For Quick Alerts
  ALLOW NOTIFICATIONS  
  For Daily Alerts

  ಶ್ರೀದೇವಿ ಪುತ್ರಿಯ ಸಂಭಾವನೆ ಕೇಳಿದ್ರೆ ಅಚ್ಚರಿ ಪಡುತ್ತೀರಿ

  |

  'ಧಡಕ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಚಿತ್ರದಲ್ಲೆ ಅಭಿಮಾನಿಗಳ ಮನಗೆದ್ದಿರುವ ಜಾನ್ಹವಿ ಸದ್ಯ ಬಾಲಿವುಡ್ ನ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಬೇಡಿಕೆ ಜೊತೆಗೆ ಜಾನ್ಹವಿ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

  ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತೀಯ ಚಿತ್ರರಂಗದ ಕಡೆಯು ಮುಖ ಮಾಡಿರುವ ಜಾನ್ಹವಿ ಈಗ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಹೌದು, ಜಾನ್ಹವಿ ದಕ್ಷಿಣ ಭಾರತೀಯ ಚಿತ್ರರಂಗದ ಸೆನ್ಸೇಶನ್ ನಟ ವಿಜಯ್ ದೇವರಕೊಂಡಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗಾಗಿ ಜಾನ್ಹವಿ ಬರೋಬ್ಬರಿ 3.5 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ.

  ಸಿಂಪಲ್ ಸಲ್ವಾರ್ ಧರಿಸಿದ್ದರೂ ಟ್ರೋಲ್ ಆದ ಜಾಹ್ನವಿ ಕಪೂರ್.! ಕಾರಣ ಏನು.?ಸಿಂಪಲ್ ಸಲ್ವಾರ್ ಧರಿಸಿದ್ದರೂ ಟ್ರೋಲ್ ಆದ ಜಾಹ್ನವಿ ಕಪೂರ್.! ಕಾರಣ ಏನು.?

  ಜಾನ್ಹವಿ ಅಭಿನಯದ ಮೊದಲ ಸಿನಿಮಾ ಧಡಕ್ ರಿಲೀಸ್ ಆಗಿ ಎರಡು ವರ್ಷದ ಮೇಲಾಗಿದೆ. ಆ ನಂತರ ಜಾನ್ಹವಿ ಮತ್ತೆ ತೆರೆಮೇಲೆ ಬಂದಿಲ್ಲ. ಆದರೆ ಜಾನ್ಹವಿ ಖ್ಯಾತಿ ಮಾತ್ರ ಉತ್ತುಂಗಕ್ಕೆ ಏರುತ್ತಿದೆ. ಸದಾ ಸುದ್ದಿಯಲ್ಲಿ ಇರುವ ಜಾನ್ಹವಿ ಮುಂದಿನ ಸಿನಿಮಾಗಳಿಗೆ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ.

  ವಿಜಯ್ ದೇವರಕೊಂಡ ಅಭಿನಯದ ಫೈಟರ್ ಚಿತ್ರಕ್ಕೆ ಜಾನ್ಹವಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚಿತ್ರಕ್ಕೆ ಖ್ಯಾತ ನಿರ್ದೇಶಕ ಪುರಿ ಜಗ್ನಾಥ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜಾನ್ಹವಿ ಸದ್ಯ ಗುಂಜನ್ ಸಕ್ಸೇನಾ, ರೂಹಿ ಅಫ್ಜಾ, ದೋಸ್ತಾನ-2 ಚಿತ್ರಗಳಲ್ಲಿ ಬ್ಯುಸಿದ್ದಾರೆ. ಇದರ ಜೊತೆಗೆ ಗೋಸ್ಟ್ ಸ್ಟೋರೀಸ್ ವೆಬ್ ಸಿರೀಸ್ ನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಜಾನ್ಹವಿ ಬೇಡಿಕೆಯನ್ನು ಹೆಚ್ಚಿಕೊಳ್ಳುವ ಜೊತೆಗೆ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ.

  English summary
  Bollywood Actress Janhvi Kapoor demands high remuneration for Vijay Devarakonda movie. Janhvi Kapoor has female lead for Vijay Devarakonda starrer Fighter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X