For Quick Alerts
  ALLOW NOTIFICATIONS  
  For Daily Alerts

  ಮತ್ತೆ ಮತ್ತೆ ಸೋಲುತ್ತಿರುವ 'ಬಾಕ್ಸ್ ಆಫೀಸ್ ಸುಲ್ತಾನರು'

  By Bharath Kumar
  |

  ಬಾಲಿವುಡ್ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನರು ಎನಿಸಿಕೊಂಡಿರುವ ನಟರ ಚಿತ್ರಗಳು ಇತ್ತೀಚೆಗೆ ಅದ್ಯಾಕೋ ದೊಡ್ಡ ನಷ್ಟ ಅನುಭವಿಸುತ್ತಿದೆ. ಈ ಹಿಂದಿನ ಚಿತ್ರಗಳಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದು ದಾಖಲೆ ಸೃಷ್ಟಿಸಿದ್ದ ನಟರು, ಈಗ ಹಾಕಿದ ಬಂಡವಾಳವನ್ನ ಕೂಡ ಹಿಂದಕ್ಕೆ ಪಡೆಯದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

  ಇತ್ತೀಚೆಗಷ್ಟೇ ಸಲ್ಮಾನ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಈಗ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಸಿನಿಮಾ ಸೋತು ಸುಣ್ಣವಾಗಿದೆ. ಹೀಗಿರುವಾಗ, ಕಿಲಾಡಿ ಅಕ್ಷಯ್ ಕುಮಾರ್ ತಮ್ಮ 'ಟಾಯ್ಲೆಟ್' ಮೂಲಕ ಸಿಕ್ಕಾಪಟ್ಟೆ ಬಿಸ್ ನೆಸ್ ಮಾಡುತ್ತಿದ್ದಾರೆ.

  ಹಾಗಿದ್ರೆ, ಬಾಲಿವುಡ್ ಸುಲ್ತಾನರ ಸಿನಿಮಾಗಳು ಸೋತಿದ್ದೇಕೆ? ಅವರ ಚಿತ್ರಗಳಿಂದ ಎಷ್ಟು ಕೋಟಿ ನಷ್ಟವಾಗಿದೆ ಎಂದು ಮುಂದೆ ಓದಿ.....

  ಸಲ್ಮಾನ್ ಪರಿಸ್ಥಿತಿ ಶಾರೂಖ್ ಗೂ ಬಂತು

  ಸಲ್ಮಾನ್ ಪರಿಸ್ಥಿತಿ ಶಾರೂಖ್ ಗೂ ಬಂತು

  ಸಲ್ಮಾನ್ ಖಾನ್ ಅಭಿನಯದ 'ಟ್ಯೂಬ್ ಲೈಟ್' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಸೋಲು ಕಂಡಿತ್ತು. ಇದರಿಂದ ಚಿತ್ರವನ್ನ ಖರೀದಿಸಿದ್ದ ವಿತರಕರಿಗೆ ಚಿತ್ರದ ನಿರ್ಮಾಪಕರಾಗಿದ್ದ ಸುಲ್ಮಾನ್ ಖಾನ್ ತಮ್ಮ ಕೈಯಿಂದ ಹಣವನ್ನ ಹಿಂತಿರುಗಿಸಿದ್ದರು. ಈಗ ಅದೇ ಪರಿಸ್ಥಿತಿಗೆ ಶಾರೂಖ್ ಗೆ ಬಂದಿದ್ದಾರೆ.

  ಅಂದು ರಜನಿ ಮಾಡಿದ್ದನ್ನೇ, ಇಂದು ಸಲ್ಮಾನ್ ಖಾನ್ ಮಾಡುತ್ತಿದ್ದಾರೆ.!

  ಮತ್ತೆ ಸೋಲು ಕಂಡ ಕಿಂಗ್ ಖಾನ್

  ಮತ್ತೆ ಸೋಲು ಕಂಡ ಕಿಂಗ್ ಖಾನ್

  'ದಿಲ್ವಾಲೆ' ಚಿತ್ರದ ನಂತರ ತೆರೆಕಂಡ 'ಜಬ್ ಹ್ಯಾರಿ ಮೆಟ್ ಸೇಜಲ್' ಸಿನಿಮಾ ನಿರೀಕ್ಷೆಯ ಮಟ್ಟ ತಲುಪಲಿಲ್ಲ. ಆಗಸ್ಟ್ 4 ರಂದು ಬಿಡುಗಡೆಯಾಗಿದ್ದ ಈ ಚಿತ್ರದ ಗಳಿಕೆ ನೀರಸವಾಗಿದೆ. ಇದರಿಂದ ಚಿತ್ರದ ವಿತರಕರಿಗೆ ನಷ್ಟವಾಗಿದೆಯಂತೆ.

  ನಷ್ಟ ಭರಿಸುವಂತೆ ಶಾರೂಖ್ ಗೆ ಮನವಿ

  ನಷ್ಟ ಭರಿಸುವಂತೆ ಶಾರೂಖ್ ಗೆ ಮನವಿ

  ಶಾರೂಖ್ ಚಿತ್ರದಿಂದ ನಷ್ಟಕ್ಕೊಳಗಾಗಿರುವ ವಿತರಕರು ಈಗ ನಷ್ಟ ಭರಿಸುವಂತೆ ನಟ ಶಾರೂಖ್ ಖಾನ್ ಗೆ ಮನವಿ ಮಾಡುತ್ತಿದ್ದಾರೆ.

  ಶಾರೂಖ್ ಸಿನಿಮಾಗಳು ನಷ್ಟವಾಗಿದ್ದು ಇದೆ ಮೊದಲಲ್ಲ

  ಶಾರೂಖ್ ಸಿನಿಮಾಗಳು ನಷ್ಟವಾಗಿದ್ದು ಇದೆ ಮೊದಲಲ್ಲ

  ಶಾರೂಖ್ ಖಾನ್ ಸಿನಿಮಾಗಳು ನಷ್ಟಕ್ಕೆ ಸಿಲುಕಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ 2001ರಲ್ಲಿ ‘ಅಶೋಕಾ' ಹಾಗೂ 2005ರಲ್ಲಿ ‘ಪಹೇಲಿ' ಚಿತ್ರ ಸೋತಿದ್ದರಿಂದ ಅದರ ವಿತರಕರಿಗೆ ಶಾರುಖ್ ಖಾನ್ ಹಣ ಹಿಂದಿರುಗಿಸಿದ್ದರು. 2015ರಲ್ಲಿ ‘ದಿಲ್​ವಾಲೆ' ಚಿತ್ರ ಸೋತ ಹಿನ್ನೆಲೆಯಲ್ಲಿ ವಿತರಕರ ಶೇ. 50 ನಷ್ಟ ಭರಿಸುವ ಸಲುವಾಗಿ ಶಾರುಖ್ 25 ಕೋಟಿ ರೂ. ಹಿಂದಿರುಗಿಸಿದ್ದರು.

  ಸಲ್ಲು ಸ್ನೇಹಕ್ಕಾಗಿ ಶಾರೂಖ್ ಕೊಟ್ಟ ಗಿಫ್ಟ್ ನೋಡಿ ಬೆರಗಾದ ಬಾಲಿವುಡ್

  'ಟಾಯ್ಲೆಟ್'ನಲ್ಲಿ ಭರ್ಜರಿ ಹಣ

  'ಟಾಯ್ಲೆಟ್'ನಲ್ಲಿ ಭರ್ಜರಿ ಹಣ

  ಇನ್ನು ಮತ್ತೊಂದೆಡೆ ಅಕ್ಷಯ್ ಕುಮಾರ್ ಅಭಿನಯದ 'ಟಾಯ್ಲೆಟ್' ಚಿತ್ರ ಕೇವಲ ಮೂರು ದಿನದಲ್ಲಿ 50 ಕೋಟಿ ಗಳಿಕೆ ಕಂಡಿದೆ. ಹೀಗಾಗಿ, ಬಾಲಿವುಡ್ ಸುಲ್ತಾನರು ಎನಿಸಿಕೊಂಡಿರುವ ಸಲ್ಲು-ಶಾರೂಖ್ ಚಿತ್ರದ ಮುಂದೆ ಅಕ್ಷಯ್ ಕುಮಾರ್ ಸಿನಿಮಾ ಯಶಸ್ಸು ಗಳಿಸುತ್ತಿರುವುದು ಗಮನ ಸೆಳೆಯುತ್ತಿದೆ.

  English summary
  Jab Harry Met Sejal collections: Big setback for Shah Rukh Khan, distributors want their money refunded

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X