»   » ನಟಿ ಜಾಕ್ವೆಲಿನ್ ಗೆ ರು.4 ಕೋಟಿ ಬಂಪರ್ ಆಫರ್

ನಟಿ ಜಾಕ್ವೆಲಿನ್ ಗೆ ರು.4 ಕೋಟಿ ಬಂಪರ್ ಆಫರ್

Posted By:
Subscribe to Filmibeat Kannada

ಬಾಲಿವುಡ್ ತಾರೆ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಭರ್ಜರಿ ಆಫರ್ ಸಿಕ್ಕಿದೆ. ಮದುವೆ ಕಾರ್ಯಕ್ರಮವೊಂದರಲ್ಲಿ ಸೊಂಟ ಬಳುಕಿಸಲು ಲಂಡನ್ ಗೆ ಹೊರಟಿದ್ದಾರೆ ಈ ಬಳುಕುವ ಬಳ್ಳಿ. ಇದಕ್ಕಾಗಿ ಅವರು ಬೇಡಿಕೆ ಇಟ್ಟಿರುವ ಹಣ ಕೇಳಿದರೆ ಎಂಥವರೂ ಹೌಹಾರುತ್ತಾರೆ.

ಲಂಡನ್ ನಲ್ಲಿ ನಡೆಯಲಿರುವ ಮದುವೆ ಕಾರ್ಯಕ್ರಮದಲ್ಲಿ ಕುಣಿಯಲು ಬಿಜಿನೆಸ್ ಮ್ಯಾನ್ ಒಬ್ಬರು ಜಾಕ್ವೆಲಿನ್ ಅವರನ್ನು ಸಂಪರ್ಕಿಸಿದ್ದರು. ಇದಕ್ಕಾಗಿ ಜಾಕ್ವೆಲಿನ್ ಕೇಳಿದ ಮೊತ್ತ ರು.4 ಕೋಟಿ. ಅಯ್ಯೋ ಅಷ್ಟೇನಾ? ನೀವು ಬರುವುದು ಹೆಚ್ಚೋ ನಾನು ಕೊಡುವುದು ಹೆಚ್ಚೋ ಎಂದು ಅವರು ನಾಲ್ಕು ಕೋಟಿಗೆ ಓಕೆ ಎಂದಿದ್ದಾರೆ. [ಬೆಳ್ಳಿತೆರೆ ಶೇಕ್ ಮಾಡುತ್ತಿರುವ ಫಾರಿನ್ ಶೃಂಗಾರ ತಾರೆಗಳು]

ಸ್ವತಃ ಈ ಸುದ್ದಿಯನ್ನು ಜಾಕ್ವೆಲಿನ್ ಅವರ ಪ್ರತಿನಿಧಿ ದೃಢೀಕರಿಸಿದ್ದಾರೆ. ಶ್ರೀಲಂಕಾ ಮೂಲದ ಈ ಬೆಡಗಿ 2009ರಲ್ಲಿ 'ಅಲಾಡೀನ್' ಎಂಬ ಚಿತ್ರದ ಮೂಲಕ ಬಾಲಿವುಡ್ ಬಣ್ಣದ ಜಗತ್ತಿಗೆ ಅಡಿಯಿಟ್ಟಿದ್ದರು. ಅಭಿನಯಿಸಿದ್ದು ಮೂರು ಮತ್ತೊಂದು ಚಿತ್ರವಾದರೂ ತಮ್ಮ ಸೌಂದರ್ಯದಿಂದ ಎಲ್ಲರ ಚಿತ್ತ ಸೆಳೆದ ತಾರೆ.

ಆ ಬಳಿಕ ಕಹಾ ಸೆ ಆಯಾ ಹೈ, ಹೌಸ್ ಫುಲ್ ಚಿತ್ರಗಳಲ್ಲಿ ಅಭಿನಯಿಸಿದರೂ ಸ್ಟಾರ್ ಹೀರೋಯಿನ್ ಎನ್ನಿಸಿಕೊಳ್ಳಲಿಲ್ಲ. ಮಹೇಶ್ ಭಟ್ ನಿರ್ದೇಶನದ 'ಮರ್ಡರ್ 2' ಚಿತ್ರ ಅವರಿಗೆ ಸಾಕಷ್ಟು ಹೆಸರನ್ನು ತಂದುಕೊಡ್ತು. ಸಲ್ಮಾನ್ ಖಾನ್ ಜೊತೆಗಿನ 'ಕಿಕ್' ಚಿತ್ರ ಹಿಟ್ ಆಗುವ ಮೂಲಕ ಚಲಾವಣೆಗೆ ಬಂದರು.

ಸಾಕಷ್ಟು ಅವಕಾಶಗಳು ಬಂದರೂ ಸೆಕೆಂಡ್ ಹೀರೋಯಿನ್ ಆಗಿಯೇ ಇನ್ನೂ ಬಾಲಿವುಡ್ ನಲ್ಲಿ ಪರಿಚಿತ. ಸದ್ಯಕ್ಕೆ ಹಿಂದಿಯಲ್ಲಿ ಹೀರೋ, ಬಂಗಿಸ್ತಾನ್, ಬ್ರದರ್ಸ್ ಸೇರಿದಂತೆ ಒಂದೆರಡು ಹಾಲಿವುಡ್ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ ಈ ಹಾಟ್ ಬೆಡಗಿ. ಅಂದಹಾಗೆ ಇಂದು (ಏ.29) ವಿಶ್ವ ಡಾನ್ಸ್ ದಿನ. ಇಂಥಹದ ಸುಸಂದರ್ಭದಲ್ಲಿ ಜಾಕ್ವೆಲಿನ್ ಅವರಿಗೆ ಕಾಕತಾಳೀಯವೆಂಬಂತೆ ಭರ್ಜರಿ ಚಾನ್ಸ್ ಸಿಕ್ಕಿದೆ. (ಏಜೆನ್ಸೀಸ್)

English summary
Jacqueline Fernandez has accepted an offer to perform at a high-profile wedding in London and has quoted Rs. 4 crore to shake a leg.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada