Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶ್ರೀದೇವಿ ಜೊತೆ ಹೋಲಿಕೆ ಬಗ್ಗೆ ಜಾಹ್ನವಿ ಕಪೂರ್ ಹೇಳಿದ್ದೇನು?
ಭಾರತೀಯ ಚಿತ್ರರಂಗದ ಎವರ್‌ಗ್ರೀನ್ ನಟಿ ಶ್ರೀದೇವಿ. ಈಕೆಯ ಸೌಂದರ್ಯ ಹಾಗೂ ಅಭಿನಯಕ್ಕೆ ಮಾರುಹೋಗದವರಿಲ್ಲ. ಅದಕ್ಕೆ ಶ್ರೀದೇವಿಯನ್ನು 'ಅತಿಲೋಕ ಸುಂದರಿ' ಎಂದೇ ಕರೆಯುತ್ತಿದ್ದರು. ಒಂದು ಸಮಯದ ಸೂಪರ್‌ಸ್ಟಾರ್ ನಟರೆಲ್ಲಾ ತನ್ನ ಚಿತ್ರಕ್ಕೆ ಶ್ರೀದೇವಿ ಹೀರೋಯಿನ್ ಆಗ್ಬೇಕು ಎಂದು ಕಾದು ಸಿನಿಮಾ ಮಾಡಿದ ಉದಾಹರಣೆಗಳಿವೆ.
ಶ್ರೀದೇವಿ ನಿಧನ ಬಳಿಕ ಅವರ ಮಗಳು ಜಾಹ್ನವಿ ಕಪೂರ್ ಚಿತ್ರರಂಗ ಪ್ರವೇಶಿಸಿದರು. ತಾಯಿಯ ಪ್ರತಿರೂಪವನ್ನೇ ಹೋಲುತ್ತಿದ್ದ ಜಾಹ್ನವಿ ಕಪೂರ್ ಮುಂದಿನ ಶ್ರೀದೇವಿ ಎಂಬ ಅಭಿಪ್ರಾಯಗಳು ಹುಟ್ಟಿಕೊಂಡವು. ಧಡಕ್ ಚಿತ್ರದ ಮೂಲಕ ಬಿಟೌನ್ ಪ್ರವೇಶಿಸಿದ ಜಾಹ್ನವಿ ಅಭಿನಯದಲ್ಲಿ ಗಮನ ಸೆಳೆದರು. 'ಗುಂಜಾನ್ ಸಕ್ಸೇನಾ' ಚಿತ್ರದಲ್ಲಿಯೂ ಒಳ್ಳೆಯ ಅಭಿನಯ ಇತ್ತು. ಶ್ರೀದೇವಿ ಮಗಳು ಎಂಬ ಒತ್ತಡ ಹಾಗೂ ನಿರೀಕ್ಷೆ ಹೆಚ್ಚಿದೆ. ಈ ಬಗ್ಗೆ ಜಾಹ್ನವಿ ಕಪೂರ್ ಮಾತನಾಡಿದ್ದಾರೆ. ಮುಂದೆ ಓದಿ...

ಅದು ಒತ್ತಡ ಅಲ್ಲ, ಜವಾಬ್ದಾರಿ
ಶ್ರೀದೇವಿ ಮಗಳು ಎನ್ನುವ ಕಾರಣಕ್ಕೆ ಜಾಹ್ನವಿ ಕಪೂರ್ ಮೇಲೆ ಸಹಜವಾಗಿ ನಿರೀಕ್ಷೆಗಳು ಹೆಚ್ಚಿದೆ. ಒಳ್ಳೊಳ್ಳೆ ಸಿನಿಮಾಗಳು, ಅದ್ಭುತ ಅಭಿನಯ ನೀಡಬೇಕು, ಶ್ರೀದೇವಿಯಂತೆ ಮಗಳು ಯಶಸ್ಸು ಸಾಧಿಸಬೇಕು ಎಂಬ ಒತ್ತಡ ಇಂಡಸ್ಟ್ರಿಯಲ್ಲಿದೆ. ಈ ಬಗ್ಗೆ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಪ್ರಶ್ನಿಸಿದ ವೇಳೆ ಉತ್ತರಿಸಿದ ಜಾಹ್ನವಿ ''ಅದು ಒತ್ತಡವಲ್ಲ, ನನ್ನ ಜವಾಬ್ದಾರಿ'' ಎಂದಿದ್ದಾರೆ.
ಶ್ರೀದೇವಿಯನ್ನು
ಮದುವೆಯಾಗುವಂತೆ
ಕಮಲ್
ಹಾಸನ್ಗೆ
ಒತ್ತಾಯ
ಮಾಡಿದ್ಯಾರು?
ಕಮಲ್
ರಿಜೆಕ್ಟ್
ಮಾಡಿದ್ದೇಕೆ?

ತಾಯಿಯ ಜೊತೆ ಹೋಲಿಕೆ ಖುಷಿ ಕೊಡುತ್ತೆ
''ಶ್ರೀದೇವಿ ಮಗಳು ಎನ್ನುವ ಕಾರಣಕ್ಕೆ ನನಗೆ ಸಾಕಷ್ಟು ಅವಕಾಶ ಇದೆ. ತುಂಬಾ ಪ್ರೀತಿ ಸಿಕ್ಕಿದೆ. ಬಹುಶಃ ಅದಕ್ಕೆ ನಾನು ಅರ್ಹವಾಗಿರಲಿಲ್ಲ. ಜನರು ನನ್ನ ಮೇಲೆ ಹೆಚ್ಚು ನಿರೀಕ್ಷೆ ಹೊಂದಿದ್ದಾರೆ. ಅದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ನನ್ನ ತಾಯಿ ಜೊತೆ ಹೋಲಿಸುವ ಬಗ್ಗೆ ಖುಷಿ ಇದೆ, ಏಕಂದ್ರೆ ಅತ್ಯುತ್ತಮ ಎನ್ನುವವರ ಜೊತೆ ಏಕೆ ಹೋಲಿಸಬಾರದು ಅಲ್ವಾ'' ಎಂದು ಹೇಳಿಕೊಂಡಿದ್ದಾರೆ.

ಶ್ರೀದೇವಿ ಪಾತ್ರದಲ್ಲಿ ಜಾಹ್ನವಿ
ಒಂದು ವೇಳೆ ಬಾಲಿವುಡ್‌ನಲ್ಲಿ ಶ್ರೀದೇವಿ ಬಯೋಪಿಕ್ ತಯಾರಾದರೆ, ಆ ಪಾತ್ರದಲ್ಲಿ ಜಾಹ್ನವಿ ಕಪೂರ್ ನಟಿಸಬೇಕು ಎಂದು ಲೆಜೆಂಡ್ ನೃತ್ಯ ಸಂಯೋಜಕಿ ಸರೋಜ್ ಖಾನ್ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಶ್ರೀದೇವಿ
ಪುತ್ರಿ
ಮುಂದೆ
ಬೇಡಿಕೆಯಿಟ್ಟ
ಲೆಜೆಂಡ್
ನೃತ್ಯ
ಸಂಯೋಜಕಿ
ಸರೋಜ್
ಖಾನ್
ಪುತ್ರಿ
Recommended Video

ದೋಸ್ತಾನ 2 ಚಿತ್ರದಲ್ಲಿ ಜಾಹ್ನವಿ
ಕರಣ್ ಜೋಹರ್ ನಿರ್ಮಾಣದ ದೋಸ್ತಾನ 2 ಚಿತ್ರದಲ್ಲಿ ಜಾಹ್ನವಿ ಕಪೂರ್ ನಟಿಸಿದ್ದಾರೆ. ಸಿದ್ಧಾರ್ಥ್ ಸೇನಗುಪ್ತಾ ನಿರ್ದೇಶನದ ಗುಡ್ ಲಕ್ ಜೆರ್ರಿ ಸಿನಿಮಾದಲ್ಲೂ ಜಾಹ್ನವಿ ಅಭಿನಯಿಸಿದ್ದು, ಈ ಎರಡು ಚಿತ್ರಗಳು ಶೂಟಿಂಗ್ ಮುಗಿಸಿದೆ. ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಮೇಲೆ ತೆರೆಗೆ ಬರಲಿದೆ.