ನೂರು ಕೋಟಿ ಬಾಚಿದ ಜಬ್ ತಕ್ ಹೈ ಜಾನ್ ಚಿತ್ರ

ನವೆಂಬರ್ 13ರಂದು ತೆರೆಕಂಡ ಈ ರೋರೊಮ್ಯಾಂಟಿಕ್ ಲವ್ ಸ್ಟೋರಿ ಇದುವರೆಗೂ ರು.100 ಕೋಟಿ ಬಾಚಿದೆ. ಭಾರತದ ಕಲೆಕ್ಷನ್ ಸಾಧಾರಣವಾಗಿದ್ದರೆ ವಿದೇಶಗಳಲ್ಲಿ ಚಿತ್ರಕ್ಕೆ ಸಿಕ್ಕಾಪಟ್ಟೆ ರೆಸ್ಪಾನ್ಸ್ ವ್ಯಕ್ತವಾಗಿದೆ. ದೇಶ ಹಾಗೂ ವಿದೇಶಗಳೆರಡಲ್ಲೂ ಸೇರಿ 'ಜಬ್ ತಕ್ ಹೈ ಜಾನ್' ಚಿತ್ರದ ಕಲೆಕ್ಷನ್ ನೂರು ಕೋಟಿ ಎನ್ನುತ್ತವೆ ಮೂಲಗಳು.
ಸಲ್ಮಾನ್ ಖಾನ್ ಅವರ 'ಏಕ್ತ್ ಥಾ ಟೈಗರ್' ಚಿತ್ರ ಬಾಕ್ಸಾಫೀಸಲ್ಲಿ ರು.103 ಕೋಟಿ ಬಾಚುವ ಮೂಲಕ 2012ನೇ ಸಾಲಿನ ಅತಿಹೆಚ್ಚು ಗಳಿಕೆಯ ಚಿತ್ರ ಎನ್ನಿಸಿಕೊಂಡಿತ್ತು. ಈಗ 'ಟೈಗರ್' ದಾಖಲೆಯನ್ನು 'ಜಬ್ ತಕ್ ಹೈ ಜಾನ್' ಮುರಿಯಲಿದೆ.
ಚಿತ್ರ ಬಿಡುಗಡೆಯಾದ ಐದು ದಿನಗಳಲ್ಲೇ ರು.75 ಕೋಟಿ ಕಲೆಕ್ಷನ್ ಭಾರತದಲ್ಲೇ ಆಗಿದೆ. ಯಶ್ ಚೋಪ್ರಾ ನಿರ್ದೇಶನದ ಕೊನೆಯ ಚಿತ್ರ ಇದಾಗಿದ್ದು ಶಾರುಖ್, ಕತ್ರಿನಾ ಕೈಫ್ ಹಾಗೂ ಅನುಷ್ಕಾ ಶರ್ಮ ಅಭಿನಯಿಸಿದ್ದಾರೆ. ಎ ಆರ್ ರೆಹಮಾನ್ ಅವರ ಸಂಗೀತ ಚಿತ್ರಕ್ಕಿದೆ. (ಏಜೆನ್ಸೀಸ್)
More from Filmibeat
English summary
After Salman Khan's Ek Tha Tiger, Shahrukh Khan-Katrina Kaif starrer movie Jab Tak Hai Jaan which released on November 13, has done superb collections at the Box Office. As per the reports by Trade Analyst, Jab Tak Hai Jaan has crossed the 100 Cr mark worldwide at the Box Office in just 5 days.
ಶಾರುಖ್ ಖಾನ್ ಬಾಕ್ಸ್ ಆಫೀಸ್ ಬಾಲಿವುಡ್ ಕತ್ರಿನಾ ಕೈಫ್ ಅನುಷ್ಕಾ ಶರ್ಮ shahrukh khan box office katrina kaif bollywood


Click it and Unblock the Notifications











