ರ ಸೆಟ್ ನಲ್ಲಿ ಐಶ್ವರ್ಯ ರೈ ಬಚ್ಚನ್ ರೊಂದಿಗೆ ಸೀಕ್ರೇಟ್ ಮೀಟಿಂಗ್ ಮಾಡಿದ್ದಾರೆ" ಎಂಬುದು ಇಂಡಿಯಾ.ಕಾಂ ವರದಿಯಿಂದ ತಿಳಿದಿದೆ.

ರೊಮ್ಯಾಂಟಿಕ್ ಕವಿ ಸಾಹಿರ್ ಲುಧಿಯಾನ್ವಿ ಬಯೋಪಿಕ್

ಅಂದಹಾಗೆ ಸಂಜಯ್ ಲೀಲಾ ಬನ್ಸಾಲಿ ಅವರ ಮುಂದಿನ ಚಿತ್ರ ಪ್ರೇಮ ಕವಿ ಎಂದು ಖ್ಯಾತರಾದ ಸಿನಿಮಾ ಗೀತೆ ರಚನೆಕಾರರು ಆದ ಸಾಹಿರ್ ಲುಧಿಯಾನ್ವಿ ಜೀವನ ಆಧರಿತವಾಗಿದ್ದು, ಈ ಚಿತ್ರದಲ್ಲಿ ಸಾಹಿರ್ ಅವರ ಪಾತ್ರವನ್ನು ಶಾರುಖ್ ಖಾನ್ ನಿರ್ವಹಿಸಲಿದ್ದಾರೆ ಎನ್ನಲಾಗಿದೆ.

ಎರಡನೇ ಚಾಯ್ಸ್ ಅಭಿಷೇಕ್ ಬಚ್ಚನ್

ಐಶ್ವರ್ಯ ರೈ ಬಚ್ಚನ್ ಚಿತ್ರದಲ್ಲಿ ಅಮೃತ ಪ್ರೀತಮ್ ಆಗಿ ಬಣ್ಣ ಹಚ್ಚಲಿದ್ದು, ಅವರ ಎದುರು ಸಾಹಿರ್ ಆಗಿ ಅಭಿನಯಿಸಲು ಎರಡನೇ ಚಾಯ್ಸ್ ಅಭಿಷೇಕ್ ಬಚ್ಚನ್ ಅಂತೆ.

ಕಿಂಗ್ ಖಾನ್ ಗ್ರೀನ್ ಸಿಗ್ನಲ್ ಸಿಗಬೇಕಂತೆ..

ಶಾರುಖ್ ಖಾನ್ ಈ ಚಿತ್ರದಲ್ಲಿಯ ಸಾಹಿರ್ ಪಾತ್ರಕ್ಕೆ ಒರಿಜಿನಲ್ ಚಾಯ್ಸ್ ಆಗಿದ್ದು, ಇವರು ಓಕೆ ಎನ್ನಬೇಕಷ್ಟೆ. ಐಶ್ವರ್ಯ ರೈ ನಟಿಯಾಗಿ ಚಿತ್ರಕ್ಕೆ ಸಂಪೂರ್ಣವಾಗಿ ಫಿಕ್ಸ್ ಆಗಿದ್ದು ಶಾರುಕ್ ಗ್ರೀನ್ ಸಿಗ್ನಲ್ ನೀಡಿದ ತಕ್ಷಣ, ಸಂಜಯ್ ಲೀಲಾ ಬನ್ಸಾಲಿ ಇತರೆ ತಾರಾಗಣ ಅಂತಿಮಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಐಶ್ವರ್ಯ ಜೊತೆಗಿನ 5 ಚಿತ್ರಗಳ ಡ್ರಾಪ್ ಏಕೆ?

ಶಾರುಖ್ ಖಾನ್ 'ದೇವ್‌ದಾಸ್' ನಂತರ ಐಶ್ವರ್ಯ ರೈ ಬಚ್ಚನ್ ಜೊತೆಗೆ ಅಭಿನಯಿಸಲು ಸಿಕ್ಕ 5 ಚಿತ್ರಗಳ ಅವಕಾಶವನ್ನು ಡ್ರಾಪ್ ಮಾಡಲು ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಆದರೆ 'ಚಲ್ತೇ ಚಲ್ತೇ' ಚಿತ್ರಸೆಟ್ ನಲ್ಲಿ ಸಲ್ಮಾನ್ ಖಾನ್ ಸೃಷ್ಟಿಸಿದ ಅವಾಂತರ ಒಂದರಿಂದಾಗಿ ಅಂದಿನಿಂದ ಐಶು ಮತ್ತು ಶಾರುಖ್ ನಡುವೆ ಕೋಲ್ಡ್ ವಾರ್ ಶುರುವಾಗಿದ್ದು ಕಾರಣ ಇರಬಹುದು ಎನ್ನಲಾಗಿದೆ.

English summary
Shahrukh Khan and Aishwarya Rai Bachchan's on-screen bond was magical in Sanjay Leela Bhansali's Devdas. But Shahrukh did not take Aishwarya in any of his films as a lead actress post the movie. But now report says he has shown interest in working with Aishwarya Rai Bachchan in Sanjay Leela Bhansali's next.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada