For Quick Alerts
  ALLOW NOTIFICATIONS  
  For Daily Alerts

  ಚಿನ್ನವನ್ನು ಉಡುಗೆಯಾಗಿ ತೊಟ್ಟ 'ವಿಕ್ರಾಂತ್ ರೋಣ' ಬೆಡಗಿ: ಬೆಲೆ ಎಷ್ಟು ಗೊತ್ತೆ?

  By ಫಿಲ್ಮಿಬೀಟ್ ಡೆಸ್ಕ್
  |

  ಚಿನ್ನವನ್ನು ಆಭರಣವಾಗಿ ಧರಿಸುವುದು ನೋಡಿದ್ದೇವೆ, ನಟಿ ಜಾಕ್ವೆಲಿನ್ ಫರ್ನಾಂಡೀಸ್ ಚಿನ್ನದ ಉಡುಗೆಯನ್ನೇ ತೊಟ್ಟಿದ್ದಾರೆ.

  'ಡ್ಯಾನ್ಸ್ ಪ್ಲಸ್ 6' ರಿಯಾಲಿಟಿ ಶೋಗೆ ಅತಿಥಿಯಾಗಿ ಆಗಮಿಸಲಿರುವ ಜಾಕ್ವೆಲಿನ್ ಫರ್ನಾಂಡೀಸ್ ಅದಕ್ಕಾಗಿ ವಿಶೇಷ ಉಡುಗೆಯನ್ನು ಡಿಸೈನ್ ಮಾಡಿಸಿಕೊಂಡಿದ್ದು, ಉಡುಗೆಯ ವಿಶೇಷತೆಯೆಂದರೆ ಈ ಉಡುಗೆ ಚಿನ್ನದ್ದು!

  ಚಿನ್ನದ ಸ್ವೆಟರ್ ಮತ್ತು ಮಿನಿ ಸ್ಕರ್ಟ್ ಅನ್ನು ಡಿಸೈನ್ ಮಾಡಿಸಿಕೊಂಡಿರುವ ಜಾಕ್ವೆಲಿನ್ ಉಡುಗೆ ತೊಟ್ಟು ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. ಜಾಕ್ವೆಲಿನ್ ಫರ್ನಾಂಡೀಸ್‌ನ ಚಿನ್ನದ ಉಡುಗೆಯ ಚಿತ್ರಗಳು ಬಹಳ ವೈರಲ್ ಆಗಿವೆ.

  ಜಾಕ್ವೆಲಿನ್ ಫರ್ನಾಂಡೀಸ್ ತೊಟ್ಟಿರುವ ಈ ಚಿನ್ನದ ಉಡುಗೆಯನ್ನು ಖ್ಯಾತ ಫ್ಯಾಷನ್ ಬ್ರ್ಯಾಂಡ್ ವ್ಯಾಲೆಂಟಿನೊ ಡಿಸೈನ್ ಮಾಡಿದೆ. ಈ ಉಡುಪಿನ ಬೆಲೆ ಮೂರು ಲಕ್ಷಕ್ಕೂ ಹೆಚ್ಚು ಎನ್ನಲಾಗುತ್ತಿದೆ.

  ಚಿನ್ನದ ಉಡುಗೆ ತೊಟ್ಟು ಮಾದಕವಾಗಿ ಫೋಸ್ ನೀಡಿರುವ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಜಾಕ್ವೆಲಿನ್. ನಟಿಯ ಸುಂದರ ಉಡುಪಿಗೆ ನೆಟ್ಟಿಗರು ಮಾರು ಹೋಗಿದ್ದು ಕೆಲವೇ ಗಂಟೆಗಳಲ್ಲಿ 1 ಮಿಲಿಯನ್‌ಗೂ ಹೆಚ್ಚು ಮಂದಿ ಚಿತ್ರಗಳನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಮಂದಿ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

  ಜಾಕ್ವೆಲಿನ್ ಫರ್ನಾಂಡೀಸ್, ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಒಂದು ಮುಖ್ಯ ದೃಶ್ಯದಲ್ಲಿ ನಟಿಸಿದ್ದಾರೆ ಸಹ ಎನ್ನಲಾಗುತ್ತಿದೆ. ಜಾಕ್ವೆಲಿನ್ ನಟಿಸಿರುವ 'ಭೂತ್ ಪೊಲೀಸ್' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಿದೆ. ಇದರ ಹೊರತಾಗಿ, 'ಕಿಕ್ 2', 'ಸರ್ಕಸ್', 'ರಾಮ್ ಸೇತು', 'ಅಟ್ಯಾಕ್' ಸಿನಿಮಾಗಳಲ್ಲಿ ಜಾಕ್ವೆಲಿನ್ ನಟಿಸುತ್ತಿದ್ದಾರೆ.

  English summary
  Actress Jacqueline Fernandez wore dress made of gold. She is appearing in reality show Dance plus 6 as guest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X