For Quick Alerts
  ALLOW NOTIFICATIONS  
  For Daily Alerts

  ಡ್ಯಾನ್ಸ್ ಶೋ ಜಡ್ಜ್ ಆಗಿದ್ದಕ್ಕೆ ಜಾಕ್ವೆಲೀನ್ ಗೆ ಸಿಗೋ ಸಂಭಾವನೆ ನೋಡಿ

  By ಸೋನು ಗೌಡ
  |

  ಬಾಲಿವುಡ್ ಗೆ ಕಾಲಿಟ್ಟ ಕಡಿಮೆ ಸಮಯದಲ್ಲಿ ಹೆಚ್ಚೆಚ್ಚು ಅವಕಾಶಗಳನ್ನು ಪಡೆಯುತ್ತಿರುವ ಶ್ರೀಲಂಕಾ ಚೆಲುವೆ ಜಾಕ್ವೆಲೀನ್ ಪೆರ್ನಾಂಡೀಸ್, ಇದೀಗ ಕಲರ್ಸ್ ಚಾನಲ್ ನಲ್ಲಿ ಪ್ರಸಾರವಾಗುತ್ತಿರುವ 'ಝಲಕ್ ಧಿಕಲಾ ಜಾ ಸೀಸನ್-9' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದಾರೆ.

  ಅಂದಹಾಗೆ ಜಾಕ್ ಡ್ಯಾನ್ಸ್ ರಿಯಾಲಿಟಿ ಶೋಗೆ ಜಡ್ಜ್ ಆಗಲು ಒಪ್ಪಿಕೊಂಡಾಗ ಹಲವರ ಮನದಲ್ಲಿ ಮೂಡಿದ ಪ್ರಶ್ನೆ ಏನಪ್ಪಾ ಅಂದ್ರೆ, ಸಿನಿಮಾದಲ್ಲೇ ಭರಪೂರ ಅವಕಾಶಗಳು ಸಿಗುತ್ತಿರಬೇಕಾದರೆ, ಯಾಕೆ ತೀರ್ಪುಗಾರರಾಗಲು ಒಪ್ಪಿಕೊಂಡರು ಅನ್ನೋದು.[ಬರೀ ಒಂದು ಫೋಟೋ ಶೂಟ್ ಗಾಗಿ ಸನ್ನಿಗೆ ಇಷ್ಟೊಂದು ದುಡ್ಡಾ.?]

  ಸಾಮಾನ್ಯವಾಗಿ ಹಿಂದಿ ಚಿತ್ರರಂಗದ ಹಿರಿಯ ನಟ-ನಟಿಯರು ಇಂತಹ ರಿಯಾಲಿಟಿ ಶೋಗಳ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ಹಿರಿತೆರೆ-ಕಿರುತೆರೆ ಎರಡನ್ನೂ ಒಟ್ಟಿಗೆ ಸರಿದೂಗಿಸಿಕೊಂಡು ಹೋಗುತ್ತಾರೆ. ಆದ್ರೆ ನಟಿ ಜಾಕ್ವೆಲೀನ್ ಹೇಗೆ ಇದಕ್ಕೆ ಒಪ್ಪಿಕೊಂಡರು ಅನ್ನೋದಕ್ಕೆ ಪ್ರಮುಖ ಕಾರಣ ಇದೆ. ಅದೇನೆಂಬುದನ್ನು ತಿಳಿಯಲು ಮುಂದೆ ಓದಿ.....

  ಕೋಟಿಗಟ್ಟಲೆ ಆಫರ್

  ಕೋಟಿಗಟ್ಟಲೆ ಆಫರ್

  ಅಂದಹಾಗೆ ಈ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಭಾಗವಹಿಸಲು ನಟಿ ಜಾಕ್ವೆಲೀನ್ ಪೆರ್ನಾಂಡೀಸ್ ಅವರಿಗೆ, ಕಾರ್ಯಕ್ರಮದ ಆಯೋಜಕರು ಕೋಟಿಗಟ್ಟಲೇ ದುಡ್ಡು ಸುರಿಯುತ್ತಿದ್ದಾರಂತೆ.['ಪದ್ಮಾವತಿ' ಚಿತ್ರಕ್ಕೆ ದೀಪಿಕಾಗೆ ಸಿಗುವ ಸಂಭಾವನೆ ಎಷ್ಟು.?]

  ಒಂದು ಎಪಿಸೋಡ್ ಗೆ ಎಷ್ಟು.?

  ಒಂದು ಎಪಿಸೋಡ್ ಗೆ ಎಷ್ಟು.?

  ಪ್ರತೀ ಎಪಿಸೋಡ್ ಗೆ ಬರೋಬ್ಬರಿ 1 ಲಕ್ಷ ರೂಪಾಯಿ ಕೊಡುತ್ತೇವೆ ಎಂದು ಆಯೋಜಕರು ಆಫರ್ ಮಾಡಿದಾಗ ಜಾಕ್ ಹೇಗೆ ಬೇಡ ಎನ್ನಲು ಸಾಧ್ಯ ಅಲ್ಲವೇ.[ಉಸ್ಸಪ್ಪಾ! 10 ನಿಮಿಷ ಕುಣಿಯಲು ಪ್ರಿಯಾಂಕ ಪಡೆದ ಸಂಭಾವನೆ ಇಷ್ಟಾ?]

  ನಟಿ ಜಾಕ್ವೆಲೀನ್ ಹೇಳೋದೇ ಬೇರೆ

  ನಟಿ ಜಾಕ್ವೆಲೀನ್ ಹೇಳೋದೇ ಬೇರೆ

  ಆದರೆ ನಟಿ ಜಾಕ್ವೆಲೀನ್ ಅವರು ಹೇಳೋದೇ ಬೇರೆ. 'ನಾನು ದುಡ್ಡಿಗಾಗಿ ಈ ಆಫರ್ ಒಪ್ಪಿಕೊಂಡಿಲ್ಲ. ಬದ್ಲಾಗಿ ನನಗೆ ಹೆಚ್ಚೆಚ್ಚು ಜನರನ್ನು ತಲುಪಬೇಕೆಂಬ ಆಸೆ, ನಾನಿನ್ನು ಜನರನ್ನು ತಲುಪುವಲ್ಲಿ ತುಂಬಾ ಹಿಂದುಳಿದಿದ್ದೇನೆ ಎಂದೆನಿಸುತ್ತಿದೆ. ಹೆಚ್ಚಿನ ಜನರಿಗೆ ನನ್ನ ಸಿನಿಮಾಗಳು ಯಾವುದು ಅಂತಾನೇ ಗೊತ್ತಿಲ್ಲ. ಇಲ್ಲಿ ನನ್ನ ಬಗ್ಗೆ ಹಾಗೂ ನನ್ನ ಸಿನಿಮಾದ ಬಗ್ಗೆ ಜನರಿಗೆ ಸುಲಭವಾಗಿ ಗೊತ್ತಾಗುತ್ತದೆ. ಅದಕ್ಕಾಗಿ ಮಾತ್ರ ನಾನು ಇಲ್ಲಿ ಕುಳಿತುಕೊಳ್ಳಲು ಒಪ್ಪಿಕೊಂಡೆ' ಎನ್ನುತ್ತಾರೆ ಜಾಕ್.

  ನಟಿಸೋದು ಸುಲಭ, ಜಡ್ಜ್ ಮಾಡೋದು ಕಷ್ಟ

  ನಟಿಸೋದು ಸುಲಭ, ಜಡ್ಜ್ ಮಾಡೋದು ಕಷ್ಟ

  ಇನ್ನು ಜಾಕ್ ಹೇಳುವ ಪ್ರಕಾರ ಸಿನಿಮಾಗಳಲ್ಲಿ ನಟಿಸೋದು ತುಂಬಾ ಸುಲಭ, ಆದ್ರೆ ಒಂದು ಸ್ಟೇಜ್ ಶೋನಲ್ಲಿ ಇತರರ ಪರ್ಪಾಮೆನ್ಸ್ ಗಳನ್ನು ಜಡ್ಜ್ ಮಾಡೋದು ಬಹಳ ಕಷ್ಟದ ಕೆಲಸವಂತೆ.

  ಹೌಸ್ ಫುಲ್ ಹಿಟ್

  ಹೌಸ್ ಫುಲ್ ಹಿಟ್

  ಜಾಕ್ವೆಲೀನ್ ಅವರು ನಟಿಸಿದ 'ಹೌಸ್ ಫುಲ್ 3' ಮತ್ತು 'ಡಿಶೂಂ' ಹಿಟ್ ಆಗಿದೆ. ಸದ್ಯಕ್ಕೆ 'ಎ ಫ್ಲೈಯಿಂಗ್ ಜಾಟ್' ತೆರೆಗೆ ಬರಲು ಸಜ್ಜಾಗಿದ್ದು, ಇದೇ ತಿಂಗಳಾಂತ್ಯದಲ್ಲಿ ತೆರೆಗೆ ಅಪ್ಪಳಿಸಲಿದೆ. ಈ ಚಿತ್ರದಲ್ಲಿ ಟೈಗರ್ ಶ್ರಾಫ್ ಅವರು ಜಾಕ್ವೆಲೀನ್ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

  English summary
  Bollywood Actress Jacqueline Fernandez turn judge with 'Jhalak Dikhla Jaa 9'. She could not resist the offer. Because She has been paid Rs 1 crore per episode.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X