For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ತಾರೆಯರಿಗೆ 'ಶೇಮ್ ಶೇಮ್' ಎನ್ನುತ್ತಿರುವ ಟ್ವೀಟಿಗರು.!

  |

  ಪೌರತ್ವ ನಿಷೇಧ ಕಾಯ್ದೆ (CAA) ವಿರೋಧಿಸಿ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿತು. ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆಯಿತು. ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನ ಖಂಡಿಸಿ ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟನೆಯ ಕಾವು ಏರಿದೆ. ದೆಹಲಿ ಪೊಲೀಸರ ಕೃತ್ಯವನ್ನ ಬಾಲಿವುಡ್ ಮಂದಿ ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ.

  ನಟಿ ಪರಿಣಿತಿ ಛೋಪ್ರಾ, ಸೋನಾಕ್ಷಿ ಸಿನ್ಹ, ಸ್ವರ ಭಾಸ್ಕರ್, ಹುಮಾ ಖುರೇಶಿ ಸೇರಿದಂತೆ ಹಲವು ಬಾಲಿವುಡ್ ತಾರೆಯರು ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿದ್ದಾರೆ.

  ಜಾಮಿಯಾ ಹಿಂಸಾಚಾರ: ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿದ ಬಾಲಿವುಡ್ ಮಂದಿಜಾಮಿಯಾ ಹಿಂಸಾಚಾರ: ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿದ ಬಾಲಿವುಡ್ ಮಂದಿ

  ವಿದ್ಯಾರ್ಥಿಗಳ ಪರವಾಗಿ ಸಾಲು ಸಾಲು ಸೆಲೆಬ್ರಿಟಿಗಳು ಟ್ವೀಟ್ ಮಾಡುತ್ತಿದ್ದಂತೆಯೇ ಟ್ವಿಟ್ಟರ್ ನಲ್ಲಿ #ShameOnBollywood #BoycottBollywood ಟ್ರೆಂಡ್ ಆಗಿದೆ. ಪೌರತ್ವ ನಿಷೇಧ ಕಾಯ್ದೆ ಪರ ನಿಂತಿರುವ ಟ್ವೀಟಿಗರು ಬಾಲಿವುಡ್ ತಾರೆಯರಿಗೆ ಶೇಮ್ ಶೇಮ್ ಎನ್ನುತ್ತಿದ್ದಾರೆ. ಬೇಕಾದ್ರೆ ನೀವೇ ಕೆಲ ಟ್ವೀಟ್ ಗಳನ್ನ ನೋಡಿ...

  ನೀವೇನ್ ಮಾಡ್ತೀರಾ.?

  ನೀವೇನ್ ಮಾಡ್ತೀರಾ.?

  ''ಪೊಲೀಸರು ಮತ್ತು ಸರ್ಕಾರದ ವಿರುದ್ಧ ದನಿ ಎತ್ತುತ್ತಿರುವ ಬಾಲಿವುಡ್ ಮಂದಿಗೆ ಒಂದು ಪ್ರಶ್ನೆ. ನಿಮ್ಮ ಮೇಲೆ ಯಾರಾದರೂ ಅಟ್ಯಾಕ್ ಮಾಡಿದರೆ ಏನು ಮಾಡ್ತೀರಾ.? ಆತ್ಮ ರಕ್ಷಣೆಗಾಗಿ ಪೊಲೀಸರು ಮಾಡಿದ್ದು ಅದನ್ನೇ.! ಇದರಲ್ಲಿ ತಪ್ಪೇನಿದೆ.? ಪೌರತ್ವ ಕಾಯ್ದೆಯನ್ನ ವಿರೋಧ ಮಾಡುತ್ತಿರುವ ನಟ-ನಟಿಯರು ಈ ದೇಶದವರಲ್ಲ. ಅದರಲ್ಲೂ ಆಲಿಯಾ ಭಟ್ ಗೆ ಬ್ರಿಟಿಷ್ ಸಿಟಿಜನ್ ಶಿಪ್ ಸಿಕ್ಕಿದೆ. ಇಂಥವರನ್ನು ನಾವೇಕೆ ಸ್ವೀಕರಿಸಬೇಕು.?'' ಎಂದು ಟ್ವೀಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

  ನಾಚಿಕೆ ಆಗಬೇಕು.!

  ನಾಚಿಕೆ ಆಗಬೇಕು.!

  ''ಹಿಂಸಾಚಾರದಲ್ಲಿ ತೊಡಗಿದ ವಿದ್ಯಾರ್ಥಿಗಳನ್ನು ಸಪೋರ್ಟ್ ಮಾಡ್ತಾರೆ ಅಂದ್ರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂಸಾಚಾರಕ್ಕೆ ತಾರೆಯರು ಬೆಂಬಲ ಕೊಡುತ್ತಿದ್ದಾರೆ. ನಿಮಗೆಲ್ಲಾ ನಾಚಿಕೆ ಆಗಬೇಕು. ಹಾನಿಯಾಗಿರುವ ಸಾರ್ವಜನಿಕ ಸ್ವತ್ತಿಗೆ ದುಡ್ಡು ಕೊಡಲು ನೀವು ಮಂದಾಗುತ್ತೀರಾ.?'' ಅಂತ ಪ್ರಶ್ನೆ ಕೇಳ್ತಿದ್ದಾರೆ ಟ್ವೀಟಿಗರು

  ಹಿಂದು ಸಂಸ್ಕೃತಿಗೆ ಬೆಲೆ ಕೊಡಲ್ಲ.!

  ಹಿಂದು ಸಂಸ್ಕೃತಿಗೆ ಬೆಲೆ ಕೊಡಲ್ಲ.!

  ''ಜಾಮಿಯಾ ಪ್ರತಿಭಟನೆಗೆ ಬಾಲಿವುಡ್ ತಾರೆಯರು ಬೆಂಬಲ ಕೊಟ್ಟಿದ್ದಾರೆ. ವಿದ್ಯಾರ್ಥಿಗಳು ನಡೆಸಿದ ಹಿಂಸಾಚಾರವನ್ನು ತಾರೆಯರು ಖಂಡಿಸಿಲ್ಲ. ಹಿಂದು ಮತ್ತು ಹಿಂದು ಸಂಸ್ಕೃತಿಯನ್ನು ಮಾತ್ರ ಬಾಲಿವುಡ್ ಮಂದಿ ವಿರೋಧಿಸುತ್ತಾರೆ. ಇಸ್ಲಾಂ ವಿರುದ್ಧ ಅವರುಗಳೆಂದೂ ಮಾತನಾಡಲ್ಲ'' ಎನ್ನುವುದು ಟ್ವೀಟಿಗರ ಅಭಿಪ್ರಾಯ.

  ಇದೆಲ್ಲ ಪಬ್ಲಿಸಿಟಿಗಾ.?

  ಇದೆಲ್ಲ ಪಬ್ಲಿಸಿಟಿಗಾ.?

  ''ಅವಕಾಶವಾದಿ ಫ್ಲಾಪ್ ತಾರೆಯರು ಇದನ್ನ ಪಬ್ಲಿಸಿಟಿಗಾಗಿ ಬಳಸಿಕೊಳ್ಳುತ್ತಿದ್ದಾರೆ'' ಅಂತಾವ್ರೆ ಟ್ವೀಟಿಗರು.

  ಇಂಥವರ ಚಿತ್ರಗಳನ್ನು ನೋಡಲ್ಲ.!

  ಇಂಥವರ ಚಿತ್ರಗಳನ್ನು ನೋಡಲ್ಲ.!

  ''ಸುಳ್ಳು ಸುದ್ದಿ ಹರಡುತ್ತಿರುವ ಬಾಲಿವುಡ್ ತಾರೆಯರ ಚಿತ್ರಗಳನ್ನು ನಾವು ನೋಡುವುದಿಲ್ಲ. #BoycottBollywood'' ಎಂಬ ಟ್ವೀಟ್ ಗಳು ಹೆಚ್ಚಾಗಿವೆ.

  English summary
  Jamia Protest: #ShameonBollywood and #BoycottBollywood trends in Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X