twitter
    For Quick Alerts
    ALLOW NOTIFICATIONS  
    For Daily Alerts

    200 ಕೋಟಿ ಸುಲಿಗೆ ಪ್ರಕರಣ: ಮತ್ತೆ ವಿಚಾರಣೆಗೆ ಹಾಜರಾದ 'ರಕ್ಕಮ್ಮ'

    |

    200 ಕೋಟಿ ಹಣ ಸುಲಿಗೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಇಂದು ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗದ ವಿಚಾರಣೆಗೆ ಹಾಜರಾಗಿದ್ದಾರೆ.

    'ವಿಕ್ರಾಂತ್ ರೋಣ' ಸಿನಿಮಾ ಬೆಡಗಿ 'ರಕ್ಕಮ್ಮ'ನಿಗೆ ಅಕ್ರಮ ಹಣ ವರ್ಗಾವಣೆ, ವಂಚನೆ, ಸುಲಿಗೆ ಪ್ರಕರಣ ಕಳೆದೊಂದು ವರ್ಷದಿಂದಲೂ ಬೆನ್ನು ಬಿದ್ದಿದ್ದು, ಮೊದಲಿಗೆ ಪ್ರಕರಣದ ಸಾಕ್ಷಿಯಾಗಿದ್ದ ಜಾಕ್ವೆಲಿನ್ ಇದೀಗ ಆರೋಪಿಯಾಗಿದ್ದಾರೆ. ಬಂಧನದ ಭೀತಿಯನ್ನೂ ಎದುರಿಸುತ್ತಿದ್ದಾರೆ.

    ಇಡಿ ವಿರುದ್ಧ ಜಾಕ್ವೆಲಿನ್ ಪಕ್ಷಪಾತದ ಆರೋಪ: ನಾನು ಆರೋಪಿ, ನೋರಾ ಸಾಕ್ಷಿ ಏಕೆಂದು ಪ್ರಶ್ನೆ?ಇಡಿ ವಿರುದ್ಧ ಜಾಕ್ವೆಲಿನ್ ಪಕ್ಷಪಾತದ ಆರೋಪ: ನಾನು ಆರೋಪಿ, ನೋರಾ ಸಾಕ್ಷಿ ಏಕೆಂದು ಪ್ರಶ್ನೆ?

    ಇಂದು ದೆಹಲಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ವಿಭಾಗದ ಕಚೇರಿಗೆ ಆಗಮಿಸಿದ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅಧಿಕಾರಿಗಳೆದುರು ವಿಚಾರಣೆಗೆ ಹಾಜರಾಗಿದ್ದಾರೆ. ಜಾಕ್ವೆಲಿನ್ ಅನ್ನು ಸುಕೇಶ್‌ಗೆ ಪರಿಚಯಿಸಿದ ಪಿಂಕಿ ಇರಾನಿ ಸಹ ವಿಚಾರಣೆಗೆ ಹಾಜರಾಗಿದ್ದಾರೆ. ಈ ಹಿಂದೆ ಜಾರಿ ನಿರ್ದೇಶನಾಲಯ (ಇಡಿ) ಈ ಪ್ರಕರಣ ತನಿಖೆ ನಡೆಸಿ ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ಆರೋಪಿಯಾಗಿಸಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿತ್ತು.

    Jacqueline Fernandez Arrives At EOW Office In Delhi In Connection with Money Laundering Case

    ತಿಹಾರ್ ಜೈಲಿನಲ್ಲಿರುವ ವಂಚಕ ಸುಕೇಶ್ ಚಂದ್ರಶೇಖರ್, ಫೋರ್ಟೀಸ್ ಸಂಸ್ಥೆಯ ಮಾಜಿ ನಿರ್ದೇಶಕ ಶಿವೇಂಧರ್ ಸಿಂಗ್‌ ಪತ್ನಿ ಅದಿತಿ ಸಿಂಗ್‌ರಿಂದ 200 ಕೋಟಿ ಹಣ ವಸೂಲಿ ಮಾಡಿದ್ದ. ಈ ಬಗ್ಗೆ ಅದಿತಿ ಸಿಂಗ್ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಹಾಗೂ ಇಡಿ ಸುಕೇಶ್ ಚಂದ್ರಶೇಖರ್ ಹಾಗೂ ನಟಿ ಜಾಕ್ವೆಲಿನ್ ಫರ್ನಾಂಡೀಸ್ ನಡುವೆ ಆಪ್ತ ಬಂಧ ಇರುವುದಾಗಿಯೂ, ಸುಕೇಶ್‌ನಿಂದ ಕೋಟ್ಯಂತರ ಮೌಲ್ಯದ ಉಡುಗೊರೆಗಳನ್ನು ಜಾಕ್ವೆಲಿನ್ ಫರ್ನಾಂಡೀಸ್ ಪಡೆದಿರುವುದು ಸಹ ತನಿಖೆಯಿಂದ ಬೆಳಕಿಗೆ ಬಂದಿತ್ತು.

    ವಂಚಕ ಸುಕೇಶ್ ತಾನು ಸುಲಿಗೆ ಮಾಡಿದ, ವಂಚನೆ ಮಾಡಿದ ಹಣದಿಂದ ಜಾಕ್ವೆಲಿನ್ ಫರ್ನಾಂಡೀಸ್‌ಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದ. ಈ ಪ್ರಕರಣದಲ್ಲಿ ತಾನು ಸಂತ್ರಸ್ತೆ ಎಂದು ಆರಂಭದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಹೇಳಿಕೊಂಡಿದ್ದರು. ಆದರೆ ಪ್ರಕರಣದ ವಿವರ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯವು, ಸುಕೇಶ್‌ನ ಆದಾಯದ ಮೂಲ ಯಾವುದೆಂದು ತಿಳಿದಿದ್ದರೂ ಜಾಕ್ವೆಲಿನ್ ಆತನಿಂದ ಉಡುಗೊರೆ ಪಡೆದಿದ್ದರು ಎಂದು ಆರೋಪಿಸಿ, ಜಾಕ್ವೆಲಿನ್ ಅನ್ನು ಸಹ ಪ್ರಕರಣದಲ್ಲಿ ಆರೋಪಿಯನ್ನಾಗಿಸಿದೆ.

    ಸುಕೇಶ್‌ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಮಾತ್ರವೇ ಅಲ್ಲದೆ ನಟಿ ನೋರಾ ಫತೇಹಿಗೂ ಸುಕೇಶ್ ದುಬಾರಿ ಉಡುಗೊರೆಗಳನ್ನು ನೀಡಿದ್ದ. ಆದರೆ ನೋರಾ ಫತೇಹಿಗೆ ಸುಕೇಶ್‌ನ ವ್ಯಕ್ತಿಗತ ಪರಿಚಯ ಇರಲಿಲ್ಲ. ಆತನ ಹಿನ್ನೆಲೆ, ಆದಾಯದ ಮೂಲದ ಬಗ್ಗೆ ಮಾಹಿತಿ ಇರಲಿಲ್ಲ ಎನ್ನಲಾದ ಕಾರಣ ನೋರಾ ಫತೇಹಿಯನ್ನು ಪ್ರಕರಣದ ಸಾಕ್ಷಿಯನ್ನಾಗಿಸಿದೆ ಇಡಿ.

    ಪ್ರಕರಣದಲ್ಲಿ ತನನ್ನು ಆರೋಪಿಯನ್ನಾಗಿ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನಟಿ ಜಾಕ್ವೆಲಿನ್ ಫರ್ನಾಂಡೀಸ್, ನ್ಯಾಯಾಲಯದ ಮೊರೆ ಹೋಗಿದ್ದು, ತನ್ನ ವಿರುದ್ಧ ಸಲ್ಲಿಸಲಾದ ದೋಷಾರೋಪ ಪಟ್ಟಿಯನ್ನು ರದ್ದು ಮಾಡಬೇಕೆಂದು, ಆರೋಪಿ ಸ್ಥಾನದಿಂದ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದಾರೆ. ಅಲ್ಲದೆ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿರುವ ತಮ್ಮ ಬ್ಯಾಂಕ್ ಖಾತೆ, ಎಫ್‌ಡಿಗಳನ್ನು ಬಿಡುಗಡೆಗೊಳಿಸಬೇಕು ಎಂದು ಸಹ ಜಾಕ್ವೆಲಿನ್ ಮನವಿ ಮಾಡಿದ್ದಾರೆ.

    English summary
    Actress Jacqueline Fernandez arrives at economic offense wing office in Delhi in connection with money laundering case related to conman Sukesh Chandrashekar
    Wednesday, September 14, 2022, 15:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X