For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯ ರೈ-ರಾಮ್ ಚರಣ್ ಬಗ್ಗೆ ಇಂಥದೊಂದು ಸುದ್ದಿ! ನಿಜವೇ?

  By Bharath Kumar
  |

  ಬಾಲಿವುಡ್ ನಟಿ ಐಶ್ವರ್ಯ ರೈ ಮತ್ತು ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ ಅವರ ಬಗ್ಗೆ ಬಿಸಿ ಬಿಸಿ ಸುದ್ದಿಯೊಂದು ಹರಿದಾಡುತ್ತಿದೆ. ಇದಕ್ಕೆ ಕಾರಣ ನಿರ್ದೇಶಕ ಮಣಿರತ್ನಂ ಅವರ ಹೊಸ ಚಿತ್ರ.[ಪತಿ ಅಭಿಷೇಕ್ ಬಚ್ಚನ್ ಜೊತೆ ನಟಿಸುವ ಚಿತ್ರ ರಿಜೆಕ್ಟ್ ಮಾಡಿದ್ರು ಐಶ್ವರ್ಯ ರೈ!]

  ಹೌದು, ನಟ ರಾಮ್ ಚರಣ್ ತೇಜ, ನಿರ್ದೇಶಕ ಮಣಿರತ್ನಂ ಅವರ ಜೊತೆ ಒಂದು ಸಿನಿಮಾ ಮಾಡುತ್ತೇನೆ ಎಂದು ಹಲವು ತಿಂಗಳುಗಳ ಹಿಂದೆಯೇ ಹೇಳಿಕೊಂಡಿದ್ದರು. ಅದರಂತೆ ಚಿತ್ರದ ಕೆಲಸ ಕೂಡ ಶುರುವಾಗಿದೆ. ಹೀಗಿರುವಾಗ, ಐಶ್ವರ್ಯ ರೈ ಹಾಗೂ ರಾಮ್ ಚರಣ್ ತೇಜ ಜೋಡಿಯ ಬಗ್ಗೆ ಫಿಲ್ಮ್ ನಗರಿಯಲ್ಲಿ ಎಲ್ಲಿಲ್ಲದ ಚರ್ಚೆ ಶುರುವಾಗಿದೆ. ಮುಂದೆ ಓದಿ......

  ರಾಮ್ ಚರಣ್ ಗೆ ಐಶ್ ನಾಯಕಿ!

  ರಾಮ್ ಚರಣ್ ಗೆ ಐಶ್ ನಾಯಕಿ!

  ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಅವರ ಮುಂದಿನ ಸಿನಿಮಾಗೆ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ನಾಯಕಿ ಆಗಲಿದ್ದಾರಂತೆ. ಈ ಸುದ್ದಿ ಈಗ ಬಾಲಿವುಡ್ ಹಾಗೂ ಟಾಲಿವುಡ್ ಮಾಯನಗರಿಯಲ್ಲಿ ಕೇಳಿ ಬರುತ್ತಿದೆ.[ರೆಡ್ ಕಾರ್ಪೆಟ್ ಮೇಲೆ ಮಾಜಿ ವಿಶ್ವ ಸುಂದರಿ ಐಶೂ ಬೆಡಗು ಬಿನ್ನಾಣ..]

  ಮಣಿರತ್ನಂ ನಿರ್ದೇಶನ!

  ಮಣಿರತ್ನಂ ನಿರ್ದೇಶನ!

  ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಮಣಿರತ್ನಂ ಆಕ್ಷನ್ ಕಟ್ ಹೇಳಲಿದ್ದಾರಂತೆ. ರಾಮ್ ಚರಣ್ ಅವರಿಗಾಗಿ ಮಣಿರತ್ನಂ ಸ್ಕ್ರಿಪ್ಟ್ ಸಿದ್ದ ಮಾಡುತ್ತಿದ್ದು, ಇದು ರಾಮ್ ಚರಣ್ ಅವರ ವೃತ್ತಿ ಜೀವನದಲ್ಲಿ ವಿಶೇಷವಾಗಲಿದೆಯಂತೆ.[ಕನ್ನಡದ ರೀಮೇಕ್ ಚಿತ್ರದಲ್ಲಿ ಮಿಂಚಲಿದ್ದಾರೆ ತೆಲುಗಿನ ಸ್ಟಾರ್ ಹೀರೋ.!]

  'ರಾವನ್' ಐಶ್ ಕೊನೆಯ ಚಿತ್ರ!

  'ರಾವನ್' ಐಶ್ ಕೊನೆಯ ಚಿತ್ರ!

  1997 ರಲ್ಲಿ ಮಣಿರತ್ನಂ ನಿರ್ದೇಶನದ 'ಇರುವರ್' ಚಿತ್ರದ ಮೂಲಕ ಐಶ್ವರ್ಯ ರೈ ಚಿತ್ರರಂಗ ಪ್ರವೇಶ ಮಾಡಿದ್ದರು. ಇನ್ನು 2010 ರಲ್ಲಿ ಮೂಡಿ ಬಂದ 'ರಾವನ್' ಚಿತ್ರದಲ್ಲಿ ಐಶ್ವರ್ಯ ರೈ ಕೊನೆಯದಾಗಿ ಮಣಿರತ್ನಂ ಅವರ ಚಿತ್ರದಲ್ಲಿ ನಟಿಸಿದ್ದರು. ಈಗ ಮತ್ತೆ ತಮ್ಮ ನೆಚ್ಚಿನ ನಿರ್ದೇಶಕರ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿದೆ.

  ಇದೆಲ್ಲಾ ಸುಳ್ಳು ಎಂದ ರಾಮ್ ಚರಣ್ ಮೂಲ!

  ಇದೆಲ್ಲಾ ಸುಳ್ಳು ಎಂದ ರಾಮ್ ಚರಣ್ ಮೂಲ!

  ಮಣಿರತ್ನಂ ಚಿತ್ರದಲ್ಲಿ ರಾಮ್ ಚರಣ್ ಗೆ ನಾಯಕಿ ಆಗಿ ಐಶ್ವರ್ಯ ರೈ ನಟಿಸುತ್ತಾರೆ ಎಂಬುದು ಸುಳ್ಳು ಸುದ್ದಿ ಎಂದು ಸ್ವತಃ ರಾಮ್ ಚರಣ್ ಮ್ಯಾನೇಜರ್ ಆಗಿರುವ ಪ್ರವಲ್ಲಿಕ ಅಂಜುರಿ ಸ್ಪಷ್ಟಪಡಿಸಿದ್ದಾರೆ.

  ಸುಕುಮಾರ್ ಚಿತ್ರದಲ್ಲಿ ಚರಣ್ ಬ್ಯುಸಿ!

  ಸುಕುಮಾರ್ ಚಿತ್ರದಲ್ಲಿ ಚರಣ್ ಬ್ಯುಸಿ!

  ಸದ್ಯ, ಸುಕುಮಾರ್ ನಿರ್ದೇಶನ ಮಾಡುತ್ತಿರುವ ಇನ್ನು ಹೆಸರಿಡದ ಚಿತ್ರದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ. ಇದಾದ ನಂತರ ಮಣಿರತ್ನಂ ಪ್ರಾಜೆಕ್ಟ್ ಶುರು ಮಾಡುವ ಯೋಚನೆಯಲ್ಲಿದ್ದಾರೆ. ಮತ್ತೊಂದೆಡೆ 'ಕಾಟ್ರು ವೆಲಿಯಾಡೈ' ಚಿತ್ರದ ಯಶಸ್ಸಿನ ನಂತರ ಮಣಿರತ್ನಂ ಕೂಡ ತಮ್ಮ ಮುಂದಿನ ಚಿತ್ರಕ್ಕೆ ಸಿದ್ದವಾಗುತ್ತಿದ್ದಾರೆ.

  English summary
  Aishwarya Rai Bachchan Not to Star Opposite Ram Charan in Mani Ratnam’s Next Says Ram Charan Manager Pravallika Anjuri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X